ನವರಸ ನಾಯಕ ಜಗ್ಗೇಶ್ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆ್ಯಕ್ಟೀವ್ ಆಗಿರುವ ನಟ. ಆಗಾಗ್ಗೆ ಕುತೂಹಲ ಮೂಡಿಸುವ ವಿಚಾರಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳನ್ನ ಖುಷಿ ಪಡಿಸುತ್ತಾರೆ.
ಹೌದು, ಇದೀಗ ತಮ್ಮ ತಂದೆ ಶಿವಲಿಂಗಪ್ಪನವರ ಜೊತೆ ತೆಗೆಸಿದ ಕೊನೆಯ ಫೋಟೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿರುವ ಅವರು, ಯುವ ಸಮಾಜಕ್ಕೆ ಸಂದೇಶವೊಂದನ್ನು ರವಾನಿಸಿದ್ದಾರೆ.
ಜಗ್ಗೇಶ್ ಮತ್ತು ತಂದೆ ಶಿವಲಿಂಗಪ್ಪ ಟ್ವಿಟ್ಟರ್ನಲ್ಲಿ ಸುದೀರ್ಘವಾಗಿ ಬರೆದಿರುವ ಜಗ್ಗೇಶ್, ನನ್ನ 50ನೇ ಹುಟ್ಟುಹಬ್ಬದ ಸಂದರ್ಭ. ಮಗನ ಹುಟ್ಟುಹಬ್ಬ ಬಂದರೆ ಬೆಳಗಿನಜಾವ 5 ಗಂಟೆಗೆ ಮನೆ ಮುಂದೆ ಇರುತ್ತಿದ್ದರು ಅಪ್ಪ. ಪ್ರತಿಯೊಬ್ಬ ತಂದೆಗೆ ತನ್ನ ಬೆಳವಣಿಗೆಗಿಂತ ತನ್ನ ಮಕ್ಕಳು ಸಾಧಿಸಿಬಿಟ್ಟರೆ ತಂದೆಗೆ ಆಗುವ ಆನಂದ ಬ್ರಹ್ಮಾನಂದ.
ಆ ವಿಷಯದಲ್ಲಿ ನಾನು ಅಪ್ಪನಿಗೆ ಹೆಮ್ಮೆ ಪಡುವಂತೆ ರಾಯರ ದಯೆಯಿಂದ ಬೆಳೆದು ಅಪ್ಪನ ಹಾಗೂ ವಂಶದ ಗೌರವ ಹೆಚ್ಚಿಸಿದೆ. ಯಾಕೆ ಜನ್ಮಕೊಟ್ಟ ತಂದೆಗೆ ತನ್ನ ಬೆಳವಣಿಗೆಗಿಂತ ಮಕ್ಕಳ ಬೆಳವಣಿಗೆ ನೋಡಲು ಶಬರಿಯಂತೆ ಕಾಯೋದು ಎಂದರೆ ಮಗ ಗೆದ್ದರೆ ತಾನು ಗೆದ್ದಂತೆ ತನ್ನ ವಂಶ ಗೆದ್ದಂತ ಭಾವ.
ಜಗ್ಗೇಶ್ ಮತ್ತು ಪತ್ನಿ ಪರಿಮಳ ಎಲ್ಲಾ ಯುವ ಸಮಾಜಕ್ಕೂ ನನ್ನ ಸಂದೇಶ ದಯಮಾಡಿ ಎಷ್ಟೇ ಶ್ರಮವಾದರು ಅಪಮಾನವಾದರು, ಅವಮಾನವಾದರು ಸಹಿಸಿ. ನಿಮ್ಮ ಮಿತಿಯಲ್ಲಿ ನಿಮ್ಮ ಇಷ್ಟ ಕ್ಷೇತ್ರದಲ್ಲಿ ಅಪ್ಪ ಬದುಕಿರುವಾಗಲೇ ಜೀವನ ಗೆದ್ದು ಅಪ್ಪನಿಗೆ ಹೆಮ್ಮೆ ಪಡುವಂತೆ ಮಾಡಿ ಬಿಡಿ ಎಂದು ಜಗ್ಗೇಶ್ ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದಾರೆ.