ಕರ್ನಾಟಕ

karnataka

ETV Bharat / sitara

'ಬಾಸ್ ಜೊತೆ ಹೊಂದಾಣಿಕೆ ಮಾಡ್ಕೊಂಡ್ರೆ 'ಬಿಗ್​​ಬಾಸ್'​ ಟಿಕೆಟ್'... ಪತ್ರಕರ್ತೆಯಿಂದ ಗಂಭೀರ ಆರೋಪ - ಪತ್ರಕರ್ತೆ

ಕೊನೆಯ ಸುತ್ತಿಗೆ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​​ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಈ ಶೋನ ನಾಲ್ವರ ಕಮಿಟಿಯಲ್ಲಿ ಹೇಳಿದ್ದಾರೆ ಎಂದು ತೆಲುಗು ಬಿಗ್​ಬಾಸ್​ಗೆ ನಾಮಿನೇಟ್ ಆಗಿದ್ದ ಹೈದರಾಬಾದ್ ಮೂಲದ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

ಬಿಗ್​​ಬಾಸ್

By

Published : Jul 14, 2019, 8:55 AM IST

ಹೈದರಾಬಾದ್:ಮುಂದಿನ ವಾರದಿಂದ ಆರಂಭವಾಗಲಿರುವ ಮೂರನೇ ಆವೃತ್ತಿಯ ತೆಲುಗು ಬಿಗ್​ಬಾಸ್ ಮೇಲೆ ಗಂಭೀರ ಆರೋಪವೊಂದು ಕೇಳಿಬಂದಿದೆ.

ಕೊನೆಯ ಸುತ್ತಿಗೆ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​​ ಜೊತೆಗೆ ಹಾಸಿಗೆ ಹಂಚಿಕೊಳ್ಳಬೇಕು ಎಂದು ಈ ಶೋನ ನಾಲ್ವರ ಕಮಿಟಿಯಲ್ಲಿ ಹೇಳಿದ್ದಾರೆ ಎಂದು ತೆಲುಗು ಬಿಗ್​ಬಾಸ್​ಗೆ ನಾಮಿನೇಟ್ ಆಗಿದ್ದ ಹೈದರಾಬಾದ್ ಮೂಲದ ಪತ್ರಕರ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.

"ಮಾರ್ಚ್​ ವೇಳೆ ಬಿಗ್​​ಬಾಸ್​ನಿಂದ ಕರೆ ಬಂದಿತ್ತು. ಅದರಂತೆ ಆಕೆ ಮೂರನೇ ಆವೃತ್ತಿಯ ಬಿಗ್​​ಬಾಸ್​ಗೆ ಆಯ್ಕೆಯಾಗಿದ್ದಳು. ಈ ನಿಟ್ಟಿನಲ್ಲಿ ಶೋಗೆ ಸಂಬಂಧಿಸಿದ ನಾಲ್ವರನ್ನು ಭೇಟಿ ಮಾಡಿದ ವೇಳೆ ಅವರು ಅಸಭ್ಯವಾಗಿ ವರ್ತಿಸಿದ್ದಾರೆ ಮತ್ತು ಕೊನೆಯ ಸುತ್ತಿನಲ್ಲಿ ಆಯ್ಕೆಯಾಗಬೇಕಾದರೆ ತಮ್ಮ ಬಾಸ್​ ಜೊತೆಗೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಆಕೆಗೆ ಹೇಳಿದ್ದರಂತೆ. ಜೂನ್​ 13ರಂದು ಹಿರಿಯ ಪತ್ರಕರ್ತೆ ಹಾಗೂ ನಿರೂಪಕಿ ಸೆಕ್ಷನ್ 354ರ ಅಡಿಯಲ್ಲಿ ಶೋಗೆ ಸಂಬಂಧಪಟ್ಟ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ" ಎಂದು ಎಸಿಪಿ ಕೆ.ಎಸ್. ರಾವ್ ಹೇಳಿದ್ದಾರೆ.

ತೆಲುಗು ಬಿಗ್​ಬಾಸ್

ಇವೆಲ್ಲದರ ಜೊತೆಗೆ ಪತ್ರಕರ್ತೆಯ ದೇಹದ ಬಗ್ಗೆಯೂ ಕೆಳಮಟ್ಟದ ಪದಗಳನ್ನು ಬಳಸಿದ್ದಾರೆ ಎನ್ನುವುದನ್ನೂ ದೂರಿನಲ್ಲಿ ಹೇಳಲಾಗಿದೆ. ಸದ್ಯ ಮಹಿಳಾ ಪತ್ರಕರ್ತೆ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಪ್ರಸ್ತುತ ಈ ವಿಚಾರದ ಬಗ್ಗೆ ಶೋ ಆಯೋಜಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಾಗಾರ್ಜುನ ನಿರೂಪಣೆಯಲ್ಲಿ ಮೂಡಿಬರಲಿರುವ ಬಿಗ್​ಬಾಸ್ ಶೋ ಆರಂಭಕ್ಕೂ ಮುನ್ನ ದೊಡ್ಡ ವಿವಾದದಲ್ಲಿ ಸಿಲುಕಿದ್ದು, ಈ ಪ್ರಕರಣ ಶೋ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details