ಕರ್ನಾಟಕ

karnataka

ETV Bharat / sitara

SIIMA Awards 2021 Winners : ಒಂದೇ ವೇದಿಕೆಯಲ್ಲಿ ಪ್ರಶಸ್ತಿ ಪಡೆದುಕೊಂಡ 'ಕಿರಿಕ್​ ಪಾರ್ಟಿ' ಜೋಡಿ - ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

ಹೈದರಾಬಾದ್​ನಲ್ಲಿ ನಡೆದ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಸಮಾರಂಭದಲ್ಲಿ ಸ್ಯಾಂಡಲ್​ವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್​ನ ಬಹತೇಕ ಕಲಾವಿದರ ಈ ಸಮಾರಂಭದಲ್ಲಿ ಭಾಗಿಯಾಗಿದ್ದರು. ರಕ್ಷಿತ್ ಶೆಟ್ಟಿ, ರಚಿತಾ ರಾಮ್, ದರ್ಶನ್ ಮತ್ತು ಅನೇಕರು ಅಗ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ..

Gala SIIMA South Indian International Movie Award 2021
ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ

By

Published : Sep 20, 2021, 4:08 PM IST

ಹೈದರಾಬಾದ್ ​:ಗಾಲಾ ಸೈಮಾ (Gala SIIMA South Indian International Movie Award 2021) ಅವಾರ್ಡ್ 2021 ಪ್ರಶಸ್ರಿ ಪ್ರದಾನ ಸಮಾರಂಭ ಅದ್ದೂರಿಯಾಗಿ ಜರುಗಿತು. ಸ್ಯಾಂಡಲ್​ವುಡ್, ಟಾಲಿವುಡ್, ಮಾಲಿವುಡ್, ಕಾಲಿವುಡ್​ನ ಬಹತೇಕ ಕಲಾವಿದರು ಈ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಹೈದರಾಬಾದ್​ನಲ್ಲಿ ನಡೆದ ದಕ್ಷಿಣ ಭಾರತದ ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ (SIIMA) ಸಮಾರಂಭದಲ್ಲಿ ರಕ್ಷಿತ್ ಶೆಟ್ಟಿ, ರಚಿತಾ ರಾಮ್, ದರ್ಶನ್ ಮತ್ತು ಅನೇಕರು ಅಗ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಕನ್ನಡ ಚಿತ್ರರಂಗ (ಸ್ಯಾಂಡಲ್​ವುಡ್​):

  • ಅತ್ಯುತ್ತಮ ನಟ ಕ್ರಿಟಿಕ್ಸ್​ ಅವಾರ್ಡ್​ : ರಕ್ಷಿತ್​ ಶೆಟ್ಟಿ (ಅವನೇ ಶ್ರೀಮನ್ನಾರಾಯಣ)
  • ಅತ್ಯುತ್ತಮ ನಟಿ : ರಚಿತಾ ರಾಮ್​ (ಆಯುಷ್ಮಾನ್​ ಭವ)
  • ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್​ : ರಶ್ಮಿಕಾ ಮಂದಣ್ಣ (ಯಜಮಾನ)
  • ಅತ್ಯುತ್ತಮ ಹೊಸ ನಟ ಅಭಿಷೇಕ್​ ಅಂಬರೀಶ್​ (ಅಮರ್​)
  • ಅತ್ಯುತ್ತಮ ಪೋಷಕ ನಟಿ : ಕಾರುಣ್ಯ ರಾಮ್​ (ಮನೆ ಮಾರಾಟಕ್ಕಿದೆ)
  • ಅತ್ಯುತ್ತಮ ಚೊಚ್ಚಲ ನಿರ್ದೇಶನ : ಮಯೂರ ರಾಘವೇಂದ್ರ (ಕನ್ನಡ್​ ಗೊತ್ತಿಲ್ಲ)
  • ಅತ್ಯುತ್ತಮ ಹಾಸ್ಯ ಕಲಾವಿದ : ಸಾಧು ಕೋಕಿಲ (ಯಜಮಾನ)
  • ಅತ್ಯುತ್ತಮ ನಿರ್ದೇಶನ : ಹರಿಕೃಷ್ಣ, ಫೋನ್​ ಕುಮಾರ್​ (ಯಜಮಾನ)
  • ಅತ್ಯುತ್ತಮ ಖಳನಟ : ಸಾಯಿ ಕುಮಾರ್​ (ಭರಾಟೆ)
  • ಅತ್ಯುತ್ತಮ ಸಂಗೀತ ನಿರ್ದೇಶನ : ವಿ.ಹರಿಕೃಷ್ಣ (ಯಜಮಾನ)
  • ಅತ್ಯುತ್ತಮ ನೃತ್ಯ ನಿರ್ದೇಶನ : ಇಮ್ರಾನ್​ ಸರ್ದಾರಿಯಾ (ಅವನೇ ಶ್ರೀಮನ್ನಾರಾಯಣ)
  • ಅತ್ಯುತ್ತಮ ಹಿನ್ನೆಲೆ ಗಾಯಕಿ : ಅನನ್ಯಾ ಭಟ್​ (ಗೀತಾ- ಕೇಳದೇ ಕೇಳದೇ)
  • ಅತ್ಯುತ್ತಮ ಸಾಹಿತ್ಯ : ಪವನ್​ ಒಡೆಯರ್​ (ನಟಸಾರ್ವಭೌಮ)
  • ಅತ್ಯುತ್ತಮ ನಟ : ದರ್ಶನ್​ (ಯಜಮಾನ)

ತೆಲುಗು ಚಿತ್ರರಂಗ (ಟಾಲಿ​ವುಡ್​)

  • ಅತ್ಯುತ್ತಮ ನಟ : ಮಹೇಶ್​ ಬಾಬು (ಮಹರ್ಷಿ)
  • ಅತ್ಯುತ್ತಮ ನಿರ್ದೇಶಕ : ವಂಶಿ (ಮಹರ್ಷಿ)
  • ಎಂಟರ್​ಟೇನರ್​ ಆಫ್​ ದಿ ಇಯರ್​ : ನಾನಿ (ಜರ್ನಿ ಮತ್ತು ಗ್ಯಾಂಗ್​ ಲೀಡರ್)
  • ಅತ್ಯುತ್ತಮ ನಟಿ ಕ್ರಿಟಿಕ್ಸ್​ ಅವಾರ್ಡ್ ​: ರಶ್ಮಿಕಾ ಮಂದಣ್ಣ (ಡಿಯರ್ ಕಾಮ್ರೇಡ್​)
  • ಅತ್ಯುತ್ತಮ ಪೋಷಕ ನಟ : ಅಲ್ಲರಿ ನರೇಶ್​ (ಮಹರ್ಷಿ)
  • ಅತ್ಯುತ್ತಮ ಹಿನ್ನಲೆ ಗಾಯಕಿ : ಚಿನ್ಮಯಿ ಶ್ರೀಪಾದ್​
  • ಅತ್ಯುತ್ತಮ ಚೊಚ್ಚಲ ನಿರ್ದೇಶನ : ಸ್ವರೂಪ್​ ಆರ್​ಎಸ್​ಜೆ
  • ಅತ್ಯುತ್ತಮ ಹೊಸ ನಟ : ಶ್ರೀ ಸಿಂಹ
  • ಅತ್ಯುತ್ತಮ ಹೊಸ ನಟಿ : ಶಿವಾತ್ಮಿಕಾ ರಾಜಶೇಖರ್​ (ದೊರಸಾನಿ)

ABOUT THE AUTHOR

...view details