ಕರ್ನಾಟಕ

karnataka

ETV Bharat / sitara

'ಅಪ್ಪು' ಕಂಠದಲ್ಲಿ ಅಪ್ಪನ ನೆನಪುಗಳು.. ಮತ್ತೆ ಮತ್ತೆ ಜೀವಿಸುತ್ತಿದ್ದ 'ರಾಜ್​' - ತಂದೆ ಹಾಡು ಹಾಡಿದ ಪುನೀತ್​ ರಾಜ್​ಕುಮಾರ್​​

ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್‍ಕುಮಾರ್, ಅಪ್ಪನ ಬಗ್ಗೆ ಹುಟ್ಟು ಹಬ್ಬಕ್ಕೆ ವಿಶೇಷ ಹಾಡೊಂದನ್ನು ಹಾಡುವ ಮೂಲಕ ತಂದೆಯ ಜೊತೆಗಿನ ಬಾಂಧವ್ಯ ಬಿಚ್ವಿಟ್ಟಿದ್ದರು..

puneeth-rajkumar-singing-his-father-rajkumar-song
ಪುನೀತ್​​

By

Published : Oct 29, 2021, 8:53 PM IST

ಪಾರ್ವತಮ್ಮ ಹಾಗೂ ಡಾ. ರಾಜ್​ ಕುಮಾರ್ ಅವರಿಗೆ ಕೊನೆಯ ಮಗ ಅಪ್ಪು ಅಂದ್ರೆ ತುಂಬಾ ಇಷ್ಟ. ಪುನೀತ್​​ ಅವರಿಗೆ ರಾಜಣ್ಣ, ಪಾರ್ವತಮ್ಮನವರೇ ಪ್ರಪಂಚ.

ದೊಡ್ಡಮನೆಯ ಮುದ್ದಿನ ಮಗನಾಗಿದ್ದ 'ಅಣ್ಣಾ ಬಾಂಡ್​​' ಅಪ್ಪ- ಅಮ್ಮನ ಹುಟ್ಟು ಹಬ್ಬವನ್ನು ಯಾವಾಗ್ಲೂ ವಿಶೇಷವಾಗಿ ಆಚರಿಸುತ್ತಾ ಬಂದಿದ್ರು. ಕೆಲ ದಿನಗಳ ಹಿಂದೆ ತಂದೆಯ ಹಾಡನ್ನು ಹಾಡುವ ಮೂಲಕ ರಾಜ್​ಕುಮಾರ್ ಅವರನ್ನ ನೆನೆದಿದ್ದರು.

'ಅಪ್ಪು' ಕಂಠದಲ್ಲಿ ಅಪ್ಪನ ನೆನಪುಗಳು..

ವರನಟ ಡಾ. ರಾಜ್‌ ಕುಮಾರ್ ಅವರ 92ನೇ ಹುಟ್ಟಿದ ಹಬ್ಬದಂದು ರಾಜ್ಯಾದ್ಯಂತ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ರಾಜಕೀಯ ಗಣ್ಯರು ಹಾಗೂ ಸಿನಿಮಾ ತಾರೆಯರು ಅಣ್ಣಾವ್ರ ಹುಟ್ಟು ಹಬ್ಬದ ಬಗ್ಗೆ ಸ್ಮರಿಸಿಕೊಂಡಿದ್ರು.

ಇಂತಹ ಸಮಯದಲ್ಲಿ ಅಣ್ಣಾವ್ರ ಮುದ್ದಿನ ಮಗ ಪುನೀತ್ ರಾಜ್‍ಕುಮಾರ್, ಅಪ್ಪನ ಬಗ್ಗೆ ಹುಟ್ಟು ಹಬ್ಬಕ್ಕೆ ವಿಶೇಷ ಹಾಡೊಂದನ್ನು ಹಾಡುವ ಮೂಲಕ ತಂದೆಯ ಜೊತೆಗಿನ ಬಾಂಧವ್ಯ ಬಿಚ್ವಿಟ್ಟಿದ್ದರು.

'ನಿನ್ನ ಕಂಗಳ ಬಿಸಿಯ ಹನಿಗಳು ನೂರು ಕಥೆಯ ಹೇಳಿವೆ' ಎಂದು ಆರಂಭವಾಗುವ ಹಾಡು ಅರ್ಥಪೂರ್ಣವಾಗಿ ಭಾವನಾತ್ಮಕವಾಗಿ ಮೂಡಿ ಬಂದಿತ್ತು. ಪುನೀತ್ ರಾಜ್ ಕುಮಾರ್ ತಂದೆಯನ್ನ ಎಷ್ಟು ಪ್ರೀತಿಸುತ್ತಾರೆ, ತಂದೆ ಜೊತೆ ಅಳಿಸಲಾಗದ ಬಾಂಧವ್ಯ ಎಷ್ಟಿತ್ತು ಎಂಬುದನ್ನ ಆ ಹಾಡಿನಲ್ಲಿ ನೋಡಬಹುದಾಗಿತ್ತು.

ಆ ಹಾಡು ಸೋಷಿಯಲ್ ಮೀಡಿಯಾಗೆ ಶೇರ್ ಮಾಡ್ತಾ ಇದ್ದಂತೆ 3 ಲಕ್ಷಕ್ಕೂ ಹೆಚ್ಚು ಜನರು ಈ ಹಾಡನ್ನ ನೋಡಿ ಮೆಚ್ಚಿಕೊಂಡಿದ್ದರು. ಆದ್ರೆ, ಇಂದು ಅಪ್ಪನನ್ನು ಬಹಳ ಸಮಯ ಬಿಟ್ಟಿರಲಾರದೇ ಪುನೀತ್‌​ ರಾಜ್​ಕುಮಾರ್​ ಅವರ ಸಾನಿಧ್ಯ ಸೇರಿದ್ದಾರೆ.

ABOUT THE AUTHOR

...view details