"ಮೊಗ್ಗಿನ ಮನಸ್ಸಿನ" ಬೋಲ್ಡ್ ಹುಡ್ಗಿ ಶುಭಪೂಂಜ ಈಗ "ಖಾಲಿ ದೋಸೆ ಕಲ್ಪನಾ" ಆಗಿ ಬದಲಾಗಿದ್ದಾರೆ. ನಿರ್ದೇಶಕ ಶರಣ್ ಕಬ್ಬೂರ್ ಸತತ 12 ವರ್ಷಗಳ ನಂತರ "ಖಾಲಿದೋಸೆ ಕಲ್ಪನಾ" ಎಂಬ ಸಿನಿಮಾ ನಿರ್ದೇಶನ ಮಾಡ್ತಿದ್ದು, ಈ ಚಿತ್ರದಲ್ಲಿ ಖಾಲಿ ದೋಸೆ ಹಾಕೋ ಕಲ್ಪನಾರಾಗಿ ಶುಭಪೂಂಜ ಕಾಣಿಸಲಿದ್ದಾರೆ.
ಇಂದು 'ಖಾಲಿ ದೋಸೆ ಕಲ್ಪಾನ" ಚಿತ್ರದ ಮುಹೂರ್ತ ನೇರವೇರಿದೆ. ಜ್ಞಾನ ಭಾರತಿನಗರದ ಜ್ಞಾನ ಗಣಪತಿ ದೇವಸ್ಥಾನದಲ್ಲಿ ನಡೆದ ಮುಹೂರ್ತ ಕಾರ್ಯಕ್ರಮಕ್ಕೆ ನಿರ್ದೇಶಕ ವಿ.ನಾಗೇಂದ್ರ ಪ್ರಸಾದ್ ಆಗಮಿಸಿ ಕ್ಲಾಪ್ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ರು.
"ಖಾಲಿ ದೋಸೆ ಕಲ್ಪನಾ" ಚಿತ್ರಕ್ಕೆ ಮುಹೂರ್ತ ಪೂಜಾರಿ ಚಿತ್ರದ ನಂತರ ನಿರ್ದೇಶನದಿಂದ ದೂರ ಉಳಿದಿದ್ದ ಶರಣ್ ಕಬ್ಬೂರ್ ಬರೋಬರಿ 12 ವರ್ಷಗಳ ನಂತರ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಖಾಲಿ ದೋಸೆ ಕಲ್ಪನಾ ಚಿತ್ರ ಥ್ರಿಲ್ಲರ್ ಚಿತ್ರವಾಗಿದ್ದು ಇದರಲ್ಲಿ ಶುಭ ಜೊತೆ ನಾಯಕ ನಟನಾಗಿ ಸಂಜಯ್ ಗೌಡ ಸ್ಯಾಂಡಲ್ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಈಗಾಗಲೆ ಆಕ್ಟಿಂಗ್ ಹಾಗೂ ಡ್ಯಾನ್ಸ್ ಕಲಿತಿರುವ ಸಂಜಯ್, ಈ ಚಿತ್ರದಲ್ಲಿ ಲೈಟ್ ಮ್ಯಾನ್ ಪಾತ್ರ ಮಾಡುತ್ತಿದ್ದಾರೆ. ಸಿನಿಮಾಕ್ಕೆ ರಾಜೇಶ್, ನಳಿನ ಗೌಡ ಹಾಗೂ ಮೇಘನಾ ಶಿವರಾಜ್ ಬಂಡವಾಳ ಹಾಕುತ್ತಿದ್ದಾರೆ.
ಖಾಲಿ ದೋಸೆ ಸಿನಿಮಾಕ್ಕೆ ಸಿ.ಟಿ ರಾಕೇಶ್ ಕೊಪ್ಪ ಸಾಹಿತ್ಯ ಜೊತೆಗೆ ಸಂಭಾಷಣೆ ಬರೆದಿದ್ದು ಇಂದಿನಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಿದೆ.