ಕರ್ನಾಟಕ

karnataka

ETV Bharat / sitara

'ನನ್ನ ಹೆಸರು ಫೈನಲ್ ಆಗಿದೆ'; ಇಂತಿ ನಿಮ್ಮ ಪ್ರೀತಿಯ ವೈ​ಆರ್ ಬೇಬಿ

ಸ್ಯಾಂಡಲ್​ವುಡ್​ ತಾರಾಜೋಡಿ ನಟ ಯಶ್​-ರಾಧಿಕಾ ಪಂಡಿತ್ ದಂಪತಿ ತಮ್ಮ ಮಗುವಿಗೆ ಹೆಸರು ಫೈನಲ್ ಮಾಡಿದ್ದಾರೆ.

By

Published : Jun 21, 2019, 6:58 PM IST

ಚಿತ್ರಕೃಪೆ : ಇನ್​ಸ್ಟಾಗ್ರಾಂ

ರಾಕಿಂಗ್ ಸ್ಟಾರ್ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ದಂಪತಿಯ ಮುದ್ದಿನ ಮಗಳಿಗೆ ಹೆಸರು ಅಂತಿಮಗೊಂಡಿದೆ. ಇದುವರೆಗೆ ವೈ​ಆರ್ ಬೇಬಿ ಎಂದು ಕರೆಯಿಸಿಕೊಳ್ಳುತ್ತಿದ್ದ ಏಂಜಲ್​​​ಗೆ ಅಂದವಾದ ಹೆಸರೊಂದು ಖಾಯಂ ಆಗಿದೆ.

ಈ ವಿಚಾರವನ್ನು ಇಂದು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಾಧಿಕಾ, ತನ್ನ ಮಗಳೇ ಈ ಸುದ್ದಿಯನ್ನು ಎಲ್ಲರಿಗೂ ತಿಳಿಸುವ ರೀತಿಯಲ್ಲಿ ಬರೆದುಕೊಂಡಿದ್ದಾರೆ.

'ಹಾಯ್​,ನೀವು ನನಗೆ ಸಾಕಷ್ಟು ಸೊಗಸಾದ ಹೆಸರುಗಳನ್ನು ಸೂಚಿಸಿದ್ದೀರಿ.ಅವುಗಳನ್ನು ಗಮನದಲ್ಲಿಕೊಂಡು ಅಂತಿಮವಾಗಿ ಸುಂದರವಾದ ಒಂದು ಹೆಸರನ್ನು ನನ್ನ ತಂದೆ-ತಾಯಿಗಳು ಅಂತಿಮಗೊಳಿಸಿದ್ದಾರೆ. ಅದು ಏನು ಎಂಬುದನ್ನು ತಿಳಿಯಲು ಜೂನ್​ 23ರ ವರೆಗೆ ಕಾಯಿರಿ. ಪ್ರೀತಿಯೊಂದಿಗೆ ನಿಮ್ಮ ವೈ​.ಆರ್​ ಬೇಬಿ' ಎಂದು ರಾಧಿಕಾ ಪಂಡಿತ್​ ಬರೆದುಕೊಂಡಿದ್ದಾರೆ.

ABOUT THE AUTHOR

...view details