ಜಯತೀರ್ಥ ನಿರ್ದೇಶನದ 'ಬೆಲ್ ಬಾಟಂ' ಸಿನಿಮಾ 50 ದಿನಗಳನ್ನು ಪೂರೈಸಿ 100ನೇ ದಿನದತ್ತ ಮುನ್ನುಗ್ಗುತ್ತಿದೆ. ಇನ್ನು ಈ ಸಿನಿಮಾ ತೆಲುಗು, ತಮಿಳಿಗೂ ರೀಮೇಕ್ ಆಗುತ್ತಿದೆ.
ತಮಿಳಿನಲ್ಲೂ ಮೋಡಿ ಮಾಡಲು ಹೊರಟಿದ್ದಾರೆ 'ಬೆಲ್ ಬಾಟಂ'ನ ಮೋಡಿ ನಂಜಪ್ಪ - undefined
'ಬೆಲ್ ಬಾಟಂ' ಸಿನಿಮಾ ತಮಿಳಿಗೆ ರೀಮೇಕ್ ಆಗುತ್ತಿದ್ದು, ಸಿನಿಮಾದಲ್ಲಿ ಮೋಡಿ ನಂಜಪ್ಪ ಪಾತ್ರ ಮಾಡಿದ್ದ ಶಿವಮಣಿ ಅವರೇ ತಮಿಳಿನಲ್ಲಿ ಅದೇ ಪಾತ್ರ ಮಾಡುತ್ತಿದ್ದಾರೆ. ತಮಿಳಿನಲ್ಲಿ ಸತ್ಯಶಿವ ಈ ಸಿನಿಮಾವನ್ನು ನಿರ್ದೇಶಿಸಲಿದ್ದಾರೆ.
ತಮಿಳಿನಲ್ಲಿ ಈಗಾಗಲೇ ಶೂಟಿಂಗ್ ಆರಂಭವಾಗಿದ್ದು ಸತ್ಯಶಿವ ನಿರ್ದೇಶಿಸುತ್ತಿದ್ದಾರೆ. ವಿಶೇಷ ಎಂದರೆ ಕನ್ನಡದಲ್ಲಿ ನಿರ್ದೇಶಕ ಶಿವಮಣಿ ಅಭಿನಯಿಸಿದ್ದ ಮೋಡಿ ನಂಜಪ್ಪ ಪಾತ್ರವನ್ನು ತಮಿಳಿನಲ್ಲಿ ಕೂಡಾ ಅವರೇ ನಿಭಾಯಿಸುತ್ತಿದ್ದಾರೆ. ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಶಿವಮಣಿ, 'ಬೆಲ್ ಬಾಟಂ' ಸಿನಿಮಾ ನಂತರ ನನಗೆ ಒಳ್ಳೆಯ ಅವಕಾಶಗಳು ಹುಡುಕಿ ಬರುತ್ತಿವೆ. ಸುಮಾರು 27 ವರ್ಷಗಳವರೆಗೆ ನಿರ್ದೇಶನದಲ್ಲಿದ್ದ ನಾನು ಈಗ ನಟನಾಗಿದ್ದೇನೆ. ಈ ತಿಂಗಳ 28 ರಿಂದ ಶೂಟಿಂಗ್ ಆರಂಭವಾಗಲಿದೆ ಎಂದು ಶಿವಮಣಿ ಹೇಳಿದ್ದಾರೆ.
ಇನ್ನು ತಮಿಳಿನಲ್ಲೂ ಈ ಚಿತ್ರಕ್ಕೆ 'ಬೆಲ್ ಬಾಟಂ' ಟೈಟಲ್ ಫಿಕ್ಸ್ ಆಗಿದ್ದು, ರಿಷಭ್ ಶೆಟ್ಟಿ ಪಾತ್ರವನ್ನು ತಮಿಳಿನಲ್ಲಿ 'ಕಳಗು' ಸಿನಿಮಾ ನಾಯಕ ಕೃಷ್ಣ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಕನ್ನಡ ಮೋಡಿ ನಂಜಪ್ಪ ತಮಿಳಿನಲ್ಲೂ ಮೋಡಿ ಮಾಡಲು ಹೊರಟಿದ್ದು, ತಮಿಳಿಗರು ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ಕಾದು ನೋಡಬೇಕು.