ಕರ್ನಾಟಕ

karnataka

ETV Bharat / sitara

'ಸಾರ್ವಜನಿಕರಿಗೆ ಸುವರ್ಣಾವಕಾಶ' ಎನ್ನುತ್ತಿದ್ದಾರೆ ಪುನೀತ್ ರಾಜ್​​ಕುಮಾರ್​​​​​...! - ಪೋಸ್ಟ್ ಪ್ರೊಡಕ್ಷನ್

ನಟ ರಿಷಿ ಅಭಿನಯದ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದ ಹಾಡೊಂದನ್ನು ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹಾಡಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಚಿತ್ರವನ್ನು ನಿರ್ದೇಶಿಸಿದ್ದು, ಮಿಥುನ್ ಮುಕುಂದನ್ ಚಿತ್ರದ ಹಾಡಿಗೆ ಸಂಗೀತ ನೀಡಿದ್ದಾರೆ.

ಪುನೀತ್ ರಾಜ್​​ಕುಮಾರ್

By

Published : Sep 17, 2019, 9:44 PM IST

'ಕವಲುದಾರಿ' ಖ್ಯಾತಿಯ ನಟ ರಿಷಿ ಈಗ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಸಿನಿಮಾದಲ್ಲಿ ಬ್ಯುಸಿಯಿದ್ದಾರೆ. ಈಗಾಗಲೇ ಚಿತ್ರದ ಟೀಸರ್ ಕೂಡಾ ರಿಲೀಸ್ ಆಗಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿಸಿದೆ. ಇನ್ನು ಈ ಚಿತ್ರಕ್ಕೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಸಾಥ್ ನೀಡಿದ್ದಾರೆ.

ರಿಷಿ, ಪುನೀತ್ ರಾಜ್​​ಕುಮಾರ್

ನಟ ಪುನೀತ್ ರಾಜ್​​ಕುಮಾರ್ 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರದ ಒಂದು ಹಾಡಿಗೆ ಧ್ವನಿಯಾಗಿದ್ದಾರೆ. ಅನೂಪ್ ರಾಮಸ್ವಾಮಿ ಕಶ್ಯಪ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದು ಮಿಥುನ್ ಮುಕುಂದನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಮಾಸ್ ಪ್ಯಾತೋ ಹಾಡನ್ನು ಪುನೀತ್ ಹಾಡಿದ್ದಾರೆ. ಈ ಹಾಡು ಖಾಲಿ ಕ್ವಾರ್ಟರ್ ಬಾಟ್ಲಿ ಹಾಡಿನ‌ ಶೈಲಿಯಲ್ಲಿದ್ದು ಪುನೀತ್ ರಾಜ್​​​ಕುಮಾರ್ ಮೊದಲ ಬಾರಿ ಈ ರೀತಿಯ ಹಾಡನ್ನು ಹಾಡಿರುವುದು ವಿಶೇಷ. ಇನ್ನು ಈ ಚಿತ್ರವನ್ನು 'ಗುಳ್ಟು' ಚಿತ್ರವನ್ನು ನಿರ್ಮಿಸಿದ್ದ ಆರ್​​​​. ಪ್ರಶಾಂತ್ ರೆಡ್ಡಿ ಹಾಗೂ ಜನಾರ್ಧನ್ ಚಿಕ್ಕಣ್ಣ ನಿರ್ಮಿಸಿದ್ದಾರೆ. ಚಿತ್ರದ ಶೂಟಿಂಗ್ ಮುಗಿದಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದೆ. ಶೀಘ್ರದಲ್ಲೇ ಅಪ್ಪು ಹಾಡಿರುವ ಹಾಡನ್ನು ಚಿತ್ರತಂಡ ರಿಲೀಸ್ ಮಾಡಲಿದೆ. ಚಿತ್ರದಲ್ಲಿ ರಿಷಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು ಧನ್ಯಾ ನಾಯಕಿಯಾಗಿ ನಟಿಸಿದ್ದಾರೆ. ಸಿದ್ದು ಮೂಲಿಮನಿ, ದತ್ತಣ್ಣ, ರಂಗಾಯಣ ರಘು, ಸೀನು, ಮಿತ್ರ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದ್ದು ಡಿಸೆಂಬರ್ ವೇಳೆಗೆ ಈ ಸಿನಿಮಾ ನೋಡುವ ಸುವರ್ಣ ಅವಕಾಶ ಸಾರ್ವಜನಿಕರಿಗೆ ಸಿಗಲಿದೆ.

ಪುನೀತ್ ರಾಜ್​​ಕುಮಾರ್​​​​​

ABOUT THE AUTHOR

...view details