ಟಾಲಿವುಡ್ ಡಾರ್ಲಿಂಗ್ ಪ್ರಭಾಸ್ ಅಭಿನಯದ, ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಹೈ ವೋಲ್ಟೇಜ್ ಚಿತ್ರ ಸಲಾರ್. ಕನ್ನಡ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ನಿರ್ಮಿಸುತ್ತಿರುವ ಸಲಾರ್ ಸಿನಿಮಾ ಬಗ್ಗೆ ಇಂಟ್ರಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಚಿತ್ರದ ಪ್ರಮುಖ ಪಾತ್ರ ರಿವೀಲ್ ಮಾಡುವುದಾಗಿ ಸಿನಿಮಾ ತಂಡ ಈ ಹಿಂದೆ ಹೇಳುವ ಮೂಲಕ ಅಭಿಮಾನಿಗಳ ಕುತೂಹಲ ಹೆಚ್ಚಿಸಿದ್ದರು. ಇದೀಗ ಸಲಾರ್ ಸಿನಿಮಾದಿಂದ ಭರ್ಜರಿ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ಭಯಾನಕ ಖಳನಟನನ್ನ ಹೊಂಬಾಳೆ ಫಿಲ್ಮ್ ಸಂಸ್ಥೆ ರಿವೀಲ್ ಮಾಡಿದೆ.
ಸಲಾರ್ ಸಿನಿಮಾದ 'ರಾಜಮನಾರ್' ಪಾತ್ರವನ್ನು ಪರಿಚಯಿಸಿದ್ದಾರೆ. ದಕ್ಷಿಣ ಭಾರತದ ಸಿನಿ ಇಂಡಸ್ಟ್ರಿಯಲ್ಲಿ ಬಹು ಬೇಡಿಕೆ ಇರುವ ನಟ ಜಗಪತಿ ಬಾಬು 'ರಾಜಮನಾರ್' ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.
ರಾಜಮನಾರ್ ಆಗಿ ಜಗಪತಿ ಬಾಬು, ಪ್ರಭಾಸ್ ಎದುರು ಅಬ್ಬರಿಸಲಿದ್ದಾರೆ. ತಂದೆ ಪಾತ್ರ, ಖಳನಟನ ಪಾತ್ರದಲ್ಲಿ ಹೆಚ್ಚು ಕಾಣಿಸಿಕೊಂಡಿರುವ ಜಗಪತಿ ಬಾಬು, ಸಲಾರ್ ಸಿನಿಮಾದ ಭಯಾನಕ ರಾಜಮನಾರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಸಿನಿ ತಂಡ ರಾಜಮನಾರ್ ಆಗಿ ಜಗಪತಿ ಬಾಬು ಪೋಸ್ಟರ್ ಅನ್ನು ರಿವೀಲ್ ಮಾಡಿದೆ. ಈ ಪೋಸ್ಟರ್ನಲ್ಲಿ ಸುಕ್ಕು ಕಟ್ಟಿರುವ ವಯಸ್ಸಾದ ಮುಖ, ಬಾಯಲ್ಲಿ ಸಿಗರೇಟ್, ಕಣ್ಣಲ್ಲೇ ಕೊಲ್ಲುವ ಸೇಡು ತುಂಬಿರುವ ಲುಕ್ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.