ಕೊರೊನಾದಿಂದ ಆರ್ಥಿಕ ನಷ್ಟ ಅನುಭವಿಸುವ ಸಿನಿ ಕಾರ್ಮಿಕರಿಗೆ ನೆರವಾಗಲು ಕಮರ್ ಫಿಲಂ ಫ್ಯಾಕ್ಟರಿ (ಕೆಎಫ್ಎಫ್) ಸಂಸ್ಥೆಯು ನವೆಂಬರ್ ಕೊನೆಯ ವಾರದಲ್ಲಿ ಇಂಡಿಯನ್ ಬೌಲಿಂಗ್ ಲೀಗ್ ಆಯೋಜಿಸಿದೆ.
ಸಿನಿ ಕಾರ್ಮಿಕರಿಗಾಗಿ ನವೆಂಬರ್ನಲ್ಲಿ ನಡೆಯಲಿದೆ ಇಂಡಿಯನ್ ಬೌಲಿಂಗ್ ಲೀಗ್ ಈ ಲೀಗ್ನಲ್ಲಿ 10 ತಂಡಗಳು ಪಾಳ್ಗೊಳ್ಳಲಿದ್ದು, ಪ್ರತಿ ತಂಡದಲ್ಲಿ ನಾಲ್ವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಇರಲಿದ್ದಾರೆ. ಈ ಪಂದ್ಯವು ಇಟಿಎ ಮಾಲ್ನಲ್ಲಿ ಒಂದು ವಾರಗಳ ಕಾಲ ನಡೆಯಲಿದೆ. ಈ ಒಂದು ವಾರದಲ್ಲಿ ಒಟ್ಟು 24 ಪಂದ್ಯಗಳು ನಡೆಯಲಿದ್ದು, ಸುಮಾರು 80 ಕಲಾವಿದರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇನ್ನು ಎಲ್ಲಾ ಕ್ರೀಡೆಯಂತೆ ಇಲ್ಲಿಯೂ ಕೂಡ ಅಂಪೈರ್ಗಳು ಅಂಕದ ಆಧಾರದಲ್ಲಿ ಫಲಿತಾಂಶ ನಿರ್ಧರಿಸಲಿದ್ದಾರೆ. ಗೆದ್ದ ತಂಡಗಳು ಮುಂದಿನ ಹಂತ ಪ್ರವೇಶಿಸಲಿದ್ದು, ಫೈನಲ್ ಹಣಾಹಣಿಯಲ್ಲಿ ಗೆಲ್ಲುವ ತಂಡಕ್ಕೆ ನಗದು ಬಹುಮಾನ ಮತ್ತು ಟ್ರೋಫಿ ಸಿಗಲಿದೆ.
ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ತಂಡಗಳಿಗೂ ಬಹುಮಾನ ಇರಲಿದೆ ಎಂದು ಕೆಎಫ್ಎಫ್ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಕಮರ್ ತಿಳಿಸಿದರು.
ಸೂಪರ್ ಸ್ಟಾರ್ ಉಪೇಂದ್ರ ಅವರ ಪತ್ನಿ ಪ್ರಿಯಾಂಕ ಉಪೇಂದ್ರ, ದೀಪಿಕಾ ದಾಸ್, ಅತಿಥಿ ರಾವ್, ಸಿಂಧು ಲೋಕನಾಥ್, ಕಾವ್ಯ ಶೆಟ್ಟಿ, ನೀತು, ಕೊಮಿಕ ಸಿಂಹ, ಡಾಲಿ ಧನಂಜಯ್, ಧರ್ಮ ಕೀರ್ತಿರಾಜ್, ತರುಣ್ ಚಂದ್ರ, ರಘು ಮುಖರ್ಜಿ, ದಿಗಂತ್, ಶ್ರೀನಗರ ಕಿಟ್ಟಿ, ಶಶಿ ಈಗಾಗಲೇ 80 ಮಂದಿಯ ಸೆಲೆಬ್ರಿಟಿ ಲಿಸ್ಟ್‌ನಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ.