ಕರ್ನಾಟಕ

karnataka

ETV Bharat / sitara

ಕಾಜಲ್ ಅಗರ್​ವಾಲ್​ ಭೇಟಿಯಾಗುವ ಆಸೆ; ಲಕ್ಷಾಂತರ ರೂ ಪಂಗನಾಮ ಹಾಕಿಸಿಕೊಂಡ ಅಭಿಮಾನಿ - ಕಾಜಲ್ ಅಗರ್​ವಾಲ್​

ನಟಿ ಕಾಜಲ್ ಅಗರ್​ವಾಲ್​ ಅವರನ್ನು ಭೇಟಿ ಮಾಡಲು ಹೋಗಿ ಅಭಿಮಾನಿಯೋರ್ವ ₹60 ಲಕ್ಷ ಪಂಗನಾಮ ಹಾಕಿಸಿಕೊಂಡಿದ್ದಾನೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Aug 2, 2019, 7:47 PM IST

ನಟಿ ಕಾಜಲ್‌​ ಅಗರ್​ವಾಲ್​ ಸೌಥ್ ಇಂಡಿಯಾ ಸುಂದರಿ. ಟಾಲಿವುಡ್-ಕಾಲಿವುಡ್​ ಹಾಗೂ ಬಾಲಿವುಡ್‌ನಲ್ಲೂ ಮಿಂಚಿರುವ ಕುವರಿ. ಈ ಚೆಂದುಳ್ಳಿ ಚೆಲುವೆಗೆ ಅಭಿಮಾನಿಗಳ ಬಳಗ ದೊಡ್ಡದು. ಒಮ್ಮೆಯಾದ್ರೂ ಕಾಜಲ್ ಅವರನ್ನು ಖುದ್ದು ಮೀಟ್​ ಮಾಡಬೇಕು ಎನ್ನುವ ಹಂಬಲ ಇವರ ಅಭಿಮಾನಿಗಳದ್ದು. ಆದರೆ, ಅಭಿಮಾನಿಯೊಬ್ಬ ಕಾಜಲ್ ಅವರನ್ನು ಭೇಟಿಯಾಗಲು ಬಯಸಿ ಲಕ್ಷಾಂತರ ರೂಪಾಯಿ ಕಳೆದುಕೊಂಡ ಘಟನೆ ನಡೆದಿದೆ.

ತಮಿಳುನಾಡಿನ ರಾಮನಾಥಪುರಂ ಮೂಲದ ಹುಡುಗನೋರ್ವ ಕಾಜಲ್​​ ಕಟ್ಟಾ ಅಭಿಮಾನಿ. ಈ ನಟಿಯ ಎಲ್ಲ ಚಿತ್ರಗಳನ್ನು ಕಣ್ತುಂಬಿಕೊಂಡಿರುವ ಈತ, ತನ್ನ ನೆಚ್ಚಿನ ನಟಿಯನ್ನು ಭೇಟಿಯಾಗಬೇಕು, ಅವರ ಜತೆ ಮಾತಾಡಬೇಕು, ಅವಕಾಶ ಸಿಕ್ರೆ ಒಂದು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕೆಂದು ಕನಸು ಕಂಡಿದ್ದ. ಅದನ್ನು ಸಾಕಾರಗೊಳಿಸಲೆಂದೇ ವೆಬ್​ಪೇಜ್​​ವೊಂದನ್ನು ಸಂಪರ್ಕಿಸಿದ್ದ. ಕಾಜಲ್​ ಅವರನ್ನು ಭೇಟಿ ಮಾಡಿಸುವುದಾಗಿ ನಂಬಿಸಿದ್ದ ವಂಚಕರ ತಂಡ, ಪ್ರಾರಂಭದಲ್ಲಿ ಈತನಿಂದ ₹50000 ಹಾಗೂ ಆತನ ಕೆಲ ಪರ್ಸನಲ್ ಮಾಹಿತಿ ಪಡೆದುಕೊಂಡಿತ್ತು.

ಈ ಅಭಿಮಾನಿ ಧನಿಕ ಎಂದು ತಿಳಿದ ಆ ಗ್ಯಾಂಗ್​, ಹಂತ ಹಂತವಾಗಿ ₹60 ಲಕ್ಷ ಹಣ ಪೀಕಿದೆಯಂತೆ. ಈ ವೇಳೆ ತಾನು ಮೋಸಗೊಂಡಿರುವುದು ಈ ಅಭಿಮಾನಿಗೆ ಮನವರಿಕೆಯಾಗಿದ್ದು, ವಂಚಕರು ಬೇಡಿಕೆಯಿಟ್ಟ ಹಣ ನೀಡಲು ನಿರಾಕರಿಸಿದ್ದಾನೆ. ಈ ವೇಳೆ ನಿನ್ನ ಪರ್ಸನಲ್​ ಪೋಟೊಗಳನ್ನು ಇಂಟರ್​ನೆಟ್​​ಲ್ಲಿ ಹರಿಬಿಡುವುದಾಗಿ ವಂಚಕರ ಗ್ಯಾಂಗ್​ ಬ್ಲ್ಯಾಕ್ ಈ-ಮೇಲ್ ಮಾಡಿದೆ. ಇದರಿಂದ ದಿಕ್ಕು ತೋಚದಂತಾಗಿ ಮನೆಬಿಟ್ಟು ಕೋಲ್ಕತ್ತಾ ಸೇರಿದ್ದಾನೆ ಆ ಅಭಿಮಾನಿ.

ಸದ್ಯ ಪೊಲೀಸರ ವಶದಲ್ಲಿರುವ ಈತನ ಸೂಚನೆ ಮೇರೆಗೆ ಶರವಣ ಕುಮಾರ್​ ಎನ್ನುವ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ABOUT THE AUTHOR

...view details