ಕರ್ನಾಟಕ

karnataka

By

Published : Jun 18, 2020, 10:57 PM IST

ETV Bharat / sitara

ಎವರ್​​​​ ಗ್ರೀನ್​ ಓಂ ಸಿನಿಮಾದ ಇಂಟರೆಸ್ಟಿಂಗ್​​ ಮಾಹಿತಿಗಳು ಇಲ್ಲಿವೆ ನೋಡಿ

ಕನ್ನಡ ಚಿತ್ರ ರಂಗದಲ್ಲಿ ಅತಿ ಹೆಚ್ಚು ಬಾರಿ ರೀ ರಿಲೀಸ್​​ ಆದ ಸಿನಿಮಾ ಅಂದ್ರೆ ಉಪೇಂದ್ರ ನಿರ್ದೇಶನದ ಓಂ ಸಿನಿಮಾ.ಈ ಸಿನಿಮಾದ ಬಗ್ಗೆ ಇಲ್ಲಿವೆ ಇಂಟರೆಸ್ಟಿಂಗ್​ ಮಾಹಿತಿಗಳು.

Interesting information on Evergreen Om Cinema
ಎವರ್​​​​ ಗ್ರೀನ್​ ಓಂ ಸಿನಿಮಾದ ಇಂಟರೆಸ್ಟಿಂಗ್​​ ಮಾಹಿತಿಗಳು ಇಲ್ಲಿವೆ ನೋಡಿ

ಭಾರತೀಯ ಚಿತ್ರರಂಗದಲ್ಲಿ ಒಂದು ಸಿನಿಮಾ ಬಿಡುಗಡೆ ಆದ್ರೆ, ಆ ಸಿನಿಮಾ ಮತ್ತೆ ಪ್ರಸಾರ ಆಗೋದು ಟಿವಿಗಳ ಮಾತ್ರ. ಹಾಗೂ ಅಭಿಮಾನಿಗಳ ಒತ್ತಾಯದ ಮೇರೆಗೆ ಒಂದು ಅಥವಾ ಎರಡು ಬಾರಿ ಸಿನಿಮಾವನ್ನ ಬಿಡುಗಡೆ ಮಾಡಬಹುದು. ಆದರೆ ಇಲ್ಲೊಂದು ಕನ್ನಡ ಸಿನಿಮಾ ಅತೀ ಹೆಚ್ಚು ಬಾರಿ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವ ಮೂಲಕ ಹೊಸ ಅಧ್ಯಾಯ ಬರೆದಿದೆ.

ಶಿವರಾಜ್​ ಕುಮಾರ್​​

ಅಷ್ಟಕ್ಕೂ ಯಾವುದು ಆ ಸಿನಿಮಾ ಅಂತೀರಾ, ಅದುವೆ ಓಂ ಸಿನಿಮಾ. 1995 ರಂದು ರಿಲೀಸ್ ಆಗಿ, ಕೆಲವು ದಿನಗಳ ಹಿಂದೆ ಸಿಲ್ವರ್ ಜ್ಯೂಬ್ಲಿಯನ್ನ ಆಚರಿಸಿಕೊಂಡ ಓಂ ಸಿನಿಮಾ, ಎಷ್ಟು ಬಾರಿ ರಿಲೀಸ್ ಆಗಿದೆ, ಈ ಸಿನಿಮಾ ರಿಲೀಸ್ ಆದ ಟೈಮಲ್ಲಿ ಎಷ್ಟು ಹಣ ಕಲೆಕ್ಷನ್ ಮಾಡ್ತಾ ಇತ್ತು ಅನ್ನೋದರ ಬಗ್ಗೆ ಇಲ್ಲಿದೆ ಮಾಹಿತಿ.

ಶಿವರಾಜ್​ ಕುಮಾರ್​​

ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಓಂ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗು ಪ್ರೇಮಾ ಅಭಿನಯದ, ಉಪೇಂದ್ರ ನಿರ್ದೇಶನದ ಓಂ ಸಿನಿಮಾ ಶುರುವಾಗಿದ್ದು ಇಂಟ್ರಸ್ಟ್ರಿಂಗ್.

ಓಂ ಚಿತ್ರ ತಂಡ

ಇಂದು ಕನ್ನಡ ಚಿತ್ರರಂಗದಲ್ಲಿ ಬುದ್ದಿವಂತ ನಿರ್ದೇಶಕ ಅಂತಾ ಕರೆಸಿಕೊಂಡ ಉಪೇಂದ್ರ, ಕಾಲೇಜು ದಿನಗಳಲ್ಲಿ ಬರೆದ ಸ್ಕ್ರಿಪ್ಟ್‌ ಓಂ. ಈ ಸಿನಿಮಾ ಕಥೆ ಬರೆದಾಗ ಉಪೇಂದ್ರ ಮೊದಲಿಗೆ ನಟ ಕುಮಾರ್ ಗೋವಿಂದನ್ ಹಾಕ್ಕೊಂಡು ಸಿನಿಮಾ ಮಾಡಬೇಕು ಅಂದು ಕೊಂಡಿದ್ರು. ಆದರೆ ಕೆಲವು ಕಾರಣಗಳಿಂದ ಈ ಓಂ ಸಿನಿಮಾ ಕಥೆಯನ್ನ ಶಿವರಾಜ್ ಕುಮಾರ್​​ಗೆ ಮಾಡಬೇಕಾದ ಕಾಲ ಕೂಡಿ ಬಂತು.

ರಾಜ್​ಕುಮಾರ್​​ ಜೊತೆ ಉಪೇಂದ್ರ

ಡಾ ರಾಜ್ ಕುಮಾರ್ ಹಾಗು ಸಹೋದರ ವರದಾಜ್ ಸ್ವತಃ ಕುಳಿತು ಓಂ ಸಿನಿಮಾದ ಕಥೆಯನ್ನ ಕೇಳಿದ್ರಂತೆ.. ಅಣ್ಣಾವ್ರು ಓಂ ಸಿನಿಮಾ ಕಥೆ ಕೇಳಿ ಉಪೇಂದ್ರಗೆ 5000 ಸಾವಿರ ಅಡ್ವಾನ್ಸ್ ಹಣ ಕೊಟ್ಟು ಈ ಸಿನಿಮಾ ಕಥೆ ಮತ್ತಷ್ಟು ಬದಲಾವಣೆ ಮಾಡಿ ಅಂತಾ ಹೇಳಿದ್ರಂತೆ.

ಓಂ ಚಿತ್ರೀಕರಣ

ನಿರ್ದೇಶಕ ಉಪೇಂದ್ರ 1995ರಲ್ಲೇ ರಿಯಲ್ ಡಾನ್​​ಗಳನ್ನ ಇಟ್ಟುಕೊಂಡು ಓಂ ಸಿನಿಮಾ ಮಾಡಿದ್ದು ಒಂದು ಚಾಲೆಂಜಿಂಗ್ ಆಗಿತ್ತು. ಇನ್ನು ಓಂ ಅಕ್ಷರಕ್ಕೆ ಸಂಬಂಧಪಟ್ಟಂತೆ ಸಿನಿಮಾದಲ್ಲಿ ಹಾಡು ಇಡುವ ಪ್ಲ್ಯಾನ್ ಯಾವುದು ಇರಲಿಲ್ಲ, ಆದರೆ ಅಣ್ಣಾವ್ರ ಸಲಹೆ ಮೇರೆಗೆ ಹೇ ದಿನಕರ ಹಾಡನ್ನು ಮಾಡಲಾಯಿತ್ತು.

ಓಂ ಚಿತ್ರೀಕರಣ

ಹೀಗೆ ದಾಖಲೆ ಮಾಡಿರೋ ಓಂ ಸಿನಿಮಾದ ಬಗ್ಗೆ ಒಂದು ರೋಚಕ ಕಥೆ ಇದೆ. ಥಿಯೇಟರ್​​ಗಳಲ್ಲಿ ಲಾಭ ಕಡಿಮೆ ಆದಾಗ, ವಿತರಕರು ಕೊಂಚ ಕಷ್ಟದಲ್ಲಿದ್ದಾಗ, ಅವರೆಲ್ಲರಿಗೂ ಆಪತ್ಭಾಂಧವ ಈ ಓಂ ಸಿನಿಮಾ ಅನ್ನೋದು ಕುತೂಹಲಕಾರಿ.

ಕನ್ನಡ ಸಿನಿಮಾ ಇತಿಹಾಸದಲ್ಲಿ, ಎಷ್ಟು ಬಾರಿ ನೋಡಿದರೂ, ಮತ್ತೆ ಮತ್ತೆ ನೋಡಬೇಕು ಎನ್ನುವಂತಹ ಬೋರಾಗದೇ ಇರುವ ಸಿನಿಮಾಗಳ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿರುವ ಓಂ. ಈ ಚಿತ್ರ ಬಿಡುಗಡೆಯಾಗಿ 25 ವರ್ಷಗಳು ಆಗಿದ್ದರೂ ಕೂಡ ಈಗಲೂ ಓಂ ಸಿನಿಮಾ ರಿಲೀಸ್ ಆದ್ರೆ, ಜನ ಮುಗಿಬಿದ್ದು ನೋಡುತ್ತಾರೆ. ಪ್ರತಿ ಬಾರಿ ಓಂ ಬಿಡುಗಡೆಯಾದಾಗಲೂ 10ರಿಂದ 20 ಲಕ್ಷ ರೂಪಾಯಿ ಕಲೆಕ್ಷನ್ ಆಗ್ತಾ ಇತ್ತು ಅನ್ನೋದು ಇಂಟರಸ್ಟಿಂಗ್​​.

ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಈ ಚಿತ್ರ 18 ವರ್ಷಗಳ ಬಳಿಕ ಖಾಸಗಿ ಟಿವಿ ವಾಹಿನಿಗೆ ಮಾರಾಟವಾಗಿರುವುದು ವಿಶೇಷಗಳಲ್ಲಿ ವಿಶೇಷ. ಈ ಸಿನಿಮಾ ತೆರೆಕಂಡು 18 ವರ್ಷ ಆದ್ರೂ 2.5 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿದೆ. ಅಷ್ಟೇ ಅಲ್ಲದೆ ಈ ಚಿತ್ರ ಆವತ್ತಿನ ದಿನಗಳಲ್ಲಿ ಬಾಕ್ಸ್ ಆಫೀಸಲ್ಲಿ ರು.25 ಕೋಟಿ ಗಳಿಸುವ ಮೂಲಕ ದಾಖಲೆ ಬರೆದಿತ್ತು.

ಶಿವರಾಜ್​ ಕುಮಾರ್​​

ಈ ಸಿನಿಮಾ ವಜ್ರೇಶ್ವರಿ ಕಂಬೈನ್ಸ್​​ನಲ್ಲಿ ನಿರ್ಮಾಣವಾಗಿದ್ದು, 50 ಲಕ್ಷ ರೂಪಾಯಿ ಖರ್ಚು ಮಾಡಲಾಗಿತ್ತು. ಈ ಸಿನಿಮಾಕ್ಕೆ ಸಂಭಾಷಣೆ ಬರೆದಿದ್ದ ಮುರಳಿ ಮೋಹನ್ ಹೇಳುವ ಪ್ರಕಾರ ಈ ಚಿತ್ರದ ರಿಮೇಕ್ ರೈಟ್ಸ್ 55 ಲಕ್ಷ ರೂಪಾಯಿಗೆ ಮಾರಾಟ ಆಯಿತಂತೆ.

ಇಷ್ಟೇಲ್ಲಾ ಸ್ಪೆಷಾಲಿಟಿ ಈ ಸಿನಿಮಾ ಕರ್ನಾಟಕದಾದ್ಯಂತ 400 ಥಿಯೇಟರ್​​ಗಳಲ್ಲಿ 650 ಬಾರಿ ರೀ ರಿಲೀಸ್ ಆಗಿದೆ.‘

ABOUT THE AUTHOR

...view details