ರಾಮಾ ರಾಮಾರೇ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಪ್ರತಿಭೆ ಧರ್ಮಣ್ಣ. ಸದ್ಯ ಕಾಣದಂತೆ ಮಾಯವಾದನು ಸಿನಿಮಾ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಕಡೂರಿನ ಹೈದ ಧರ್ಮಣ್ಣನಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ.
ತನ್ನ ಹುಟ್ಟೂರಿನಲ್ಲಿರುವ ಅಭಿಮಾನಿಗಳು ಹಾಗೂ ಸ್ನೇಹಿತರ ಜೊತೆ ಕೇಕ್ ಕಟ್ ಮಾಡುವ ಮೂಲಕ 35ನೇ ವರ್ಷದ ಹುಟ್ಟು ಹಬ್ಬವನ್ನ ಆಚರಿಸಿದ್ದಾರೆ. ತನ್ನ ವಿಭಿನ್ನ ಮ್ಯಾನರಿಸಂನಿಂದ ಪ್ರೇಕ್ಷಕರ ಮನ ಗೆದ್ದಿರುವ ಧರ್ಮಣ್ಣ ಬ್ಯಾಕ್ ಟೂ ಬ್ಯಾಕ್ ಸಿನಿಮಾಗಳನ್ನ ಮಾಡ್ತಿದ್ದಾರೆ.