ದಕ್ಷಿಣ ಭಾರತದ ನಟಿಯರಲ್ಲಿ ಅತಿ ಹೆಚ್ಚು ಫ್ಯಾನ್ ಫಾಲೋಯಿಂಗ್ ಹೊಂದಿರುವ ನಾಯಕಿಯರಲ್ಲಿ ಸಾಯಿ ಪಲ್ಲವಿ ಕೂಡಾ ಒಬ್ಬರು. 2005 ರಲ್ಲಿ ತಮಿಳಿನ 'ಕಸ್ತೂರಿ ಮಾನ್' ಸಿನಿಮಾದಲ್ಲಿ ಸಣ್ಣ ಪಾತ್ರವೊಂದರಲ್ಲಿ ನಟಿಸುವ ಮೂಲಕ ಪಲ್ಲವಿ ಸಿನಿ ಕರಿಯರ್ ಆರಂಭಿಸಿದರು.
ಆ ನಿರ್ದೇಶಕನ ಮೇಲೆ ಸಾಯಿ ಪಲ್ಲವಿಗೆ ಲವ್ ಆಗಿದ್ಯಾ? ರೌಡಿ ಬೇಬಿ ಪ್ರಿಯತಮೆಯ ಮನಸ್ಸು ಕದ್ದಿದ್ದು ಯಾರು?
'ಫಿದಾ' ನಟಿ ಸಾಯಿ ಪಲ್ಲವಿಗೆ ಫಿದಾ ಆಗದವರಿಲ್ಲ. ಈ ಸುಂದರಿ ಕೆಲವು ದಿನಗಳಿಂದ ತಮಿಳು ಖ್ಯಾತ ನಿರ್ದೇಶಕನೊಂದಿಗೆ ಸುತ್ತಾಡುತ್ತಿದ್ದು ಇಬ್ಬರೂ ಲವ್ ಮಾಡುತ್ತಿದ್ಧಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಇದುವರೆಗೂ ಈ ಬಗ್ಗೆ ಪಲ್ಲವಿ ಮಾತ್ರ ತುಟಿಬಿಚ್ಚಿಲ್ಲ.
2008 ರಲ್ಲಿ 'ಧಾಮ್ ಧೂಮ್' ಸಿನಿಮಾದಲ್ಲಿ ನಾಯಕಿಯ ಸ್ನೇಹಿತೆ ಪಾತ್ರದಲ್ಲಿ ನಟಿಸಿದ್ದ ಸಾಯಿ ಪಲ್ಲವಿ 6 ವರ್ಷಗಳ ಬಳಿಕ ಮಲಯಾಳಂ ಭಾಷೆಯ 'ಪ್ರೇಮಂ' ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಮತ್ತೆ ಸಿನಿರಂಗಕ್ಕೆ ಬಂದರು. ನಂತರ ಟಾಲಿವುಡ್ಗೂ ಬಂದ ಆಕೆ 'ಫಿದಾ' ಚಿತ್ರದಲ್ಲಿ ನಟಿಸುವ ಮೂಲಕ ಎಲ್ಲರೂ ಆಕೆಗೆ ಫಿದಾ ಆಗುವಂತೆ ಮಾಡಿದರು. ಇತ್ತೀಚೆಗೆ ಆಕೆ ಧನುಷ್ ಜೊತೆ ನಟಿಸಿದ 'ಮಾರಿ' ಸಿನಿಮಾದ ರೌಡಿ ಬೇಬಿ ಹಾಡನ್ನು ಯೂಟ್ಯೂಬ್ನಲ್ಲಿ 340 ಮಿಲಿಯನ್ ಮಂದಿ ವೀಕ್ಷಿಸಿದ್ದಾರೆ. ಪಲ್ಲವಿ ಒಳ್ಳೆ ನಟಿ ಮಾತ್ರವಲ್ಲ ಒಳ್ಳೆಯ ಡ್ಯಾನ್ಸರ್ ಕೂಡಾ.
ಇನ್ನು ಸಾಯಿ ಪಲ್ಲವಿಗೆ ಖ್ಯಾತ ತಮಿಳು ನಿರ್ದೇಶಕರೊಬ್ಬರು ಮೇಲೆ ಲವ್ ಆಗಿದೆ ಅಂತ ಕಾಲಿವುಡ್ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆ ನಿರ್ದೇಶಕ ಹಾಗೂ ಸಾಯಿ ಪಲ್ಲವಿ ಜೊತೆಯಾಗಿ ಹೆಚ್ಚು ಓಡಾಡುತ್ತಿದ್ದಾರಂತೆ. ಆದರೆ ಈ ವಿಚಾರವಾಗಿ ನಟಿ ಏನನ್ನೂ ಮಾತನಾಡಿಲ್ಲ. ಇದೀಗ ಈ ವಿಷಯವಾಗಿ ಎಲ್ಲರೂ ಸಾಯಿ ಪಲ್ಲವಿ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಾರೆ.