ಹೈದರಾಬಾದ್: ಆದಿಪುರುಷ ಚಿತ್ರತಂಡದ ಫೋಟೋವನ್ನು ನಿರ್ದೇಶಕ ಓಂ ರಾವತ್ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಬಾಹುಬಲಿ ಖ್ಯಾತಿಯ ಪ್ರಭಾಸ್ ಅಭಿನಯಿಸುತ್ತಿರುವ ಈ ಚಿತ್ರ ಘೋಷಣೆಯಾದ ದಿನದಿಂದಲೂ ಹೊಸ ಕ್ರೇಜ್ ಸೃಷ್ಟಿಸಿದೆ.
‘ಆದಿಪುರುಷ’ ತಂಡದ ಫೋಟೋ ಹಂಚಿಕೊಂಡ ನಿರ್ದೇಶಕ ಓಂ ರಾವತ್..!
ರಾಮಾಯಣ ಕಥೆಯಾಧಾರಿತ ಆದಿಪುರುಷ ಚಿತ್ರದಲ್ಲಿ ರಾಮನ ಪಾತ್ರಧಾರಿಯಾಗಿ ಪ್ರಭಾಸ್ ಮತ್ತು ರಾವಣನಾಗಿ ಸೈಫ್ ಅಲಿಖಾನ್ ನಟಿಸುತ್ತಿದ್ದಾರೆ. ಸೀತೆ ಪಾತ್ರ ಯಾರು ಮಾಡುತ್ತಿದ್ದಾರೆಂದು ಚಿತ್ರತಂಡ ಈವರೆಗೆ ಬಹಿರಂಗಪಡಿಸಿಲ್ಲ.
ಓಂ ರಾವತ್
ರಾಮಾಯಣ ಕಥೆಯಾಧಾರಿತ ಈ ಚಿತ್ರದಲ್ಲಿ ರಾಮನ ಪಾತ್ರಧಾರಿಯಾಗಿ ಪ್ರಭಾಸ್ ಮತ್ತು ರಾವಣನಾಗಿ ಸೈಫ್ ಅಲಿಖಾನ್ ನಟಿಸುತ್ತಿದ್ದಾರೆ. ಸೀತೆ ಪಾತ್ರ ಯಾರು ಮಾಡುತ್ತಿದ್ದಾರೆಂದು ಚಿತ್ರತಂಡ ಈವರೆಗೆ ಬಹಿರಂಗಪಡಿಸಿಲ್ಲ. ಇಂದು ನಿರ್ದೇಶಕ ಓಂ ರಾವತ್ ತಮ್ಮ ಚಿತ್ರತಂಡದೊಂದಿಗೆ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
ಸೀತೆ ಪಾತ್ರಕ್ಕಾಗಿ ದೀಪಿಕಾ ಪಡುಕೋಣೆ, ಕೃತಿ ಸನೋನ್ ಮತ್ತು ಕೀರ್ತಿ ಸುರೇಶ್ ಹೆಸರುಗಳು ಕೇಳಿ ಬಂದಿವೆ. ಆದರೆ, ನಿರ್ಮಾಪಕರು ಯಾರನ್ನು ಆಯ್ಕೆ ಮಾಡುತ್ತಾರೆ ಅನ್ನೋದು ತಿಳಿದು ಬಂದಿಲ್ಲ.