ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​ವುಡ್​​ ಯುವರತ್ನ ಪುನೀತ್​​ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ಹೃದಯಾಘಾತದಿಂದ ನಿಧನರಾಗಿರುವ ಪುನೀತ್​ ರಾಜ್​ಕುಮಾರ್​ ಅವರಿಗೆ ಕನ್ನಡ ಚಿತ್ರಮಂಡಳಿಯಿಂದ ಪುನೀತ್ ನಮನ (Puneeth Namana)ಕಾರ್ಯಕ್ರಮ ಆಯೋಜಿಸಲಾಗಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು. ಈ ವೇಳೆ ಅಪ್ಪುಗೆ ಮರಣೋತ್ತರವಾಗಿ 'ಕರ್ನಾಟಕ ರತ್ನ' ನೀಡುವುದಾಗಿ ಘೋಷಿಸಿದರು.

karnataka ratna award for puneeth rajkumar
karnataka ratna award for puneeth rajkumar

By

Published : Nov 16, 2021, 5:34 PM IST

Updated : Nov 16, 2021, 5:48 PM IST

ಬೆಂಗಳೂರು: ಹೃದಯಸ್ತಂಭನದಿಂದ ನಿಧನರಾದ ಸ್ಯಾಂಡಲ್​ವುಡ್​ನ ಪವರ್‌ಸ್ಟಾರ್ ಪುನೀತ್ ರಾಜ್​ಕುಮಾರ್(Puneeth Rajkumar)ಅವರಿಗೆ ಗೀತ ನಮನ ಕಾರ್ಯಕ್ರಮ ನಡೆಯುತ್ತಿದ್ದು, ನಗರದ ಅರಮನೆ ಮೈದಾನದ ಗಾಯಿತ್ರಿ ವಿಹಾರ ಅಂಗಣದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಕ್ರಮದಲ್ಲಿ ಅನೇಕರು ಭಾಗಿಯಾಗಿದ್ದಾರೆ.

ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿರುವ ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(CM Basavaraj Bommai), ಪುನೀತ್​ ರಾಜ್​ಕುಮಾರ್​ ಅವರಿಗೆ ಮರಣೋತ್ತರ 'ಕರ್ನಾಟಕ ರತ್ನ'(Karnataka Ratna award) ಪ್ರಶಸ್ತಿ ನೀಡುವುದಾಗಿ ಘೋಷಿಸಿದ್ದಾರೆ. ಕರ್ನಾಟಕದ ಆರು ಕೋಟಿ ಜನರ ಪರವಾಗಿ ನಾನು ಪುನೀತ್ ರಾಜ್​ಕುಮಾರ್​ ಅವರ ಹಣೆಗೆ ಅಂದು ಮುತ್ತು ನೀಡಿದ್ದೇನೆ. ಇದರ ಬಗ್ಗೆ ಅನೇಕರು ತರಹೇವಾರಿ ಕಮೆಂಟ್ ಮಾಡಿದ್ದು, ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಅಪ್ಪುಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡುವುದಾಗಿ ಘೋಷಣೆ ಮಾಡಿರುವ ಸಿಎಂ, ಸ್ಮಾರಕ ನಿರ್ಮಾಣ ಮಾಡುವುದಾಗಿಯೂ ಇದೇ ವೇಳೆ ಘೋಷಿಸಿದರು.

ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಿದ ಸಿಎಂ ಬೊಮ್ಮಾಯಿ

ಪುನೀತ್ ರಾಜ್​ಕುಮಾರ್ ನಮ್ಮೆಲ್ಲರಿಗೂ ಅತಿ ಆತ್ಮೀಯ. ಅವನನ್ನು ನಾನು ಬಾಲ್ಯದಿಂದಲೂ ಬಲ್ಲೆ. ಬಾಲ ನಟನಾಗಿ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿರುವ ಕರ್ನಾಟಕದ ಏಕೈಕ ಬಾಲ ನಟ ಪುನೀತ್​​ ಆಗಿದ್ದರು. ಅಷ್ಟೊಂದು ಸಣ್ಣ ವಯಸ್ಸಿನಲ್ಲಿ ನಟನೆ ಮಾಡುವುದು ಸುಲಭದ ಮಾತಲ್ಲ ಎಂದರು.

ಇದನ್ನೂ ಓದಿರಿ:'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಪತ್ನಿ ಅಶ್ವಿನಿ ಕಣ್ಣೀರು..

ಕಂಠೀರವ ಸ್ಟೇಡಿಯಂನಲ್ಲಿ ಡಾ. ರಾಜ್​ಕುಮಾರ್​ ಅವರಿಗೆ ನಿರ್ಮಾಣ ಮಾಡಿರುವ ಸ್ಮಾರಕದಂತೆ ಪುನೀತ್ ರಾಜ್​ಕುಮಾರ್​ ಅವರಿಗೂ ಸ್ಮಾರಕ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ತಿಳಿಸಿದರು. ಉಳಿದಂತೆ ಕೇಂದ್ರ ಸರ್ಕಾರದಿಂದ ನೀಡಲಾಗುವ ಪದ್ಮಶ್ರೀ ಪ್ರಶಸ್ತಿಗೂ ದಿವಂಗತ ಪುನೀತ್ ರಾಜ್​ಕುಮಾರ್​ ಅವರ ಹೆಸರು ಶಿಫಾರಸು ಮಾಡಲಾಗುವುದು ಎಂದು ಸಿಎಂ ತಿಳಿಸಿದರು.

ಇದೇ ವೇಳೆ ಮಾತನಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪುನೀತ್ ರಾಜ್​ಕುಮಾರ್​ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು, ಅದಕ್ಕೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದರು.

Last Updated : Nov 16, 2021, 5:48 PM IST

ABOUT THE AUTHOR

...view details