ಕರ್ನಾಟಕ

karnataka

ETV Bharat / sitara

ಎದ್ದೇಳು ಮಂಜುನಾಥ ಸಿನಿಮಾ ಕಲೆಕ್ಷನ್ __ ಕೋಟಿಯಂತೆ: ಅಭಿಮಾನಿಗೆ ಲೆಕ್ಕ ಒಪ್ಪಿಸಿದ ಜಗ್ಗೇಶ್​

ಎದ್ದೇಳು ಮಂಜುನಾಥ ಸಿನಿಮಾ 90 ಲಕ್ಷ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿ 5 ಕೋಟಿ ಗಳಿಕೆ ಕಂಡಿತ್ತು ಎಂದು ಜಗ್ಗೇಶ್ ಅಚ್ಚರಿ ವಿಷ್ಯವನ್ನ ಹಂಚಿಕೊಂಡಿದ್ದಾರೆ.

jaggesh speak about eddelu manjunatha collection
ಎದ್ದೇಳು ಮಂಜುನಾಥ ಸಿನಿಮಾ ಕಲೆಕ್ಷನ್ ಬಗ್ಗೆ ಜಗ್ಗೇಶ್ ಹೇಳಿದ ಸತ್ಯ

By

Published : Nov 28, 2020, 4:35 PM IST

ಪ್ಯಾನ್ ಇಂಡಿಯಾ ಸಿನಿಮಾ ವಿಚಾರವಾಗಿ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ನವರಸ ನಾಯಕ ಜಗ್ಗೇಶ್, 2007ರಲ್ಲೇ ತಮ್ಮ ಸಿನಿಮಾ ಎಷ್ಟು ಕಲೆಕ್ಷನ್ ಆಗಿತ್ತು ಎಂಬುದನ್ನ ಬಾಯಿ ಬಿಟ್ಟಿದ್ದಾರೆ. 2007ರಲ್ಲಿ ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಆದ ಸಿನಿಮಾ 'ಎದ್ದೇಳು ಮಂಜುನಾಥ'.

ಎದ್ದೇಳು ಮಂಜುನಾಥ

ನವರಸ ನಾಯಕ ಜಗ್ಗೇಶ್ ಅಭಿನಯದ ಈ ಚಿತ್ರ ಆ ಕಾಲದಲ್ಲಿ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿತ್ತು. ಈ ಸಿನಿಮಾ ಬಗ್ಗೆ ಅಭಿಮಾನಿಯೊಬ್ಬರು, ಎದ್ದೇಳು ಮಂಜುನಾಥ ಸಿನಿಮಾ ಒಪ್ಪಿಕೊಳ್ಳಲು ನೀವು ಎಷ್ಟು ದಿನ ಸಮಯ ತೆಗೆದುಕೊಂಡ್ರಿ ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಗ್ಗೇಶ್ ಒಂದು ವಾರ ಸಮಯ ತೆಗೆದುಕೊಂಡೆ ಅಂತಾ ಹೇಳಿದ್ದಾರೆ.

ಎದ್ದೇಳು ಮಂಜುನಾಥ ಸಿನಿಮಾ ಕಲೆಕ್ಷನ್ ಬಗ್ಗೆ ಜಗ್ಗೇಶ್ ಹೇಳಿದ ಸತ್ಯ

ಇದ್ರ ಜೊತೆಗೆ ಈ ಚಿತ್ರ ಆ ಕಾಲದಲ್ಲಿ 90 ಲಕ್ಷ ರೂಪಾಯಿ ಬಂಡವಾಳದಲ್ಲಿ ನಿರ್ಮಾಣವಾಗಿ 5 ಕೋಟಿ ಗಳಿಕೆ ಕಂಡಿತ್ತು ಎಂದು ಜಗ್ಗೇಶ್ ಅಚ್ಚರಿ ವಿಷ್ಯವನ್ನ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನ ಕೇವಲ 25 ದಿನದಲ್ಲೀ ಚಿತ್ರೀಕರಣ ಪೂರ್ಣ ಗೊಳಿಸಲಾಗಿತ್ತಂತೆ. ಜಗ್ಗೇಶ್ ಜೊತೆ ತಬಲಾ ನಾಣಿ ಹಾಗೂ ಯಜ್ಞಾ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.

ಜಗ್ಗೇಶ್

ಅನೂಪ್ ಸೀಳಿನ್ ಸಂಗೀತವಿದ್ದ ಈ ಚಿತ್ರ ಜಗ್ಗೇಶ್ ಸಿನಿ ಬದುಕಿನಲ್ಲಿ ಸದಾ ನೆನಪಿನಲ್ಲಿ ಉಳಿಯುವ ಚಿತ್ರವಾಗಿದೆ. ಈ ಚಿತ್ರ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡು, ನಿರ್ದೇಶಕ ಗುರು ಪ್ರಸಾದ್ ಅವರಿಗೆ ರಾಜ್ಯ ಪ್ರಶಸ್ತಿ ಸಹ ಲಭಿಸಿತ್ತು. ನನ್ನ ಸಿನಿಮಾ ಜರ್ನಿಯಲ್ಲಿ ನಾನು ಅಭಿನಯಿಸಿರುವ ಎದ್ದೇಳು ಮಂಜುನಾಥ ಸಿನಿಮಾ ಆ ಕಾಲದಲ್ಲಿ 5 ಕೋಟಿ ಕಲೆಕ್ಷನ್ ಮಾಡಿದ್ದು ಜಗ್ಗೇಶ್ ಅವ್ರ ಸ್ಟಾರ್​​ಡಮ್ ಅನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿತ್ತು.

ABOUT THE AUTHOR

...view details