ಕರ್ನಾಟಕ

karnataka

ETV Bharat / sitara

ವಿನೋದ್ ಪ್ರಭಾಕರ್ ಚಿತ್ರ 'ಶ್ಯಾಡೋ' ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆ - ಮರಿ ಟೈಗರ್​

ಚಿತ್ರ ನಿರ್ಮಾಪಕ ಚಕ್ರವರ್ತಿ ಸಿಹೆಚ್​ ತಮಗೆ ಒಂದೂವರೆ ಕೋಟಿಗೂ ಅಧಿಕ ಹಣ ನೀಡಬೇಕಿದ್ದು, ಇನ್ನೂ ಪಾವತಿಸಿಲ್ಲ ಎಂದು ಆರೋಪಿಸಿ ಎಸ್​ಪಿಎಮ್ ಆರ್ಟ್ಸ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಶ್ಯಾಡೋ ಚಿತ್ರ ಬಿಡುಗಡೆಗೆ ತಡೆಯಾಜ್ಞೆ
ಶ್ಯಾಡೋ ಚಿತ್ರ ಬಿಡುಗಡೆಗೆ ತಡೆಯಾಜ್ಞೆ

By

Published : Feb 4, 2021, 11:42 PM IST

ಬೆಂಗಳೂರು: ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಬೇಕಿದ್ದ ವಿನೋದ್ ಪ್ರಭಾಕರ್ ಅಭಿನಯದ ಶ್ಯಾಡೋ ಚಿತ್ರವನ್ನು ಫೆಬ್ರವರಿ 18 ರವರೆಗೆ ಥಿಯೇಟರ್​ನಲ್ಲಾಗಲೀ, ಓಟಿಟಿ ಮೂಲಕವಾಗಲೀ ಬಿಡುಗಡೆ ಮಾಡಬಾರದು ಎಂದು ಮದ್ರಾಸ್ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.

ಚಿತ್ರ ನಿರ್ಮಾಪಕ ಚಕ್ರವರ್ತಿ ಸಿಹೆಚ್​ ತಮಗೆ ಒಂದೂವರೆ ಕೋಟಿಗೂ ಅಧಿಕ ಹಣ ನೀಡಬೇಕಿದ್ದು, ಇನ್ನೂ ಪಾವತಿಸಿಲ್ಲ ಎಂದು ಆರೋಪಿಸಿ ಎಸ್​ಪಿಎಮ್ ಆರ್ಟ್ಸ್ ಸಂಸ್ಥೆ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.

ಶ್ಯಾಡೋ

2018ರ ಜೂನ್ 25ರಂದು ಎಸ್​ಪಿಎಮ್ ಆರ್ಟ್ಸ್ ಹಾಗೂ ಚಿತ್ರ ನಿರ್ಮಾಪಕರು ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಚಿತ್ರದ ಎಲ್ಲ ಹಕ್ಕುಗಳೂ ಅರ್ಜಿದಾರರಿಗೆ ಸೇರಿರುವುದು ಕಂಡುಬರುತ್ತಿದೆ. ಹೀಗಾಗಿ, ಅರ್ಜಿದಾರ ಸಂಸ್ಥೆ ಎಸ್​ಪಿಎಮ್ ಆರ್ಟ್ಸ್ ಕೋರಿಕೆಯಂತೆ ಚಿತ್ರದ ನಿರ್ಮಾಪಕರು ಫೆಬ್ರವರಿ 18ರವರೆಗೆ ಚಿತ್ರವನ್ನು ಥಿಯೇಟರ್​ನಲ್ಲಾಗಲೀ, ಓಟಿಟಿ ಮೂಲಕವಾಗಲೀ ಬಿಡುಗಡೆ ಮಾಡಬಾರದು ಎಂದು ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.

ಅಲ್ಲದೇ ಚಿತ್ರ ನಿರ್ಮಾಪಕ ಚಕ್ರವರ್ತಿ ಸೇರಿದಂತೆ 6 ಮಂದಿ ಪ್ರತಿವಾದಿಗಳಿಗೆ ಫೆ.18ರಂದು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ.

ABOUT THE AUTHOR

...view details