ಕರ್ನಾಟಕ

karnataka

ETV Bharat / sitara

ಸಣ್ಣ ಪಟ್ಟಣದ ಕಥೆಯಾಧಾರಿತ ಹಿಂದಿ ಚಿತ್ರಗಳು ಮೂಡಿಬರುತ್ತಿರುವುದಕ್ಕೆ ಬಿಗ್​ಬಿ ಮೆಚ್ಚುಗೆ - amitabh bachchan on films with shoojit sircar

ಹಿಂದಿ ಸಿನಿಮಾಳು ನಗರ ಪಟ್ಟಣಗಳ ಕಥೆಗಳ ಕಡೆ ಮುಖ ಮಾಡಿರುವುದು ಸ್ವಾಗತಾರ್ಹ ಎಂದು ಅಮಿತಾಬ್​ ಬಚ್ಚನ್​ ಹೇಳಿದ್ದಾರೆ.

It's a welcome trend, says Big B on Hindi cinema's return to small town stories
ಹಿಂದಿ ಸಿನಿಮಾಗಳು ಸಣ್ಣ ಪಟ್ಟಣದ ಕಥೆಗಳ ಕಡೆ ಮೂಖ ಮಾಡಿರುವುದು ಸ್ವಾಗತಾರ್ಹ : ಬಿಗ್​ ಬಿ

By

Published : Jun 13, 2020, 2:18 AM IST

ಹಿಂದಿ ನಿರ್ದೇಶಕರು ನಗರ-ಪಟ್ಟಣಗಳ ಬಗ್ಗೆ ಸಿನಿಮಾ ಮಾಡಲು ಹೊರಟಿರುವುದು ಸ್ವಾಗತಾರ್ಹ ಎಂದು ಬಿಗ್​ಬಿ ಅಮಿತಾಬ್​ ಬಚ್ಚನ್​​ ಹೇಳಿದ್ದಾರೆ. ಅವರು ಅಭಿನಯಿಸಿರುವ 'ಗುಲಾಬೊ ಸಿತಾಬೋ' ಸಿನಿಮಾದ ಲಕ್ನೋ ಸೆಟ್​​ನಲ್ಲಿ ಈ ಬಗ್ಗೆ ಮಾತನಾಡಿದ್ದಾರೆ.

ಇನ್ನು 'ಗುಲಾಬೊ ಸಿತಾಬೊ' ಸಿನಿಮಾ ಅಮೇಜಾನ್​​​​ ಪ್ರೈಮ್​ನಲ್ಲಿ ರಿಲೀಸ್​ ಆಗಿದ್ದು, ಚಿತ್ರದಲ್ಲಿ ಅಮಿತಾಬ್​ ಮಿರ್ಜಾ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಸಿನಿಮಾದಲ್ಲಿ ಆಯುಷ್ಮಾನ್​ ಕುರಾನ್​​​ ಕೂಡ ಅಭಿನಯಿಸಿದ್ದಾರೆ.

ಇನ್ನು ಹಿಂದಿ ಸಿನಿಮಾಗಳು ನಗರ ಪಟ್ಟಣಗಳ ಹಿನ್ನೆಲೆಯಲ್ಲಿ ನಿರ್ಮಾಣವಾಗುತ್ತಿರುವ ಬಗ್ಗೆ ಮಾತನಾಡಿದ ಅಮಿತಾಬ್​, ಸಿನಿಮಾ ನಿರ್ದೇಶಕರಲ್ಲಿ ಬಹುಪಾಲು ಮಂದಿ ಸಣ್ಣ ಪಟ್ಟಣಗಳಿಂದ ಬಂದವರು. ಅಲ್ಲದೆ ಅಲ್ಲಿನ ಸಂಬಂಧಗಳ ಬಗ್ಗೆಯೂ ಸಂಪರ್ಕ ಹೊಂದಿದ್ದಾರೆ, ಅದ್ದರಿಂದ ಆ ಸವಿ ನೆನಪುಗಳನ್ನು ಮತ್ತೆ ಮೆಲುಕು ಹಾಕಲು ಈ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅಮಿತಾಬ್​ ಹೇಳಿದ್ದಾರೆ.

ಅಮಿತಾಬ್​ ಬಚ್ಚನ್​ ಅಷ್ಟು ದೊಡ್ಡ ನಟನಾದರೂ ಕೂಡ ಒಮ್ಮೆಯೂ ತಮ್ಮ ಪಾತ್ರದ ಬಗ್ಗೆ ನಿರ್ದೇಶಕರನ್ನು ಪ್ರಶ್ನೆ ಮಾಡಿಲ್ಲವಂತೆ. ಇದಕ್ಕೆ ಸಾಕ್ಷಿಯಂತಿದೆ 'ಗುಲಾಬೊ ಸಿತಾಬೊ' ಸಿನಿಮಾದಲ್ಲಿನ ಮಿರ್ಜಾ ಪಾತ್ರ.

ABOUT THE AUTHOR

...view details