ಲಾಕ್ಡೌನ್ ನಂತ್ರ ಕನ್ನಡದಲ್ಲಿ ಹೊಸ ಹೊಸ ಸಿನಿಮಾಗಳು ವಿಶೇಷ ರೀತಿಯ ಟೈಟಲ್ಗಳನ್ನು ಇಟ್ಟುಕೊಂಡು ಶೂಟಿಂಗ್ಗೆ ಸಿದ್ಧವಾಗುತ್ತಿವೆ. ಇದೀಗ ಅಂತಹದ್ದೇ ಒಂದು ಕನ್ನಡ ಸಿನಿಮಾ ಹೊರ ಬರುತ್ತಿದೆ.
ಹೌದು, ತಬಲಾ ನಾಣಿ ಮತ್ತು ಕುರಿ ಪ್ರತಾಪ್ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಹೆಸರು ಆರ್ಸಿಬಿ. ಅರೇ ಏನಿದು ಕ್ರಿಕೆಟ್ ಟೀಮ್ ಹೆಸರು ಇಟ್ಟಿದ್ದಾರೆ ಅಂತಾ ಶಾಕ್ ಆಗ್ಬೇಡಿ.. ಈ ಸಿನಿಮಾದ ಪೂರ್ತಿ ಹೆಸರು 'ಆರ್ಸಿ ಬ್ರದರ್ಸ್' ಅಂತ.
'ಆರ್ಸಿಬಿ' ಟೀಮ್ ಸೇರಿಕೊಂಡ ಕುರಿಪ್ರತಾಪ್-ತಬಲಾ ನಾಣಿ ಈ ಸಿನಿಮಾಕ್ಕೆ ಪ್ರಕಾಶ್ ಕುಮಾರ್ ಎಂಬುವವರು ಕಥೆ ಬರೆದು ನಿರ್ದೇಶನವನ್ನೂ ಮಾಡುತ್ತಿದ್ದಾರೆ. ಅಲ್ಲದೆ ಕಿರಣ್ ಕುಮಾರ್ ಛಾಯಾಗ್ರಹಣವಿರುವ ಈ ಚಿತ್ರವನ್ನು ಮಣಿ ಶಶಾಂಕ್ ಬಿ. ಎಂಬುವವರು ನಿರ್ಮಾಣ ಮಾಡುತ್ತಿದ್ದಾರೆ.
ಸದ್ಯ ಚಿತ್ರತಂಡದಿಂದ ಇಷ್ಟು ಮಾತ್ರ ಮಾಹಿತಿ ಹೊರ ಬಿದ್ದಿದ್ದು, ಉಳಿದಂತೆ ಯಾರೆಲ್ಲ ಕಲಾವಿದರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂಬುದನ್ನು ಕಾದು ನೋಡಬೇಕು.