ಕರ್ನಾಟಕ

karnataka

ETV Bharat / sitara

ಪದ್ಮಾವತಿಗೆ ಕೂಡಿ ಬಂತು ಕಂಕಣ ಭಾಗ್ಯ... ಗೆಳೆಯನ ಜತೆ ಸಪ್ತಪದಿ ತುಳಿತಾರಾ ರಮ್ಯಾ? - ರಾಫೆಲ್

ರಾಫೆಲ್​ ಎಲೆಕ್ಟ್ರಾನಿಕ್ ಉಪಕರಣಗಳ ಉದ್ಯಮಿ​ ಎಂದು 2011 ರಲ್ಲಿ ರಮ್ಯಾ ಪರಿಚಯಿಸಿದ್ದರು. ಈ ಜೋಡಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಂಡಿತ್ತು. ಇದೀಗ ರಾಫೆಲ್​ ಅವರನ್ನು ರಮ್ಯಾ ಮದುವೆಯಾಗ್ತಿದ್ದಾರೆ ಅನ್ನೋ ಸುದ್ದಿ ಕೇಳಿಬಂದಿದೆ.

actress ramya

By

Published : Aug 15, 2019, 7:54 AM IST

ಲೋಕಸಭೆ ಚುನಾವಣೆ ಬಳಿಕ ಕಾಣದಂತೆ ಮಾಯವಾಗಿದ್ದ ನಟಿ ಕಮ್​ ರಾಜಕಾರಣಿ ರಮ್ಯಾ, ಒಳ್ಳೆಯ ವಿಚಾರವೊಂದಕ್ಕೆ ಈಗ ಸುದ್ದಿಯಲ್ಲಿದ್ದಾರೆ. ಸ್ಯಾಂಡಲ್​​ವುಡ್​​​ ಕ್ವೀನ್ ಮದುವೆ ಆಗಲಿದ್ದಾರಂತೆ.

ಮೋಹಕ ನಟಿ, ಒಂದು ಕಾಲದಲ್ಲಿ ಕನ್ನಡ ಸಿನಿಮಾರಂಗದಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿ, ತಮಿಳು ಭಾಷೆಯಲ್ಲಿ ಅಭಿನಯಿಸಿ, ‘ಅಮೃತಧಾರೆ’ ಸಿನಿಮಾದಲ್ಲಿ ಬಿಗ್​​ಬಿ ಅಮಿತಾಭ್ ಬಚ್ಚನ್ ಅವರ ಜೊತೆ ಒಂದು ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ರಮ್ಯಾ, ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸುದ್ದಿ ಕೇಳಿ ಬಂದಿದೆ. ಪೋರ್ಚುಗಲ್ ಮೂಲದ ಬಹುಕಾಲದ ಸ್ನೇಹಿತ ರಾಫೆಲ್ ಜತೆ ದುಬೈನಲ್ಲಿ ಹಸೆಮಣೆ ಏರಲಿದ್ದಾರಂತೆ.

ರಾಫೆಲ್​ ಜತೆ ರಮ್ಯಾ

ರಾಫೆಲ್​ ಎಲೆಕ್ಟ್ರಾನಿಕ್ ಉಪಕರಣಗಳ ಬ್ಯುಸಿನೆಸ್​ಮ್ಯಾನ್​ ಎಂದು 2011 ರಲ್ಲಿ ರಮ್ಯಾ ಪರಿಚಯಿಸಿದ್ದರು. ಈ ಜೋಡಿ ಐಪಿಎಲ್ ಕ್ರಿಕೆಟ್ ಪಂದ್ಯಗಳ ವೇಳೆ ಕಾಣಿಸಿಕೊಂಡಿದ್ದರು. ರಮ್ಯಾ ಅಭಿನಯದ ‘ಸಂಜು ವೆಡ್ಸ್ ಗೀತಾ’ ಹಾಡುಗಳ ಬಿಡುಗಡೆ ಸಮಾರಂಭಕ್ಕೂ ಸಹ ರಾಫೆಲ್ ಆಗಮಿಸಿದ್ದರು. ಎಂಟು ವರ್ಷಗಳ ಸ್ನೇಹದ ನಂತರ ಇವರಿಬ್ಬರು ಮದುವೆ ಆಗುತ್ತಿರುವ ಸುದ್ದಿ ಹೊರಬಿದ್ದಿದೆ.

ಅಭಿ ಸಿನಿಮಾ ಇಂದ ಚಿತ್ರರಂಗಕ್ಕೆ ಕಾಲಿಟ್ಟ ರಮ್ಯಾ ಅವರ ಕೊನೆಯ ಚಿತ್ರ ಕೋಡಿ ರಾಮಕೃಷ್ಣ ನಿರ್ದೇಶನದ ‘ನಾಗರಹಾವು’. ಈ ಸಿನಿಮಾದಲ್ಲಿ ದಿಗಂತ್ ಜೊತೆ ಅಭಿನಿಸಿದ ಬಳಿಕ ಬೇರೆ ಯಾವ ಚಿತ್ರದಲ್ಲೂ ಇವರು ಕಾಣಿಸಿಕೊಳ್ಳಲಿಲ್ಲ. ರಾಜಕೀಯದಲ್ಲೇ ಹೆಚ್ಚು ಸಕ್ರಿಯರಾಗಿದ್ದರು.

ABOUT THE AUTHOR

...view details