ಕರ್ನಾಟಕ

karnataka

ETV Bharat / sitara

ಕನ್ನಡದ ದಮಯಂತಿ​​ಗೆ ಪರಭಾಷೆಯಿಂದ ಭಾರೀ ಬೇಡಿಕೆ...!

ಟಾಕಿ ಪೋರ್ಷನ್ ಶೂಟಿಂಗ್ ಕಂಪ್ಲೀಟ್ ಮಾಡಿದ 'ದಮಯಂತಿ'

ದಮಯಂತಿ ಶೂಟಿಂಗ್​ ಮುಕ್ತಾಯ

By

Published : Mar 13, 2019, 10:55 AM IST

ಸ್ಯಾಂಡಲ್​​ವುಡ್ ಸ್ವೀಟಿ ರಾಧಿಕಾ ಕುಮಾರ ಸ್ವಾಮಿ ಅಭಿನಯದ, ನವರಸನ್ ನಿರ್ದೇಶನದ ಬಹುಕೋಟಿ ವೆಚ್ಚದ 'ದಮಯಂತಿ' ಚಿತ್ರದ ಟಾಕಿ ಪೋರ್ಷನ್ ಶೂಟಿಂಗ್ ಕಂಪ್ಲೀಟಾಗಿದೆ. ಚಿತ್ರದ ಎರಡು ಹಾಡುಗಳು ಶೂಟಿಂಗ್​ ಬ್ಯಾಲೆನ್ಸಿದ್ದು, ಅಕ್ಟೋಬರ್​​​ನಲ್ಲಿ ಚಿತ್ರ ರಿಲೀಸ್​ಗೆ ನಿರ್ದೇಶಕರು ಪ್ಲಾನ್​ ಮಾಡಿದ್ದಾರೆ.

'ಭೈರಾದೇವಿ' ಶೂಟಿಂಗ್ ವೇಳೆ ಗಾಯಗೊಂಡಿದ್ದ ರಾಧಿಕಾ ಚೇತರಿಸಿಕೊಂಡು ಮಾರ್ಚ್ 5 ರಿಂದ 'ದಮಯಂತಿ' ಶೂಟಿಂಗ್​​ಗೆ ಹಾಜರಾಗಿದ್ದರು. ನಿನ್ನೆ ಕಂಠೀರವ ಸ್ಟೂಡಿಯೋದಲ್ಲಿ ರಾಧಿಕಾ ದಮಯಂತಿ ಧರ್ಮಾಸ್ಪತ್ರೆ ಉದ್ಘಾಟನೆ ಮಾಡುವ ಸನ್ನಿವೇಶ ಸೆರೆ ಹಿಡಿಯವ ಮೂಲಕ ಚಿತ್ರೀಕರಣ ಮುಕ್ತಾಯಗೊಂಡಿತು.

ದಮಯಂತಿ ಚಿತ್ರ 80ರ ದಶಕದ ಕಥೆ. ಇದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿರುವ ರಾಧಿಕಾ, ಇದುವರೆಗೂ ಕನ್ನಡದಲ್ಲಿ ಯಾರೂ ಮಾಡದ ಪಾತ್ರ ನಾನು ಮಾಡಿದ್ದೇನೆ ಎನ್ನುತ್ತಾರೆ.ಇದು ಮಹಿಳಾ ಪ್ರಧಾನ ಚಿತ್ರ. ಇಲ್ಲಿ ನನ್ನ ಪಾತ್ರಕ್ಕೆ ಬಹಳ ಪ್ರಾಮುಖ್ಯತೆಯಿದೆ. ಅಲ್ಲದೆ ದಮಯಂತಿ ನೊಂದ ಜನರ ನೆರವಿಗೆ ಬರುವ ಪಾತ್ರವಾಗಿದ್ದು, ಡಬಲ್ ಶೇಡ್​​ನಲ್ಲಿ ಕಾಣಿಸಿಕೊಂಡಿದ್ದೇನೆ ಎಂದರು ರಾಧಿಕಾ.

ದಮಯಂತಿ ಶೂಟಿಂಗ್​ ಮುಕ್ತಾಯ

ಸ್ಯಾಂಡಲ್​​​ವುಡ್​​ನಲ್ಲೇ ಇಂತಹ ಚಿತ್ರ ಯಾರೂ ಮಾಡಿಲ್ಲ. 80ರ ದಶಕದ ಕಥೆಗೆ ಹಾರರ್ ಟಚಪ್ ಕೊಟ್ಟು ನಿರ್ದೇಶನ ಮಾಡ್ತಿದ್ದೀನೆ ಎನ್ನುತ್ತಾರೆ ನವರಸನ್​​. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಅಲ್ಲದೆ ತಮಿಳು, ತೆಲುಗಿನಂದ ರೈಟ್ಸ್​​ಗೆ ಈಗಾಗಲೇ ಬೇಡಿಕೆ ಬಂದಿದೆ ಎಂದರು.

ಅಲ್ಲದೆ ಚಿತ್ರದಲ್ಲಿ ಭಜರಂಗಿ ಲೋಕಿ ನೆಗೆಟಿವ್ ಶೇಡ್​​​ನಲ್ಲಿ ಕಾಣಿಸಿಕೊಂಡಿದ್ದಾರೆ. ಮಿಸ್ಟರ್ ಮೊಮ್ಮಗ ಚಿತ್ರದ ನಾಯಕ ರವಿ ಈ ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ ಗಂಡನ ಪಾತ್ರದಲ್ಲಿ, ತಂದೆಯ ಪಾತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅವರ ಆಪ್ತಮಿತ್ರ ರಾಜವರ್ಧನ್ ನಟಿಸಿದ್ದಾರೆ. ರಾಜವರ್ಧನ್ ಈ ಚಿತ್ರದಲ್ಲಿ ನಟಿಸಲು ರಜನಿಕಾಂತ್ ಅವರ ಸಮಾಜ ಸೇವೆಯೇ ಸ್ಫೂರ್ತಿಯಂತೆ.

ABOUT THE AUTHOR

...view details