ಪುನೀತ್ ಮತ್ತು ದಾನಿಶ್ ಇನ್ನೊಂದು ಚಿತ್ರದಲ್ಲಿ ಜೊತೆಗೆ ಕೆಲಸ ಮಾಡುತ್ತಿದ್ದಾರೆ. ಪುನೀತ್ ತಮ್ಮ ಪಿಆರ್ಕೆ ಪ್ರೊಡಕ್ಷನ್ಸ್ನಡಿ ನಿರ್ಮಿಸುತ್ತಿರುವ 'ಒನ್ ಕಟ್ ಟೂ ಕಟ್' ಎಂಬ ಹೊಸ ಚಿತ್ರದಲ್ಲಿ ದಾನಿಶ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವುದು ವಿಶೇಷ.
ನಾಳೆ ಸೆಟ್ಟೇರಲಿದೆ ಪುನೀತ್-ದಾನಿಶ್ ಕಾಂಬಿನೇಷನ್ ಸಿನಿಮಾ - danish sait
ಒನ್ ಕಟ್ ಟೂ ಕಟ್ ಸಿನಿಮಾ ನಾಳೆ (ಫೆ. 5) ಸೆಟ್ಟೇರುತ್ತಿದೆ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಇಂಗ್ಲಿಷ್ ಸರಿಯಾಗಿ ಬಾರದ ಇಂಗ್ಲಿಷ್ ಮೇಷ್ಟ್ರು ಗೋಪಿಯಾಗಿ ದಾನಿಶ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಂಸಿಧರ್ ಭೋಗರಾಜು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.
ಒನ್ ಕಟ್ ಟೂ ಕಟ್ ಸಿನಿಮಾ ನಾಳೆ (ಫೆ.5) ಸೆಟ್ಟೇರುತ್ತಿದೆ. ಇದೊಂದು ಪಕ್ಕಾ ಕಾಮಿಡಿ ಚಿತ್ರವಾಗಿದ್ದು, ಇಂಗ್ಲಿಷ್ ಸರಿಯಾಗಿ ಬಾರದ ಇಂಗ್ಲಿಷ್ ಮೇಷ್ಟ್ರು ಗೋಪಿಯಾಗಿ ದಾನಿಶ್ ಈ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ವಂಸಿಧರ್ ಭೋಗರಾಜು ಎನ್ನುವವರು ನಿರ್ದೇಶನ ಮಾಡುತ್ತಿದ್ದಾರೆ.
'ಪವರ್ ಸ್ಟಾರ್' ಪುನೀತ್ ರಾಜ್ಕುಮಾರ್ ಅವರಿಗಂತೂ ದಾನಿಶ್ ಅಂದರೆ ಬಹಳ ಇಷ್ಟ. ಈ ಹಿಂದೆ 'ಹಂಬಲ್ ಪೊಲಿಟಿಶಿಯನ್ ನೋಗರಾಜ್' ಚಿತ್ರದಲ್ಲಿ ಪುನೀತ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ನಂತರ ದಾನಿಶ್ ಅಭಿನಯದಲ್ಲಿ 'ಫ್ರೆಂಚ್ ಬಿರಿಯಾನಿ' ಚಿತ್ರವನ್ನು ಕೂಡ ಪುನೀತ್ ನಿರ್ಮಾಣ ಮಾಡಿದ್ದಾರೆ.