ಬೆಂಗಳೂರು: ಇತ್ತೀಚೆಗೆ ಹೃದಯಸ್ತಂಭನದಿಂದ ನಿಧನರಾದ ಸ್ಯಾಂಡಲ್ವುಡ್ನ ಯುವರತ್ನ ಪುನೀತ್ ರಾಜ್ಕುಮಾರ್ ಅವರಿಗೆ ನುಡಿ ನಮನ(Puneet Naman program) ಕಾರ್ಯಕ್ರಮ ನಡೆಯುತ್ತಿದೆ. ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ ಅಂಗಳದಲ್ಲಿ ಈಗಾಗಲೇ ಕಾರ್ಯಕ್ರಮ ಆರಂಭವಾಗಿದೆ.
'ಪುನೀತ್ ನಮನ' ಕಾರ್ಯಕ್ರಮದಲ್ಲಿ ಪತ್ನಿ ಅಶ್ವಿನಿ ಕಣ್ಣೀರು.. - ಅಶ್ವಿನಿ ಪುನೀತ್ ರಾಜ್ಕುಮಾರ್
'ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್(Puneeth Rajkumar wife Ashwini) ಅಗಲಿದ ಪತಿಯನ್ನು ನೆನೆದು ಭಾವುಕರಾಗಿದ್ದು, ಕಣ್ಣೀರು ಹಾಕಿದ್ದಾರೆ.
Puneeth Rajkumar wife ashwini
ಈ ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಪುನೀತ್ ರಾಜ್ ಕುಮಾರ್(puneeth rajkumar) ಅವರ ಪತ್ನಿ ಅಶ್ವಿನಿ ಅಗಲಿರುವ ಪತಿಯನ್ನ ನೆನೆದು ಭಾವುಕರಾಗಿದ್ದು, ಕಣ್ಣೀರು ಹಾಕಿದ್ದಾರೆ. 'ಪುನೀತ್ ನಮನ' ಕಾರ್ಯಕ್ರಮದ ವೇಳೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ಮತ್ತು ಕಿರಿಯ ಪುತ್ರಿ ಆಗಮಿಸಿದ್ದರು. ವೇದಿಕೆಯ ಮುಂದಿನ ಆಸನದಲ್ಲಿ ಆಸೀನರಾದ ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ ದುಃಖ ತಪ್ತರಾದರು.
ಇದನ್ನೂ ಓದಿರಿ:ಬೆಂಗಳೂರಿನಲ್ಲಿ 'ಪುನೀತ್ ನಮನ' ಕಾರ್ಯಕ್ರಮ ಆರಂಭ: Live Updates