ಕರ್ನಾಟಕ

karnataka

ETV Bharat / sitara

ನನ್ನ ಹೆಸರೇಳಿಕೊಂಡು ಯಾರಾದ್ರೂ ಬೆಳೆದರೆ ಖುಷಿಯಲ್ವೆ...ಹರಿಪ್ರಿಯಾ ಮಾತನಾಡಿದ್ದು ಯಾರ ಬಗ್ಗೆ..?

ನನ್ನ ಹೆಸರು ಹೇಳಿಕೊಂಡು ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ, ನನಗೆ ಸಂತೋಷವೇ. ಅಂತಹವರಿಗೆ ಆಲ್​ ದಿ ಬೆಸ್ಟ್ ಹೇಳುತ್ತೇನೆ. ಬಿಡುವು ಮಾಡಿಕೊಂಡು ಬಿಗ್​ಬಾಸ್ ನೋಡುತ್ತೇನೆ ಎಂದು ಹರಿಪ್ರಿಯಾ ಹೇಳಿದ್ದಾರೆ.

ಹರಿಪ್ರಿಯಾ

By

Published : Oct 26, 2019, 11:39 PM IST

ಸುದೀಪ್ ಸಾರಥ್ಯದಲ್ಲಿ ಪ್ರಸಾರವಾಗುತ್ತಿರುವ ಬಿಗ್​ಬಾಸ್​​​ 7 ಆರಂಭವಾಗಿ ಎರಡು ವಾರಗಳು ಕಳೆದಿವೆ. ಈಗಾಗಲೇ ಮನೆಯಲ್ಲಿ ಟಾಸ್ಕ್​, ಸ್ಪರ್ಧಿಗಳ ನಡುವೆ ಮನಸ್ತಾಪ, ಜಗಳ ಆರಂಭವಾಗಿದೆ.

ಚೈತ್ರಾ ಕೊಟ್ಟೂರು ಬಿಗ್ ​​ಬಾಸ್ ಎಂಟ್ರಿ ಬಗ್ಗೆ ಹರಿಪ್ರಿಯಾ ಪ್ರತಿಕ್ರಿಯೆ

ಇನ್ನು ಈ ಬಾರಿ ಬಿಗ್​​ಬಾಸ್ ಮನೆಗೆ ನಟಿ, ಬರಹಗಾರ್ತಿ ಚೈತ್ರಾ ಕೊಟ್ಟೂರು ಕೂಡಾ ಎಂಟ್ರಿ ನೀಡಿದ್ದಾರೆ. 'ಸೂಜಿದಾರ' ಸಿನಿಮಾ ಬಿಡುಗಡೆಯಾದಾಗ ಹರಿಪ್ರಿಯಾ, ಚಿತ್ರದ ನಿರ್ದೇಶಕ ಹಾಗೂ ಚೈತ್ರಾ ಕೊಟ್ಟೂರು ನಡುವೆ ಸಣ್ಣ ವಿಚಾರಕ್ಕೆ ಮನಸ್ತಾಪ ಉಂಟಾಗಿತ್ತು. ಈ ಘಟನೆಯೇ ಚೈತ್ರಾ ಕೊಟ್ಟೂರು ಬಿಗ್​ಬಾಸ್ ಮನೆಗೆ ಹೋಗಲು ಕಾರಣವಾಯ್ತು ಎನ್ನಲಾಗುತ್ತಿದೆ. ಚಿತ್ರದಲ್ಲಿ ನನ್ನ ಪಾತ್ರಕ್ಕಿಂತ ಚೈತ್ರಾ ಪಾತ್ರಕ್ಕೆ ಹೆಚ್ಚಿನ ಮಹತ್ವ ಇದೆ, ಸ್ಕ್ರಿಪ್ಟ್ ಬದಲಿಸಲಾಗಿದೆ ಎಂದು ಹರಿಪ್ರಿಯಾ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಿವಾದ ಫಿಲ್ಮ್​​​ ಚೇಂಬರ್ ಮೆಟ್ಟಿಲು ಕೂಡಾ ಏರಿತ್ತು.

ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಹರಿಪ್ರಿಯಾ, 'ಸೂಜಿದಾರ' ಚಿತ್ರದಲ್ಲಿ ನಾನು ಅವರೊಂದಿಗೆ ಹೆಚ್ಚಾಗಿ ನಟಿಸಿಲ್ಲ, ಆದ್ದರಿಂದ ಅವರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ಆದರೆ ನನ್ನ ಹೆಸರು ಹೇಳಿಕೊಂಡು ಯಾರಾದರೂ ಬೆಳೆಯುತ್ತಿದ್ದಾರೆ ಎಂದರೆ, ನನಗೆ ಸಂತೋಷವೇ. ಅಂತವರಿಗೆ ಆಲ್​ ದಿ ಬೆಸ್ಟ್ ಹೇಳುತ್ತೇನೆ ಎಂದರು. ಇನ್ನು ನನಗೆ ಸುದೀಪ್ ನಿರೂಪಣೆ ಎಂದರೆ ಬಹಳ ಇಷ್ಟ. ಶೂಟಿಂಗ್, ಡಬ್ಬಿಂಗ್ ಎಂದು ಬ್ಯುಸಿ ಇದ್ದೇನೆ. ಬಿಡುವು ಮಾಡಿಕೊಂಡು ಬಿಗ್​ಬಾಸ್ ನೋಡುತ್ತೇನೆ ಎಂದು ಹರಿಪ್ರಿಯಾ ಹೇಳಿದರು.

For All Latest Updates

TAGGED:

ABOUT THE AUTHOR

...view details