ಕರ್ನಾಟಕ

karnataka

ETV Bharat / sitara

ರೋಹಿತ್ ಶರ್ಮಾ ಮೇಲೆ ದಕ್ಷಿಣ ​ ಸುಂದರಿಯ ಕಣ್ಣು...ಅವರೆಂದರೆ ಪಂಚಪ್ರಾಣ ಎಂದಳಾಕೆ ಚೆಲುವೆ - ಮ್ಯಾರೇಜ್​

ಕ್ರಿಕೆಟಿಗ ರೋಹಿತ್ ಶರ್ಮಾ ಮೇಲೆ ಸೌಥ್ ಸುಂದರಿ ಕಾಜಲ್ ಅಗರ್​ವಾಲ್​ಗೆ ಕ್ರಶ್​ ಅಂತೆ. ಇತ್ತೀಚಿಗಷ್ಟೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕಾಜಲ್​ 'ಮನದ ಮಾತುಗಳನ್ನು' ಹೊರ ಹಾಕಿದ್ದಾರೆ.

ಚಿತ್ರಕೃಪೆ : ಇನ್​ಸ್ಟಾಗ್ರಾಂ

By

Published : Apr 29, 2019, 6:16 PM IST

ಕ್ರಿಕೆಟ್​​ಗಾಗಿ ಚಿತ್ರರಂಗಕ್ಕೂ ಒಂಥರಾ ಬಿಡಿಸಿ ಹೇಳಲಾರದ ಅನ್ಯೋನ್ಯತೆ. ಅದರಲ್ಲೂ ಲವ್​, ಕ್ರಶ್​​, ಡೇಟಿಂಗ್​, ಮ್ಯಾರೇಜ್​ ಮ್ಯಾಟರ್​​ನಲ್ಲಿ ಈ ಎರಡು ರಂಗಗಳು ಒಟ್ಟಾಗಿಯೇ ಕಾಣಿಸಿಕೊಳ್ಳುತ್ತವೆ.

ಸಿನಿಮಾ ತಾರೆಯರ ಜತೆ ಓಡಾಡಿ ಕ್ರಿಕೆಟಿಗರು ಸುದ್ದಿಯಾಗುವುದು ಹೊಸದಲ್ಲ. ಈಗಾಗಲೇ ಕೆಲ ಕ್ರಿಕೆಟಿಗರು ಸಿನಿಮಾ ತಾರೆಯರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಉದಾಹರಣೆಗಳು ನಮ್ಮ ಕಣ್ತುಂದೆ ಇವೆ. ಇದೀಗ ಸೌಥ್ ಸುಂದರಿ ಕಾಜಲ್ ಅಗರ್​​ವಾಲ್​ಗೂ ಭಾರತೀಯ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಮೇಲೆ ಕ್ರಶ್ ಆಗಿದೆಯಂತೆ.

ಇತ್ತೀಚಿಗಷ್ಟೆ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನಲ್ಲಿ ಕಾಜಲ್​ 'ಮನದ ಮಾತುಗಳು' ಹೊರಬಿದ್ದಿವೆ. ಸಂದರ್ಶಕ ಕೇಳಿದ ಪ್ರಶ್ನೆಗೆ ಕ್ಷಣಾರ್ಧದಲ್ಲೇ ಉತ್ತರಿಸಿದ ಈ ತಾರೆ, ನಂಗೆ ರೋಹಿತ್ ಶರ್ಮಾ ಇಷ್ಟ. ಅವರ ಮೇಲೆ ನಂಗೆ ಕ್ರಶ್ ಆಗಿದೆ. ಅವರನ್ನು ಕ್ರಿಕೆಟ್ ಮೈದಾನದಲ್ಲಿ ನೋಡೋವುದಂದ್ರೆ ನಂಗೆ ಪಂಚಪ್ರಾಣ ಎಂದಿದ್ದಾರೆ.

ಇನ್ನು ಅದೆಷ್ಟು ಹುಡುಗಿಯರು ರೋಹಿತ್ ಮೇಲೆ ಪ್ರಾಣ ಇಟ್ಟುಕೊಂಡಿದ್ದಾರೋ ಗೊತ್ತಿಲ್ಲ. ಇದೀಗ ಈ ಹುಡುಗಿಯ ಸಾಲಿಗೆ ನಟಿಮಣಿ ಕಾಜಲ್ ಸೇರಿದ್ದಾರೆ. ಆದರೆ, ರೋಹಿತ್ ಶರ್ಮಾ, ಈಗಾಗಲೇ ಮ್ಯಾರೀಡ್​. 2015 ರಲ್ಲಿ ತನ್ನ ಬಹುಕಾಲದ ಗೆಳತಿಯನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ. ಈ ದಂಪತಿಗೆ ಮುದ್ದಾದ ಒಂದು ಮಗು ಸಹ ಇದೆ.

ABOUT THE AUTHOR

...view details