ಭಾರತದ ಗಾನ ಕೋಗಿಲೆ ಎಂದು ಖ್ಯಾತಿ ಪಡೆದಿರುವ ಲತಾ ಮಂಗೇಶ್ಕರ್ ತೀವ್ರ ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ನಂತರ ಮನೆಗೆ ವಾಪಸಾಗಿದ್ದಾರೆ.
ಉಸಿರಾಟದ ತೊಂದರೆ: ಲತಾ ಮಂಗೇಶ್ಕರ್ ಆಸ್ಪತ್ರೆಗೆ ದಾಖಲು, ಡಿಸ್ಚಾರ್ಜ್ - ಆಸ್ಪತ್ರೆಗೆ ದಾಖಲಾದ ಲತಾ ಮಂಗೇಶ್ಕರ್
ಗಾನ ಕೋಗಿಲೆ ಲತಾ ಮಂಗೇಶ್ಕರ್ ತೀವ್ರ ಉಸಿರಾಟದ ತೊಂದರೆಯಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ನಂತರ ಮನೆಗೆ ಮರಳಿದ್ದಾರೆ.
ಇಂದು ಬೆಳಗಿನ ಜಾವ 2-3 ಗಂಟೆ ಸುಮಾರಿಗೆ ಲತಾಜಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರ ತಂಡ ಚಿಕಿತ್ಸೆ ನೀಡಿದ್ದು, ಇದೀಗ ಅವರು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.
36 ಭಾಷೆಗಳ ಹಾಡುಗಳಿಗೆ ತಮ್ಮ ಅಮೂಲ್ಯ ಧ್ವನಿಯನ್ನು ನೀಡಿರುವ ಇವರ ಸಾಧನೆ ಮೆಚ್ಚಿ ಭಾರತ ಸರ್ಕಾರ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಿದೆ. ಕೇವಲ ಹಿಂದಿಯಲ್ಲೇ ಸುಮಾರು 1000 ಹಾಡುಗಳನ್ನು ಹಾಡಿದ್ದಾರೆ. ಇವರ ಸಾಧನೆಗೆ ದಾದಾ ಸಹೇಬ್ ಫಾಲ್ಕೆ ಪ್ರಶಸ್ತಿ ಕೂಡ ಸಂದಿದೆ.