ಕರ್ನಾಟಕ

karnataka

ETV Bharat / sitara

ಹಾಸ್ಯ ನಟ ನರಸಿಂಹರಾಜು ನೆನಪಿನಲ್ಲಿ ಕಾಮಿಡಿ ಶಾರ್ಟ್ ಫಿಲ್ಮ್ಸ್ ಸ್ಪರ್ಧೆ

ನರಸಿಂಹ ರಾಜು ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ಅವರ ಮೊಮ್ಮಗ, ಕನ್ನಡ ಸಿನಿಮಾಗಳ ನಿರ್ದೇಶಕ, ಸಂಗೀತ ನಿರ್ದೇಶಕ ಎಸ್ ಡಿ ಅರವಿಂದ್ ತೀರ್ಮಾನಿಸಿದ್ದಾರೆ.

ಹಾಸ್ಯ ಚಕ್ರವರ್ತಿ ನರಸಿಂಹರಾಜು

By

Published : Jul 25, 2019, 10:08 AM IST

ತಮ್ಮ ಮಾತಿನ ಮೂಲಕ, ಹಾವ ಭಾವದ ಮೂಲಕ ಜನರನ್ನ ನಕ್ಕು ನಲಿಸುತ್ತಿದ್ದ ಹಾಸ್ಯನಟ ನರಸಿಂಹ ರಾಜು. ಇವರ ಜನಿಸಿ 97 ವರ್ಷಗಳು ಗತಿಸಿವೆ. ಇದರ ಸವಿ ನೆನಪಿಗೆ ನರಸಿಂಹ ರಾಜು ಹೆಸರಿನಲ್ಲಿ ಪ್ರಶಸ್ತಿ ನೀಡಬೇಕು ಎಂದು ಅವರ ಮೊಮ್ಮಗ, ಕನ್ನಡ ಸಿನಿಮಾಗಳ ನಿರ್ದೇಶಕ, ಸಂಗೀತ ನಿರ್ದೇಶಕ ಎಸ್ ಡಿ ಅರವಿಂದ್ ತೀರ್ಮಾನಿಸಿದ್ದಾರೆ.

ಜುಲೈ 24ರಂದು ನರಸಿಂಹ ರಾಜು ಅವರ 97 ನೇ ಹುಟ್ಟು ಹಬ್ಬ. ಈ ದಿನದಂದು ‘ಬೆಂಗಳೂರು ಇಂಟರ್​​ನ್ಯಾಷನಲ್​​ ಕಾಮಿಡಿ ಶಾರ್ಟ್ ಫಿಲ್ಮ್ ಕಮಿಟಿ’ ಅವರ ಜ್ಞಾಪಕಾರ್ಥವಾಗಿ ಪ್ರಶಸ್ತಿ ಘೋಷಿಸಿ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದೆ. ನರಸಿಂಹ ರಾಜು ಅವರ ಮೊಮ್ಮಗ ನಿರ್ದೇಶಕ ಎಸ್ ಡಿ ಅರವಿಂದ್ ‘ಕಾಮಿಡಿ ಶಾರ್ಟ್ ಫಿಲ್ಮ್’ ಸ್ಪರ್ಧೆಯನ್ನು ಏರ್ಪಾಡು ಮಾಡಿ ತಾತನ ಜನುಮ ದಿನ ಪ್ರಶಸ್ತಿ ನೀಡಬೇಕು ಎಂದು ತೀರ್ಮಾನಿಸಿದ್ದಾರೆ.

ಹಾಸ್ಯ ಚಕ್ರವರ್ತಿ ನರಸಿಂಹರಾಜು

5 ರಿಂದ 30 ನಿಮಿಷಗಳ ಕಾಮಿಡಿ ಶಾರ್ಟ್ ಫಿಲ್ಮ್ಸ್​​ ಆಯ್ಕೆ ಆಗುತ್ತದೆ. ಆ ಮೇಲೆ ಕಮಿಟಿ ಬೆಸ್ಟ್ ಒಂದನ್ನು ಆರಿಸಿಕೊಂಡು ಪ್ರಶಸ್ತಿ ನೀಡುತ್ತದೆ. ಇದರಲ್ಲಿ ಬೆಸ್ಟ್ ಕಾಮಿಡಿ, ನಿರ್ದೇಶಕ, ನಟರನ್ನು ಗುರುತಿಸಲಾಗುವುದು. ಭಾರತದ ಯಾವುದೇ ಮೂಲೆಯಿಂದ ಈ ಸ್ಪರ್ಧೆಗೆ ಅರ್ಜಿ ಹಾಕಬಹುದು ಎನ್ನುತ್ತಾರೆ ಎಸ್ ಡಿ ಅರವಿಂದ್.

ABOUT THE AUTHOR

...view details