ರಿಯಲ್ ಸ್ಟಾರ್ ಉಪೇಂದ್ರ ಅವರ ಅಣ್ಣ ಸುಧೀಂದ್ರ ಅವರ ಮಗ ನಿರಂಜನ್ ‘ಅದ್ಧೂರಿ 2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇವರಿಗೆ ಜಾರಾ ಯಾಸ್ಮಿನ್ ಎಂಬ ಚೆಲುವೆ ನಾಯಕಿಯಾಗಿ ಕನ್ನಡಕ್ಕೆ ಯಾನ ಬೆಳಸಲಿದ್ದಾರೆ. ಜಾರಾ ವೀಡಿಯೋ ಆಲ್ಬಂ, ಜಾಹೀರಾತುಗಳಿಗೆ ಕೆಲಸ ಮಾಡಿದ್ದಾರೆ. ಪ್ರಮುಖವಾಗಿ ನೋಕಿಯಾ, ಹೊಂಡಾ ಹಾಗೂ ಜಿಯೋ ಕಂಪನಿಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿರಂಜನ್ ಆರಡಿ ಪ್ಲಸ್ ಹುಡುಗ ಹಾಗಾಗಿ ಈ ಎತ್ತರಕ್ಕೆ ಜಾರಾ ಹೊಂದಾಣಿಕೆ ಆಗುತ್ತಾಳೆ.
ಕನ್ನಡಕ್ಕೆ ಅದ್ಧೂರಿಯಾಗಿ ಬಂದ್ಲು 'ಜಿಯೋ' ಹುಡುಗಿ - undefined
ಮಾಡೆಲ್ ಹಾಗೂ ನಟಿ ಜಾರಾ ಯಾಸ್ಮಿನ್ 'ಅದ್ಧೂರಿ 2' ಸಿನಿಮಾಗೆ ನಾಯಕಿ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ. ಈ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಚಿತ್ರಕೃಪೆ: ಇನ್ಸ್ಟಾಗ್ರಾಂ
ಕನ್ನಡದಲ್ಲಿ ‘ಅದ್ಧೂರಿ’ ಎ.ಪಿ.ಅರ್ಜುನ್ ನಿರ್ದೇಶನದಲ್ಲಿ ಧ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಅಭಿನಯದ ಸಿನಿಮಾ ಶಂಕರ್ ರೆಡ್ಡಿ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಭರ್ಜರಿ ಯಶಸ್ಸು ಸಹ ಕಂಡಿತ್ತು. ಈಗ ಅದೇ ಶಂಕರ್ ರೆಡ್ಡಿ ‘ಅದ್ಧೂರಿ 2’ ಚಿತ್ರ ನಿರ್ಮಾಣಕ್ಕೆ ಮುಂದೆ ಬಂದಿದ್ದಾರೆ.
ನಾಯಕ ನಿರಂಜನ್ ಚಿತ್ರಕ್ಕೆ 8 ಪ್ಯಾಕ್ ಸಹ ಬರುವ ಹಾಗೆ ಶ್ರಮ ವಹಿಸುತ್ತಿದ್ದಾನೆ. ಈ ಚಿತ್ರ ಕನ್ನಡ ಅಷ್ಟೇ ಅಲ್ಲ ಹಿಂದಿ, ತಮಿಳು, ತೆಲುಗು ಭಾಷೆಗಳಲ್ಲಿ ಬಿಡುಗಡೆ ಯಾಗಲಿದೆ.