ಕರ್ನಾಟಕ

karnataka

ETV Bharat / sitara

ಜೂ.ಎನ್​ಟಿಆರ್​ ಹುಟ್ಟುಹಬ್ಬ.. ಆರ್​ಆರ್​ಆರ್​ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್

ತೆಲುಗು ಸೂಪರ್​ ಸ್ಟಾರ್​​ ಜೂನಿಯರ್ ಎನ್​​ಟಿಆರ್ ಅವರ ಹುಟ್ಟುಹಬ್ಬದ ಅಂಗವಾಗಿ "ಆರ್​ಆರ್​ಆರ್​" (RRR) ಸಿನಿಮಾದ ಮತ್ತೊಂದು ಪೋಸ್ಟರ್​ ಅನ್ನು ಬಿಡುಗಡೆ ಮಾಡಲಾಗಿದೆ. ಚಿತ್ರದಲ್ಲಿ, ಕೊಮರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿರುವ ಎನ್​ಟಿಆರ್​ ಬಿರುಗಾಳಿಯ ನಡುವೆ ಸಮುದ್ರದ ಅಲೆಗಳ ಮೇಲೆ ನಿಂತು ಕೈಯಲ್ಲಿ ಈಟಿ ಹಿಡಿದುರುವ ಪೋಸ್ಟರ್​ ಫ್ಯಾನ್ಸ್​​ಗೆ ಹೊಸ ಜೋಷ್​ ನೀಡುತ್ತಿದೆ.

ಆರ್​ಆರ್​ಆರ್​
ಆರ್​ಆರ್​ಆರ್​

By

Published : May 20, 2021, 9:53 PM IST

ಹೈದರಾಬಾದ್:ಎಸ್.ಎಸ್.ರಾಜಮೌಳಿ ಅವರ ಮುಂಬರುವ ಚಿತ್ರ "ಆರ್​ಆರ್​ಆರ್​"ನಲ್ಲಿ ಟಾಲಿವುಡ್​ ಯಂಗ್​ ಟೈಗರ್​ ಜೂ. ಎನ್​ಟಿಆರ್ ತಮ್ಮ ಪಾತ್ರದ ಕೋಮರಾಮ್ ಭೀಮ್​ನ ಮತ್ತೊಂದು ಪೋಸ್ಟರ್​​ ಅನ್ನು ಗುರುವಾರ ತಮ್ಮ ಜನ್ಮದಿನದ ಅಂಗವಾಗಿ ಸೋಷಿಯಲ್​ ಮೀಡಿಯಾದಲ್ಲಿ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

ಸಿನಿಮಾದಲ್ಲಿ ಕೊಮಾರಾಮ್​ ಭೀಮ್ ಬಂಡಾಯ ತುಂಬಿದ ಹೃದಯದವನು. ಈ ಪಾತ್ರವನ್ನು ನಿರ್ವಹಿಸುತ್ತಿರುವುದು ತುಂಬಾ ಖುಷಿ ತಂದಿದೆ. ಈವರೆಗೆ ನಾನು ಮಾಡಿದ ಎಲ್ಲಾ ಪಾತ್ರಗಳಿಗಿಂತ ಈ ಪಾತ್ರ ನನಗೆ ಸಂತಸ ತಂದಿದೆ. #ಆರ್​ಆರ್​ಆರ್​ ಸಿನಿಮಾದಿಂದ # ಕೊಮಾರಾಮ್ಭೀಮ್," ಎಂದು ಬರೆದಕೊಂಡು ಪೋಸ್ಟರ್​​ಗೆ ಟೈಟಲ್​ ಹಾಕಿದ್ದಾರೆ.

ಆರ್​ಆರ್​ಆರ್​ ಚಿತ್ರದ ಮತ್ತೊಂದು ಪೋಸ್ಟರ್ ರಿಲೀಸ್

ಚಿತ್ರದಲ್ಲಿ, ಕೊಮಾರಾಮ್ ಭೀಮ್ ಪಾತ್ರದಲ್ಲಿ ನಟಿಸುತ್ತಿರುವ ಎನ್​ಟಿಆರ್​ ಬಿರುಗಾಳಿಯ ನಡುವೆ ಸಮುದ್ರದ ಅಲೆಗಳ ಮೇಲೆ ನಿಂತು ಕೈಯಲ್ಲಿ ಈಟಿ ಹಿಡಿದುರುವ ಪೋಸ್ಟರ್​ ಫ್ಯಾನ್ಸ್​​ಗೆ ಹೊಸ ಜೋಷ್​ ನೀಡುತ್ತಿದೆ. ಈ ಚಿತ್ರದಲ್ಲಿ ರಾಮ್ ಚರಣ್ ತೇಜ್​, ಆಲಿಯಾ ಭಟ್ ಮತ್ತು ಅಜಯ್ ದೇವ್‌ಗನ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ.

ಇದು ಭಾರತದ ಸ್ವಾತಂತ್ರ್ಯ ಹೋರಾಟ ಆಧಾರಿತ ಸಿನಿಮಾ ಆಗಿದೆ ಮತ್ತು ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಜೀವನವನ್ನು ತೆರೆ ಮೇಲೆ ತರಲಾಗುತ್ತಿದೆ ಎಂದು ಚಿತ್ರದ ಮೂಲಗಳು ತಿಳಿಸಿವೆ.

ABOUT THE AUTHOR

...view details