ಕೊರೊನಾದಿಂದ ಸಾಕಷ್ಟು ತೊಂದರೆಗೆ ಸಿಲುಕಿರುವ ಚಿತ್ರರಂಗಕ್ಕೆ ಸರ್ಕಾರದ ಹೊಸ ನಿಯಮದಿಂದ ಮತ್ತೆ ನಿರಾಸೆಯಾಗಿದೆ. ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗೋದಕ್ಕೆ ಕ್ಯೂನಲ್ಲಿವೆ.
ಸಚಿವ ಆರ್. ಅಶೋಕ್ ಅವರಲ್ಲಿ ಮನವಿ ಈ ಹಿನ್ನೆಲೆ ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ನೇತೃತ್ವದ ನಿಯೋಗ ಇಂದು ಮುಖ್ಯಮಂತ್ರಿ ಅವರನ್ನ ಭೇಟಿ ಮಾಡಿ ಸಚಿವ ಆರ್. ಅಶೋಕ್ ಅವರಲ್ಲಿ ಮನವಿ ಮಾಡಿದೆ. ಸಚಿವರು ಸಿಎಂ ಜೊತೆ ಚರ್ಚಿಸಿ ಆದಷ್ಟು ಬೇಗ ಶುಭ ಸೂಚನೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಕೃಷ್ಣ, ಲವ್ ಮಾಕ್ಟೇಲ್ -2, ಜಗ್ಗೇಶ್ ಅವರ ತೋತಾಪುರಿ, ಓಲ್ಡ್ ಮಾಂಕ್ ಸೇರಿದಂತೆ ಹಲವು ಸಿನಿಮಾಗಳು ರಿಲೀಸ್ಗೆ ಪ್ಲಾನ್ ಮಾಡ್ತಿವೆ.
ಇದನ್ನೂ ಓದಿ:ಪುನೀತ್ ಪಾತ್ರಕ್ಕೆ ಡಬ್ಬಿಂಗ್ ಮಾಡೋದು ಕಷ್ಟ: ಶಿವಣ್ಣ
ಸ್ಯಾಂಡಲ್ವುಡ್ನಲ್ಲಿ ಸಾವಿರಾರು ಕೋಟಿ ವ್ಯವಹಾರ ನಡೆಯುತ್ತೆ. ಅದೆಲ್ಲದಕ್ಕೂ ಈಗ ಬ್ರೇಕ್ ಬಿದ್ದಿದೆ. ಈ ಹಿಂದೆ ಎರಡು ಅಲೆಗಳಲ್ಲಿ ಥಿಯೇಟರ್ ಬಂದ್ ಆಗಿ ಸಂಕಷ್ಟ ಎದುರಿಸಿದ್ದೀವಿ. ಚಿತ್ರೋದ್ಯಮ ಹೀಗೆ ಆದ್ರೆ ನಶಿಸಿಹೋಗುತ್ತೆ. ಅದಕ್ಕೆ ಸಿಎಂಗೆ ಮನವಿ ಪತ್ರ ಕೊಟ್ಟು, 100 ಪರ್ಸೆಂಟ್ ಆಕ್ಯುಪೆನ್ಸಿ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜಯರಾಜ್ ಹೇಳಿದ್ದಾರೆ. ಹೀಗಾಗಿ ಗಾಂಧಿನಗರದ ಮಂದಿಗೆ ಈ ವಾರದಲ್ಲಿ ಗುಡ್ ನ್ಯೂಸ್ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ