ಕರ್ನಾಟಕ

karnataka

ETV Bharat / sitara

ಬುಸುಗುಡಲು ನಿಮ್ಮ ಮನೆಗೆ ಬರ್ತಿದ್ದಾಳೆ 'ನಾಗಿಣಿ-2' - ರಾಮ್​ ಜಿ ನಿರ್ದೇಶನದ ನಾಗಿಣಿ 2

ದೀಪಿಕಾ ದಾಸ್​​ ನಟನೆಯ ನಾಗಿಣಿ ಧಾರಾವಾಹಿ ಇನ್ನೇನು ಮುಗಿರುವ ಹಂತಕ್ಕೆ ತಲುಪಿದ್ದು, ಡಿಸೆಂಬರ್​​ನಲ್ಲಿ ನಾಗಿಣಿ-2 ಆರಂಭವಾಗಲಿದೆ ಎಂಬ ಸುದ್ದಿ ವೀಕ್ಷಕರಿಗೆ ಸಂತಸ ನೀಡಿದೆ.

nagini 2 serial coming soon
'ನಾಗಿಣಿ' ಹೋದರೇನಂತೆ, ನಿಮ್ಮ ಮನೆಗೆ ಬರ್ತಿದ್ದಾಳೆ  'ನಾಗಿಣಿ-2'

By

Published : Nov 28, 2019, 5:14 PM IST

ಇತ್ತೀಚೆಗೆ 'ನಾಗಿಣಿ' ಧಾರಾವಾಹಿ ಯಶಸ್ವಿಯಾಗಿ 1000 ಸಂಚಿಕೆ ಪೂರೈಸಿದ್ದು ಸದ್ಯದಲ್ಲೇ ಮುಕ್ತಾಯಗೊಳ್ಳಲಿದೆ. ಇದರ ಜೊತೆಗೆ ಡಿಸೆಂಬರ್​​ನಲ್ಲಿ ನಾಗಿಣಿ-2 ಆರಂಭವಾಗಲಿದೆ ಎಂಬ ಸುದ್ದಿ ವೀಕ್ಷಕರಿಗೆ ಸಂತಸ ನೀಡಿದೆ.

ನಾಗಿಣಿ ಧಾರಾವಾಹಿಯನ್ನು ಹಯವದನ ನಿರ್ದೇಶಿಸಿದ್ದು, ನಾಗಿಣಿ-2 ಧಾರಾವಾಹಿಯ ನಿರ್ದೇಶನದ ಜವಾಬ್ದಾರಿಯನ್ನು ರಾಮ್ ಜೀ ವಹಿಸಿಕೊಂಡಿದ್ದಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಪುಟ್ಟ ಗೌರಿ ಮದುವೆ, ಮಂಗಳ ಗೌರಿ ಮದುವೆ ಧಾರಾವಾಹಿ ನಿರ್ದೇಶಿಸಿ ಮನೆ ಮಾತಾಗಿರುವ ರಾಮ್ ಜೀ, ಇದೇ ಮೊದಲ ಬಾರಿಗೆ ಜೀ ಕನ್ನಡದ ಧಾರಾವಾಹಿಗೆ ಆಕ್ಷನ್​ ಕಟ್​ ಹೇಳುತ್ತಿದ್ದಾರೆ.

"ಫ್ಯಾಂಟಸಿ ಧಾರಾವಾಹಿ ನಾಗಿಣಿಯನ್ನು ಜನ ಸ್ವೀಕರಿಸಿದ್ದರು. ಜೊತೆಗೆ ನಾಗಿಣಿ ಧಾರಾವಾಹಿ ಮುಗಿಯುತ್ತಿದೆ ಎಂದು ತಿಳಿದಾಗ ನಾಗಿಣಿ ಭಾಗ-2 ಮಾಡುವಂತೆಯೂ ಬೇಡಿಕೆಗಳು ಅವರಿಗಿತ್ತು. ಅದೇ ಕಾರಣಕ್ಕೆ ಅದ್ಭುತವಾದ ಕಥೆ ಹೆಣೆದಿದ್ದು, ಸುಂದರವಾದ ಕಥೆಯೊಂದಿಗೆ ನಿಮ್ಮ ಮುಂದೆ ಬರಲಿದ್ದೇವೆ" ಎಂದು ರಾಮ್​​​​ ಜೀ ಹೇಳಿದ್ದಾರೆ. ಇನ್ನು ನಾಗಿಣಿ 2 ಧಾರಾವಾಹಿಯಲ್ಲಿ ಪುಟ್ಟಗೌರಿ ಸೀರಿಯಲ್​ನಲ್ಲಿದ್ದ ಹಿಮಾ ನಾಗಿಣಿಯಾಗಿ ಬುಸುಗುಟ್ಟಲಿದ್ದಾಳೆ.

ಹಿಮಾ

ತನ್ನ ಹತ್ಯೆ ಮಾಡಿದ ಪ್ರೇಮಿಯ ವಿರುದ್ಧ ಸಮರ ಸಾರಲು ನಾಗಿಣಿ ಭೂ ಲೋಕಕ್ಕೆ ಬಂದು ಹೇಗೆ ಸೇಡು ತೀರಿಸಿಕೊಳ್ಳುತ್ತಾಳೆ ಎಂದಬುದೇ ಈ ಧಾರಾವಾಹಿಯ ಕಥೆ. ಧಾರಾವಾಹಿಗೋಸ್ಕರ ಭವ್ಯವಾದ ಸೆಟ್ ಹಾಕಲೆಂದೇ ಮುಂಬೈಯಿಂದ ಸ್ಪೆಷಲಿಸ್ಟ್​​ಗಳನ್ನು ಕರೆಸಿಕೊಂಡಿದ್ದಾರಂತೆ.ಇನ್ನು ಎಲ್ಲಾ ಅಂದುಕೊಂಡಂತೆ ಆದರೆ ಡಿಸೆಂಬರ್ ಎರಡನೇ ವಾರದಿಂದ ನಾಗಿಣಿ-2 ಮತ್ತೆ ಬುಸುಗುಡಲು ಬರಲಿದ್ದಾಳೆ.

ABOUT THE AUTHOR

...view details