ಕರ್ನಾಟಕ

karnataka

ETV Bharat / sitara

'ಕೋಟಿಗೊಬ್ಬ 3' ಗ್ರ್ಯಾಂಡ್ ​ರಿಲೀಸ್​: ಕಲಬುರಗಿಯಲ್ಲಿ ಕಿಚ್ಚನ ಕಟೌಟ್​ಗೆ ಕ್ಷೀರಾಭಿಷೇಕ - ಕಿಚ್ಚ ಸುದೀಪ್

ಕಲಬುರಗಿಯ ಸಂಗಮ್​ ಚಿತ್ರಮಂದಿರದ ಮುಂದೆ ನಟ ಕಿಚ್ಚ ಸುದೀಪ್‌ ಕಟೌಟ್​ಗೆ ಹೂಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡಿರುವ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಕಲಬುರಗಿಯಲ್ಲಿ ಕಿಚ್ಚನ ಕಟೌಟ್​ಗೆ ಹಾಲಿನ ಅಭಿಷೇಕ
ಕಲಬುರಗಿಯಲ್ಲಿ ಕಿಚ್ಚನ ಕಟೌಟ್​ಗೆ ಹಾಲಿನ ಅಭಿಷೇಕ

By

Published : Oct 15, 2021, 1:10 PM IST

ಕಲಬುರಗಿ:ನಿನ್ನೆತಾಂತ್ರಿಕ ದೋಷದಿಂದ ಬಿಡುಗಡೆಯಾಗದೆ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದ ಸುದೀಪ್​ ಅಭಿನಯದ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಸಿನಿಮಾ ಇಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆ ಕಂಡಿದೆ. ಕಲಬುರಗಿಯಲ್ಲಿ ಅಭಿಮಾನಿಗಳು ಸುದೀಪ್ ಕಟೌಟ್​ಗೆ ಹಾಲಿನ ಅಭಿಷೇಕ ಮಾಡಿ ಸಂಭ್ರಮಿಸಿದರು.

ಕಲಬುರಗಿಯಲ್ಲಿ ಕಿಚ್ಚನ ಕಟೌಟ್​ಗೆ ಹಾಲಿನ ಅಭಿಷೇಕ

ನಗರದ ಶೆಟ್ಟಿ, ಸಂಗಮ್, ತ್ರಿವೇಣಿ ಸೇರಿದಂತೆ ವಿವಿಧ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಸಂಗಮ್​ ಚಿತ್ರಮಂದಿರದ ಮುಂದೆ ಕಿಚ್ಚನ ಕಟೌಟ್​ಗೆ ಹೂಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡಿ ಅಭಿಮಾನಿಗಳು ಕುಣಿದು ಕುಪ್ಪಳಿಸಿದರು.

ಇದನ್ನೂ ಓದಿ:400 ಅಡಿ ಉದ್ದದ ಫ್ಲೆಕ್ಸ್​ ಹಾಕಿ 'ಕೋಟಿಗೊಬ್ಬ 3' ಚಿತ್ರಕ್ಕೆ ಶುಭ ಕೋರಿದ ಫ್ಯಾನ್ಸ್​

ಒಂದು ದಿನ ತಡವಾಗಿ ಚಿತ್ರ ರಿಲೀಸ್​ ಆಗಿದ್ದರೂ ಕೂಡ ಇಂದು ವಿಜಯದಶಮಿಯಂದು ಬಿಡುಗಡೆಯಾಗಿರುವುದಕ್ಕೆ ಅಭಿಮಾನಿಗಳು ನಿನ್ನೆಯ ಬೇಸರ ಮರೆತು ಆನಂದಿಸಿದರು.

ABOUT THE AUTHOR

...view details