ಆನ್ಮೈ ಕ್ರಿಯೇಶನ್ಸ್ ಲಾಂಛನದಲ್ಲಿ ತಯಾರಾಗುತ್ತಿರುವ ಬಹುಭಾಷಾ ಚಿತ್ರ 'ಮ್ಯಾಡಿ ಅಲಿಯಾಸ್ ಮಾಧವ'. ತಮಿಳು, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಸಿದ್ಧಗೊಂಡಿರುವ ಈ ಸಿನಿಮಾ ಜಾಗತಿಕ ಮಟ್ಟದ ಕಥಾವಸ್ತುವನ್ನು ಒಳಗೊಂಡಿದೆ.
ಚಿಕ್ಕ ವಯಸ್ಸಿಗೆ ತಂದೆಯನ್ನು ಕಳೆದುಕೊಂಡ ಬಡ ಕುಟುಂಬದ ಹುಡುಗ ತಾಯಿಯ ಆಸರೆಯಲ್ಲೇ ಬೆಳೆಯುತ್ತಿರುತ್ತಾನೆ. ಭಾರತ ಮೂಲದ ಅಮೆರಿಕ ವಿಜ್ಞಾನಿಯೊಬ್ಬರು ಮಕ್ಕಳ ವೈಜ್ಞಾನಿಕ ಜ್ಞಾನವನ್ನು ಗುರುತಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಟ್ಟದ ವಿಜ್ಞಾನ ಸ್ಪರ್ಧೆ ಆಯೋಜಿಸಿರುತ್ತಾರೆ. ಆ ಸ್ಪರ್ಧೆಗೆ ಮಾಧವ ಕೂಡಾ ಆಯ್ಕೆಯಾಗಿರುತ್ತಾನೆ. ಯುವ ವಿಜ್ಞಾನಿಗಳೆಲ್ಲಾ ತಮ್ಮ ಆವಿಷ್ಕಾರಗಳನ್ನು ಪರಿಚಯಿಸಲು ಸಿದ್ಧರಾಗಿದ್ದ ಸಂದರ್ಭದಲ್ಲೇ ಅವರ ಸಂಶೋಧನೆಗಳನ್ನು ಕದಿಯುವ ಉದ್ದೇಶದಿಂದ ದುಷ್ಟರ ಗುಂಪೊಂದು ಸಂಚು ರೂಪಿಸಿ ಅವರನ್ನೆಲ್ಲಾ ಅಪಹರಿಸುತ್ತದೆ. ಈ ಹೊತ್ತಿನಲ್ಲಿ ಮಾಧವನ ಜಾಣ್ಮೆ, ಧೈರ್ಯ ಮತ್ತು ಸಮಯ ಪ್ರಜ್ಞೆ ಹೇಗೆ ಸಹಾಯಕ್ಕೆ ಬರುತ್ತದೆ? ಮಾಧವ, ಅಪಹರಣಕಾರರಿಂದ ಎಲ್ಲರನ್ನೂ ರಕ್ಷಿಸುತ್ತಾನಾ ಎಂಬಿತ್ಯಾದಿ ಸಾಹಸಮಯ ಮತ್ತು ಸಕಾರಾತ್ಮಕ ಅಂಶಗಳನ್ನು ಒಳಗೊಂಡ ಕಥೆ ಮ್ಯಾಡಿ ಅಲಿಯಾಸ್ ಮಾಧವ ಚಿತ್ರದ್ದು.