ಅಕ್ಟೋಬರ್ 30 ರಂದು ಗೌತಮ್ ಕಿಚ್ಲು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟಾಲಿವುಡ್ ನಟಿ ಕಾಜಲ್ ಅಗರ್ವಾಲ್ ಇದೀಗ ಪತಿಯೊಂದಿಗೆ ಮಾಲ್ಡೀವ್ಸ್ಗೆ ಹಾರಿದ್ಧಾರೆ. ಮಾಲ್ಡೀವ್ಸ್ ಸುಂದರ ತಾಣಗಳಲ್ಲಿ ಈ ಜೋಡಿ ಹನಿಮೂನ್ ಎಂಜಾಯ್ ಮಾಡುತ್ತಿದ್ದಾರೆ.
ಗೌತಮ್ ಕಿಚ್ಲು ಜೊತೆ ಕಾಜಲ್ ಅಗರ್ವಾಲ್ ಕಳೆದ ತಿಂಗಳು ಮುಂಬೈನಲ್ಲಿ ಕಾಜಲ್ ಹಾಗೂ ಗೌತಮ್, ಕುಟುಂಬ ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಮದುವೆಯಾಗಿದ್ದರು. ಮೂರು ದಿನಗಳ ಹಿಂದೆ ಮಾಲ್ಡೀವ್ಸ್ಗೆ ತೆರಳಿರುವ ಈ ಜೋಡಿ, ಸಮುದ್ರ ತೀರದಲ್ಲಿ ತೆಗೆಸಿಕೊಂಡಿರುವ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕಾಜಲ್ ಅಗರ್ವಾಲ್ ಕೆಂಪು ಔಟ್ಫಿಟ್ನಲ್ಲಿ ಬಹಳ ಗ್ಲ್ಯಾಮರಸ್ ಆಗಿ ಫೋಸ್ ನೀಡಿದ್ಧಾರೆ. ಪತಿಯೊಡನೆ ನಿಂತಿರುವ ಮತ್ತೊಂದು ಫೋಟೋವನ್ನು ಕಾಜಲ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಕಾಜಲ್ ಅಗರ್ವಾಲ್ ಜನಿಸಿದ್ದು ಪಂಜಾಬಿ ಕುಟುಂಬದಲ್ಲಾದರೂ ಆಕೆ ಹೆಸರು ಮಾಡಿದ್ದು ತೆಲುಗು ಚಿತ್ರರಂಗದಲ್ಲಿ. ಹಿಂದಿಯ ಕೌನ್ ಹೋ ಗಯಾ ಚಿತ್ರದ ಮೂಲಕ ಸಿನಿಜರ್ನಿ ಆರಂಭಿಸಿದ ಕಾಜಲ್ ಅಗರ್ವಾಲ್ ಲಕ್ಷ್ಮಿ ಕಲ್ಯಾಣಂ ಚಿತ್ರದ ಮೂಲಕ ಟಾಲಿವುಡ್ಗೆ ಬಂದರು. ತಮಿಳು ಚಿತ್ರಗಳಲ್ಲೂ ಕಾಜಲ್ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಅವಕಾಶಗಳು ದೊರೆತದ್ದು ಮಾತ್ರ ತೆಲುಗು ಚಿತ್ರರಂಗದಲ್ಲಿ. ಮಗಧೀರ, ಆರ್ಯ 2, ಡಾರ್ಲಿಂಗ್, ಮಿ.ಪರ್ಫೆಕ್ಟ್, ಬ್ಯುಸ್ನೆಸ್ ಮ್ಯಾನ್, ಮಾರಿ, ಬ್ರಹ್ಮೋತ್ಸವಂ, ಕೈದಿ ನಂ 150 ಹಾಗೂ ಇನ್ನಿತರ ಸಿನಿಮಾಗಳು ಕಾಜಲ್ಗೆ ಒಳ್ಳೆ ಹೆಸರು ತಂದುಕೊಟ್ಟ ಚಿತ್ರಗಳು.
ಕಾಜಲ್ ಅಗರ್ವಾಲ್ ಮದುವೆ ಸಂಭ್ರಮ
ಮದುವೆಯಾದ ನಂತರ ಕೂಡಾ ಸಿನಿಮಾಗಳಲ್ಲಿ ನಟಿಸುವುದನ್ನು ಮುಂದುವರೆಸುತ್ತೇನೆ ಎಂದು ಈಗಾಗಲೇ ಹೇಳಿರುವ ಕಾಜಲ್, ಸ್ವಲ್ಪ ದಿನಗಳ ಬ್ರೇಕ್ ನಂತರ ಮತ್ತೆ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ಆಚಾರ್ಯ, ಮೋಸಗಾಳ್ಳು, ಇಂಡಿಯನ್ 2, ಪ್ಯಾರಿಸ್ ಪ್ಯಾರಿಸ್ ಚಿತ್ರಗಳಲ್ಲಿ ಕಾಜಲ್ ನಟಿಸುತ್ತಿದ್ದಾರೆ.
ಮಗಧೀರ ಚಿತ್ರದಲ್ಲಿ ಕಾಜಲ್ ಅಗರ್ವಾಲ್