ಕರ್ನಾಟಕ

karnataka

ETV Bharat / sitara

ಕಂಗನಾ ವರ್ಸಸ್​​ ಮಹಾರಾಷ್ಟ್ರ: ಸೆ. 9ಕ್ಕೆ ಮುಂಬೈಗೆ ಬರುವೆ, ಧೈರ್ಯವಿದ್ದರೆ ತಡೆದು ತೋರಿಸಲಿ ಎಂದ ನಟಿ!

ಮುಂಬೈ ಪಾಕ್​​ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಟ್ವೀಟ್​ ಮಾಡಿರುವ ಕಂಗನಾ ವಿರುದ್ಧ ವಿವಿಧ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದು, ಅವರು ಮುಂಬೈಗೆ ಆಗಮಿಸದಂತೆ ವಾರ್ನ್​ ಮಾಡಲಾಗ್ತಿದೆ.

Bollywood actor Kangana Ranaut
Bollywood actor Kangana Ranaut

By

Published : Sep 4, 2020, 4:54 PM IST

Updated : Sep 4, 2020, 5:02 PM IST

ಮುಂಬೈ: ಮುಂಬೈ ಈಗ ಪಾಕ್​ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ಟ್ವೀಟ್​ ಮಾಡಿರುವ ಕಂಗನಾ ರಣಾವತ್​ ವಿರುದ್ಧ ಮಹಾರಾಷ್ಟ್ರದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು, ಅವರು ಮುಂಬೈಗೆ ಬರದಂತೆ ಅನೇಕ ಮುಖಂಡರು ಪಟ್ಟು ಹಿಡಿದಿದ್ದಾರೆ.

ಇದನ್ನು ಓದಿ:ಮುಂಬೈ ಏಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ... ಶಿವಸೇನೆ ನಾಯಕನ ಬೆದರಿಕೆಗೆ ಕಂಗನಾ ಟ್ವೀಟ್

ಶಿವಸೇನೆಯ ನಾಯಕ ಸಂಜಯ್ ರಾವತ್ ನನಗೆ ಮುಂಬೈಗೆ ಹಿಂತಿರುಗಬಾರದೆಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ. ಮುಂಬೈ ಯಾಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ?" ಎಂದು ಕಂಗನಾ ತನ್ನ ಟ್ವೀಟ್ ಮಾಡಿದ್ದರು.

ಮಹಾರಾಷ್ಟ್ರ ಗೃಹ ಸಚಿವರ ಪ್ರತಿಕ್ರಿಯೆ

ಇದೇ ವಿಚಾರವಾಗಿ ಮಾತನಾಡಿರುವ ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶಮುಖ್​, ಕಂಗನಾ ಈ ರೀತಿಯಾಗಿ ಹೇಳುವ ಯಾವುದೇ ಹಕ್ಕಿಲ್ಲ. ಅವರಿಗೆ ಮುಂಬೈ ಅಸುರಕ್ಷಿತ ಎಂಬು ಭಾವಿಸಿದರೆ ಇಲ್ಲಿ ಉಳಿದುಕೊಳ್ಳುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಕಂಗನಾ ಟೀಕೆಗೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡ ಸಂಜಯ್​ ರಾವತ್​, ತಮಗೆ ಬೆದರಿಕೆ ಕರೆ ಬಂದಿದೆ ಎಂದಾದ್ರೆ ಅವರು ಟ್ವೀಟರ್​​ನಲ್ಲಿ ಆಟ ಆಡುವುದನ್ನ ಬಿಟ್ಟು, ಸಾಕ್ಷ್ಯಾಧಾರಗಳೊಂದಿಗೆ ಪೊಲೀಸ್​ ಠಾಣೆಗೆ ತೆರಳಲಿ ಎಂದಿದ್ದಾರೆ.

ಇದೀಗ ಮತ್ತೊಂದು ಟ್ವೀಟ್​ ಮಾಡಿರುವ ಕಂಗನಾ​, ನಾನು ಮುಂಬೈಗೆ ಬರದಂತೆ ಅನೇಕರು ನನಗೆ ಬೆದರಿಕೆ ಹಾಕ್ತಿದ್ದಾರೆ. ಆದರೆ ಸೆಪ್ಟೆಂಬರ್ 9ಕ್ಕೆ ಮುಂಬೈಗೆ ಬರುತ್ತಿದ್ದೇನೆ. ಏರ್​​ಪೋರ್ಟ್​ನಲ್ಲಿ ಇಳಿದುಕೊಳ್ಳುವ ಸಮಯ ಕೂಡ ಹೇಳುತ್ತಿದ್ದೇನೆ. ಧೈರ್ಯ ಇದ್ದರೆ ತಡೆದು ತೋರಿಸಲಿ ಎಂದು ಹೇಳಿದ್ದಾರೆ.ಇದೇ ವಿಚಾರವಾಗಿ ಮಾತನಾಡಿರುವ ಶಿವಸೇನೆ ಶಾಸಕ ಪ್ರತಾಪ್​​ ಸರ್​ನಾಯ್ಕ್​, ಕಂಗನಾ ಮುಂಬೈಗೆ ಆಗಮಿಸಿದರೆ ಖಂಡಿತವಾಗಿ ಕಪಾಳಮೋಕ್ಷ ಮಾಡುತ್ತೇನೆ ಎಂದಿದ್ದಾರೆ. ಇದರ ಬೆನ್ನಲ್ಲೇ ಎಂಎನ್​​ಎಸ್​​ ಕೂಡ ಕಂಗನಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರಿಗೆ ಮಾನಸಿಕ ಚಿಕಿತ್ಸೆ ಅವಶ್ಯಕತೆ ಇದೆ ಎಂದಿದೆ.

Last Updated : Sep 4, 2020, 5:02 PM IST

ABOUT THE AUTHOR

...view details