ಕನ್ನಡ ಚಿತ್ರರಂಗ ಅಲ್ಲದೇ ವಿಶ್ವಾದ್ಯಂತ ಹೈ ಫಿವರ್ ಹೊಂದಿರುವ ಜೇಮ್ಸ್ ಸಿನಿಮಾ ಬಿಡುಗಡೆಗೆ ಕೆಲವೇ ಗಂಟೆಗಳು ಬಾಕಿ ಇದೆ. ದೊಡ್ಮನೆ ರಾಜಕುಮಾರ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಕೊನೆಯ ಸಿನಿಮಾ ಜೇಮ್ಸ್ ನಾಳೆ ವಿಶ್ವಾದ್ಯಂತ ಸಿಲ್ವರ್ ಸ್ಕ್ರೀನ್ ಮೇಲೆ ರಾರಾಜಿಸಲಿದೆ.
ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ತೆರೆ ಕಾಣುತ್ತಿರುವ ಜೇಮ್ಸ್ ಜಾತ್ರೆ ಮಾಡಲು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಇದೇ ಮೊದಲ ಬಾರಿಗೆ ಕನ್ನಡ ಸಿನಿಮಾ ಜೇಮ್ಸ್ ವಿಶ್ವದೆಲ್ಲೆಡೆ 4000 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದೆ.
ಅಮೆರಿಕಾದಲ್ಲಿ ಜೇಮ್ಸ್ ಚಿತ್ರಕ್ಕೆ ಭಾರೀ ಬೇಡಿಕೆ ಇರುವುದರಿಂದ 32 ರಾಜ್ಯಗಳಲ್ಲಿ ನೂರಕ್ಕೂ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಇನ್ನು ಆಸ್ಟ್ರೇಲಿಯಾದಲ್ಲಿ ಸೆನ್ಸಾರ್ ಆದ ಮೊದಲ ಕನ್ನಡ ಸಿನಿಮಾ ಜೇಮ್ಸ್ ಆಗಿದ್ದು, ಆಸ್ಟ್ರೇಲಿಯಾದಲ್ಲಿ 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ.
ಕೆನಡಾದ 12 ಪ್ರದೇಶಗಳಲ್ಲಿ ಜೇಮ್ಸ್ ಸಿನಿಮಾ ಬಿಡುಗಡೆಯಾಗುತ್ತಿದೆ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗು ಮಲ್ಟಿಪ್ಲೆಕ್ಸ್ ಸೇರಿದಂತೆ ಬರೋಬ್ಬರಿ 750 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಜೇಮ್ಸ್ ಸಿನಿಮಾ ರಿಲೀಸ್ ಆಗುತ್ತಿದೆ.
ಬೆಂಗಳೂರು ಹಾಗು ಕರ್ನಾಟಕ ಸೇರಿದಂತೆ 350 ಚಿತ್ರಮಂದಿಗಳಲ್ಲಿ ಮುಂಜಾನೆ 5.30ಕ್ಕೆ ಶೋ ಆರಂಭ ಆಗುತ್ತಿದೆ. ಬೆಂಗಳೂರಿನಲ್ಲಿ ತ್ರಿವೇಣಿ, ವಿರೇಶ್, ಪ್ರಸನ್ನ, ವೀರಭದ್ರೇಶ್ವರ, ಲಕ್ಷ್ಮೀ, ಬಾಲಾಜಿ, ಶ್ರೀನಿವಾಸ್ ಸೇರಿದಂತೆ ಬೆಂಗಳೂರಿನಲ್ಲಿ 80ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮುಂಜಾನೆ 5.30ಕ್ಕೆ ಶೋ ಆರಂಭ ಆಗುತ್ತಿದೆ.
ಬೆಂಗಳೂರಿನ ಕಾವೇರಿ ಚಿತ್ರಮಂದಿರದಲ್ಲಿ ಮೊದಲ ದಿನದ 5 ಸಾವಿರ ಟಿಕೇಟ್ ಮಾರಾಟ ಆಗಿದೆ. ಕರ್ನಾಟಕದೆಲ್ಲೆಡೆ ಜೇಮ್ಸ್ ಸಿನಿಮಾ ಬರೋಬ್ಬರಿ 3000 ಶೋಗಳು ಪ್ರದರ್ಶನಗೊಳ್ಳುತ್ತಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ದಾಖಲೆ ಬರೆಯಲಿದೆ. ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಮೊದಲ ದಿನದ ಎಲ್ಲ ಪ್ರದರ್ಶನದ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ.
ಮೈಸೂರಿನಲ್ಲಿ ಮೊದಲ ದಿನದ ಎಲ್ಲಾ ಟಿಕೆಟ್ಗಳು ಸೋಲ್ಡ್ ಔಟ್ ಆಗಿದೆ. ಇದರ ಜೊತೆಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಮೂನ್ನೂರಕ್ಕೂ ಅಧಿಕ ಸ್ಕ್ರೀನ್ನಲ್ಲಿ ಜೇಮ್ಸ್ ಬಿಡುಗಡೆ ಆಗುತ್ತಿದೆ. ತಮಿಳುನಾಡಿನಲ್ಲಿ ಇನ್ನೂರಕ್ಕೂ ಹೆಚ್ಚಿನ ಸ್ಕ್ರೀನ್ನಲ್ಲಿ ಇಂದಿನಿಂದ ಜೇಮ್ಸ್ ಪ್ರದರ್ಶನ ಕೇರಳದಲ್ಲಿ 150 ಮಹಾರಾಷ್ಟ್ರದಲ್ಲಿ 200ಕ್ಕೂ ಅಧಿಕ ಸ್ಕ್ರೀನ್ ಜೇಮ್ಸ್ಮಯ ಆಗಿದೆ.
ಕೊಲ್ಕತ್ತಾ, ದೆಹಲಿ, ಪುಣೆಯಲ್ಲಿ ನೂರಕ್ಕೂ ಅಧಿಕ ಸ್ಕ್ರೀನ್ನಲ್ಲಿ ಜೇಮ್ಸ್ ಬಿಡುಗಡೆ ಆಗುತ್ತಿರುವುದು ಕನ್ನಡ ಚಿತ್ರರಂಗದಲ್ಲಿ ಇದೇ ಮೊದಲು.
ಇದನ್ನೂ ಓದಿ:ಆರ್ಥಿಕ ಅಭಿವೃದ್ದಿ ಸಾಧಿಸಲು ಶಕ್ತಿಮೀರಿ ಪ್ರಯತ್ನ: ಸಿಎಂ ಬಸವರಾಜ ಬೊಮ್ಮಾಯಿ