ಕರ್ನಾಟಕ

karnataka

By

Published : Jun 24, 2020, 2:09 PM IST

ETV Bharat / sitara

ಕಡಿಮೆ ಅವಧಿಯಲ್ಲೇ 50 ಮಿಲಿಯನ್​ ವೀವ್ಸ್​​ ಪಡೆದ ಖರಾಬು ಸಾಂಗ್​​

ಧ್ರುವ ಸರ್ಜಾ ಅಭಿನಯದ ಪೊಗರು ಚಿತ್ರದ ಖರಾಬು ಸಾಂಗ್​ ಕಡಿಮೆ ಅವಧಿಯಲ್ಲೇ 50 ಮಿಲಿಯನ್​ ವ್ಯೂವ್​ ಪಡೆದು ದಾಖಲೆ ನಿರ್ಮಿಸಿದೆ.

Pogaru song
Pogaru song

ಕನ್ನಡ ಸಿನಿಮಾ ರಂಗದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಆನಂದ್ ಆಡಿಯೋದಿಂದ ಯೂಟ್ಯೂಬ್ ಅಲ್ಲಿ ಪ್ರಸಾರ ಆದ ಧ್ರುವ ಸರ್ಜಾ ಅಭಿನಯದ ಖಾರಾಬು ಹಾಡು ಹೊಸ ದಾಖಲೆ ನಿರ್ಮಿಸಿದೆ.

ಏಪ್ರಿಲ್ ಮಧ್ಯ ಭಾಗದಲ್ಲಿ ಬಿಡುಗಡೆ ಆಗಿದ್ದ ಖರಾಬು ಹಾಡು ನಂದ ಕಿಶೋರ್ ನಿರ್ದೇಶನದ ‘ಪೊಗರು’ ಸಿನಿಮಾ 50 ಮಿಲಿಯನ್ ಪ್ರೇಕ್ಷಕರನ್ನು ಪಡೆದುಕೊಂಡಿದೆ ಎಂದು ಆನಂದ್ ಆಡಿಯೋ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರೀಕರಣದಲ್ಲಿ ಬ್ಯುಸಿ ಆಗಿರುವ ಯಶಸ್ವಿ ನಿರ್ದೇಶಕ ನಂದಕಿಶೋರ್ ‘ಪೊಗರು’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ಸಹ ಒಂದು ಪ್ರಮುಖ ಪಾತ್ರ ಮಾಡಿದ್ದಾರೆ. ಧ್ರುವ ಸರ್ಜಾ ಗುರುವಿನ ಪಾತ್ರ ಒಂದು ರೀತಿಯಲ್ಲಿ ‘ನಾಗರಹಾವು’ ಚಿತ್ರದಲ್ಲಿ ಚಾಮಯ್ಯ ಮೇಷ್ಟ್ರು ಹಾಗೂ ರಾಮಾಚಾರಿ ಸಂಬಂಧದ ರೀತಿ.

ಪೊಗರು ಸಾಂಗ್

ಅದ್ಧೂರಿ, ಭರ್ಜರಿ, ಬಹದ್ದೂರ್ ನಂತರ ಆಗಮಿಸುತ್ತಿರುವ ಧ್ರುವ ಸರ್ಜಾ 40 ಕೆಜಿ ತೂಕ ಇಳಿಸಿಕೊಂಡು ಶಾಲಾ ಹುಡುಗನ ಹಾಗೆ ಬದಲಾಗಿದ್ದಾರೆ. ಆಮೇಲೆ 50 ಕೆಜಿ ತೂಕ ಹೆಚ್ಚಿಸಿಕೊಂಡು ಅಂತಾರಾಷ್ಟ್ರೀಯ ಬಾಡಿ ಬಿಲ್ಡರ್ಸ್​ ಆದ ಮೋರ್ಗನ್ ಆಸ್ತೆ, ಕೈಗ್ರೀನ್, ಜಾನ್ ಲುಕಾಶ್, ಜೋಸ್ಟೆಟಿಕ್ಸ್ ಅಂತಹ ಘಟಾನುಘಟಿಗಳ ಜೊತೆ ಸೆಣಸಾಡಿದ್ದಾರೆ.

ರಶ್ಮಿಕ ಮಂದಣ್ಣ ನಾಯಕಿ ಆಗಿರುವ ಪೊಗರು ಕನ್ನಡ ಸಿನಿಮಾದಲ್ಲಿ ಧ್ರುವ ಸರ್ಜಾ ಮೂರು ವಿಶೇಷ ಗೆಟಪ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2013 ರಲ್ಲಿ ವಿಕ್ಟರಿ, 2014 ರಲ್ಲಿ ಅಧ್ಯಕ್ಷ, 2015 ರಲ್ಲಿ ರನ್ನ, 2016 ರಲ್ಲಿ ಮುಕುಂದ ಮುರಾರಿ, 2017 ರಲ್ಲಿ ಟೈಗರ್ ಸಿನಿಮಾ ವರ್ಷಕ್ಕೆ ಒಂದರಂತೆ ಸಿನಿಮಾ ನಿರ್ದೇಶನvನ್ನು ನಂದ ಕಿಶೋರ್ ಮಾಡುತ್ತಾ ಬರುತ್ತಿದ್ದಾರೆ. ಆದರೆ ‘ಪೊಗರು’ ಸಿನಿಮಾಕ್ಕೆ ಅವರು ಎರಡು ವರ್ಷಗಳನ್ನು ತೆಗೆದುಕೊಂಡಿದ್ದಾರೆ.

‘ಪೊಗರು’ ಚಿತ್ರದ ಡೈಲಾಗ್ ಟ್ರೈಲರ್ ಬಿಡುಗಡೆಯನ್ನು ಈ ಹಿಂದೆ ಮಾಡಲಾಗಿದೆ. ಧ್ರುವ ಸರ್ಜಾ ಹೇಳ್ತಾರೆ ‘ಎದೆ ಗಟ್ಟಿಗೈತೆ ಅಂತ ಟಚ್ ಮಾಡೋಕೆ ಹೋಗಬೇಡ, ನನ್ನ ಮೈಯಾಗೆ ಎಷ್ಟು ಪೊಗರು ಐತಿ ಅಂತ ಚೆಕ್ ಮಾಡೋಕ್ ಬರಬೇಡ...ಶೇಕ್ ಆಗೋಗ್ತೀಯಾ'.

ನಂದ ಕಿಶೋರ್ ‘ಪೊಗರು’ ಸಿನಿಮಾ ಕನ್ನಡ ಅಲ್ಲದೆ ತೆಲುಗು ಭಾಷೆಯಲ್ಲೂ ಸಹ ಬಿಡುಗಡೆಯಾಗಲು ಸಿದ್ಧವಾಗುತ್ತಿದೆ.

ABOUT THE AUTHOR

...view details