ಬೆಂಗಳೂರು: ನಟ ಪುನೀತ್ ರಾಜ್ ಕುಮಾರ್ ಸಾವಿನ ಕುರಿತು ಸಂಪೂರ್ಣ ತನಿಖೆ ನಡೆಸುವಂತೆ ನಗರದ ಉತ್ತರ ವಿಭಾಗದ ಸದಾಶಿವನಗರ ಠಾಣೆಗೆ ಪುನೀತ್ ರಾಜಕುಮಾರ್ ಅಭಿಮಾನಿ ಅರುಣ್ ಪರಮೇಶ್ವರ್ ದೂರು ನೀಡಿದ್ದಾರೆ.
ಅಪ್ಪು ಅಭಿಮಾನಿಯಿಂದ ಪೊಲೀಸರಿಗೆ ಕಂಪ್ಲೇಂಟ್; ದೂರಿನಲ್ಲಿ ಏನಿದೆ? - ಪುನೀತ್ ರಾಜ್‌ಕುಮಾರ್ ಸಾವು ಪ್ರಕರಣ
ಪುನೀತ್ ರಾಜ್‌ಕುಮಾರ್ ಅವರಿಗೆ ರಮಣಶ್ರೀ ಆಸ್ಪತ್ರೆಯಲ್ಲಿ ಯಾವ ಯಾವ ಚಿಕಿತ್ಸೆ ನೀಡಲಾಯಿತು, ರಮಣಶ್ರೀ ಆಸ್ಪತ್ರೆಯವರು ಯಾಕೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ ಎನ್ನುವುದರ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ಕೊಡಬೇಕು ಎಂದು ಅಪ್ಪು ಅಭಿಮಾನಿ ಅರುಣ್ ಪರಮೇಶ್ವರ್ ಎಂಬುವರು ಒತ್ತಾಯಿಸಿದ್ದಾರೆ. ಅಲ್ಲದೆ, ಈ ಸಂಬಂಧ ಉತ್ತರ ವಿಭಾಗದ ಸದಾಶಿವನಗರ ಠಾಣೆಗೆ ದೂರನ್ನು ಸಹ ನೀಡಿದ್ದಾರೆ.
ರಮಣಶ್ರೀ ಆಸ್ಪತ್ರೆಯಲ್ಲಿ ಪುನೀತ್‌ಗೆ ಯಾವ ಯಾವ ಚಿಕಿತ್ಸೆಯನ್ನು ನೀಡಲಾಯಿತು, ರಮಣಶ್ರೀ ಆಸ್ಪತ್ರೆಗೆ ಹೋದ ಸಮಯ, ಸಿಸಿಟಿವಿ ವಿಡಿಯೋಗಳನ್ನು ವೈದ್ಯರು ಬಹಿರಂಗ ಪಡಿಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವಿಕ್ರಮ್ ಆಸ್ಪತ್ರೆಗೆ ತಡವಾಗಿ ಹೋಗಲು ಕಾರಣ ನೀಡಬೇಕು. ರಮಣಶ್ರೀ ಆಸ್ಪತ್ರೆಯವರು ಯಾಕೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಲ್ಲ ಎನ್ನುವುದು ರಾಜ್ಯದ ಜನರಿಗೆ ಮಾಹಿತಿ ಕೊಡಬೇಕು. ಈ ಕುರಿತು ಸಮಗ್ರ ತನಿಖೆ ಮಾಡಿ ಸತ್ಯಾಸತ್ಯತೆಯನ್ನು ಜನರ ಮುಂದಿಡಬೇಕು ಎಂದು ಪೊಲೀಸರಿಗೆ ಅಪ್ಪು ಅಭಿಮಾನಿ ಮನವಿ ಮಾಡಿದ್ದಾರೆ.
ಸದಾಶಿವನಗರ ಠಾಣೆಯ ಪೊಲೀಸರು ದೂರು ಸ್ವೀಕರಿಸಿದ್ದು, ತನಿಖೆ ನಡೆಸಿ ಮುಂದಿನ ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.