ಕರ್ನಾಟಕ

karnataka

By

Published : Dec 2, 2019, 1:50 PM IST

ETV Bharat / sitara

ನಿಕ್​ಯಾಂಕಾ ವೆಡ್ಡಿಂಗ್​ ಡೇ... ನೀನು ಸಿಕ್ಕಿದ್ದು ಲಕ್​ ಎಂದ ನಿಕ್​.. ಥ್ಯಾಂಕ್ಯೂ ಪತಿದೇವ ಎಂದ ಪಿಗ್ಗಿ

ನಿಕ್​ ಜೋನ್ಸ್​​ ಮತ್ತು ಬಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಒಂದು ವರ್ಷ ಕಳೆದಿದೆ. ಮೊದಲು ವರ್ಷದ ಮದುವೆ ವಾರ್ಷಿಕೊತ್ಸವಕ್ಕೆ ಪ್ರಿಯಾಂಕಾ ಮತ್ತು ನಿಕ್​ ಜೋನ್ಸ್​​​ ಇಬ್ಬರೂ ವಿಶ್​ ಮಾಡಿಕೊಂಡಿದ್ದಾರೆ.

Priyanka, Nick on first wedding anniversary
ನಿಕ್​​ ಮತ್ತು ಪ್ರಿಯಾಂಕ

ಹಾಲಿವುಡ್​ನಲ್ಲಿ ತಮ್ಮ ಹಾಡುಗಳಿಂದಲೇ ಸೆನ್ಸೇಷನ್​ ಕ್ರಿಯೇಟ್​ ಮಾಡಿದ್ದ ನಿಕ್​ ಜೋನ್ಸ್​ ಮತ್ತು ಬಾಲಿವುಡ್​ ತಾರೆ ಪ್ರಿಯಾಂಕಾ ಚೋಪ್ರಾ ಮದುವೆಯಾಗಿ ಒಂದು ವರ್ಷ ಕಳೆದಿದೆ. ಮೊದಲ ವರ್ಷದ ಮದುವೆ ವಾರ್ಷಿಕೊತ್ಸವಕ್ಕೆ ಪ್ರಿಯಾಂಕಾ ಮತ್ತು ನಿಕ್​ ಪರಸ್ಪರ ವಿಶ್​ ಮಾಡಿಕೊಂಡಿದ್ದಾರೆ.

ಇನ್ಸ್​​ಸ್ಟಾಗ್ರಾಮ್​ ಖಾತೆಯಲ್ಲಿ ಮದುವೆ ಸಂಭ್ರಮದ ಫೋಟೋ ಹಾಕಿ ಬರೆದುಕೊಂಡಿರುವ ನಿಕ್​​​​, ಕಳೆದ ವರ್ಷದ ಈ ದಿನದಂದು ನಾವು ಯಾವಾಗಲೂ ಜೊತೆಗಿರುತ್ತೇವೆ ಎಂದು ಹೇಳಿದ ದಿನ. ನನ್ನ ಪ್ರೀತಿ ಹೃದಯಕ್ಕೆ ಐ ಲವ್​ ಯು ಎಂದು ಬರೆದಿದ್ದಾರೆ.

ಹಾಗೆ ಪಿಗ್ಗಿ ಕೂಡ ವಿಡಿಯೋ ಒಂದನ್ನು ಹಾಕಿ, ನೀನು ನನಗೆ ಸಂತೋಷ ಕೊಟ್ಟೆ, ಅದ್ಭುತ ಕ್ಷಣಗಳನ್ನು ಕೊಟ್ಟೆ, ಖುಷಿ ಕೊಟ್ಟೆ ಎಲ್ಲವನ್ನೂ ಒಂದೇ ಕ್ಷಣದಲ್ಲಿ ನೀಡಿರುವೆ. ನನ್ನನ್ನು ನೀನು ಗುರುತಿಸಿದ್ದಕ್ಕೆ ಧನ್ಯವಾದಗಳು. ಮೊದಲ ವರ್ಷದ ವಿವಾಹ ಮಹೋತ್ಸವಕ್ಕೆ ಶುಭಾಶಯಗಳು ಪತಿದೇವ ಎಂದು ಬರೆದುಕೊಂಡಿದ್ದಾರೆ.

ಇನ್ನು ಈ ಜೋಡಿಯ ವೆಡ್ಡಿಂಗ್​​ಡೇಗೆ ಅಭಿಮಾನಿಗಳು ವಿಶ್​​ಗಳ ಸುರಿಮಳೆಯನ್ನೇ ಹರಿಸುತ್ತಿದ್ದಾರೆ.

For All Latest Updates

TAGGED:

ABOUT THE AUTHOR

...view details