ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಯಿಂದ ಸಾವನ್ನಪ್ಪಿದ್ದಾರೆ ಎಂದು ಏಮ್ಸ್ ವರದಿ ನೀಡಿದೆ. ಈ ಹಿನ್ನೆಲೆ ಕಾಂಗ್ರೆಸ್ನ ಹಿರಿಯ ಮುಖಂಡ ಅಧೀರ್ ರಂಜನ್ ಚೌಧರಿ, ರಿಯಾ ಚಕ್ರವರ್ತಿಯನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ರಿಯಾ "ರಾಜಕೀಯ ಪಿತೂರಿಯ ಬಲಿಪಶು" ಎಂದು ಹೇಳಿದ್ದಾರೆ.
ರಿಯಾ ರಾಜಕೀಯ ಪಿತೂರಿಯ ಬಲಿಪಶು, ಕೂಡಲೇ ರಿಲೀಸ್ ಮಾಡಿ.. ಅಧೀರ್ ರಂಜನ್
ಸುಶಾಂತ್ ಸಿಂಗ್ ಸಾವು ನಮಗೂ ನೋವು ತರಿಸಿದೆ. ಹಾಗಂತಾ, ಈ ವಿಚಾರ ಇಟ್ಟುಕೊಂಡು ಒಂದು ಹೆಣ್ಣನ್ನು ಆರೋಪಿಸುವುದು ಸರಿಯಲ್ಲ..
ಈ ಬಗ್ಗೆ ಪ್ರತಿಕ್ರಿಯಿಸಿರುವ ಲೋಕಸಭಾ ಸದಸ್ಯ ಅಧೀರ್, ರಿಯಾ ನಿರಾಪರಾಧಿ. ಇವರನ್ನು ಯಾವುದೇ ಕಿರುಕುಳ ನೀಡದೆ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಬಿಜೆಪಿ ಬಗ್ಗೆ ಆರೋಪಿಸಿರುವ ಅವರು, ಸುಶಾಂತ್ ಸಾವು ಆತ್ಮಹತ್ಯೆ ಎಂದು ಹೇಳಿರುವ ಏಮ್ಸ್ ಬಗ್ಗೆ ಬಿಜೆಪಿ ಆರೋಪ ಮಾಡುತ್ತದೆ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ಸಾವು ನಮಗೂ ನೋವು ತರಿಸಿದೆ. ಹಾಗಂತಾ, ಈ ವಿಚಾರ ಇಟ್ಟುಕೊಂಡು ಒಂದು ಹೆಣ್ಣನ್ನು ಆರೋಪಿಸುವುದು ಸರಿಯಲ್ಲ ಎಂದಿದ್ದಾರೆ.
ಸದ್ಯ ರಿಯಾ ಎನ್‌ಸಿಬಿ ಎನ್‌ಡಿಪಿಎಸ್ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸುಶಾಂತ್ ಸಾವಿನ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ. ಜಾರಿ ನಿರ್ದೇಶನಾಲಯ ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಹಣ ವರ್ಗಾವಣೆ ಮತ್ತು ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದೆ. ಡ್ರಗ್ಸ್ ಮಾಫಿಯಾ ಸಂಬಂಧ ಎನ್‌ಸಿಬಿಯು ರಿಯಾ, ಶೋಯಿಕ್, ಮಿರಾಂಡಾ, ಸಾವಂತ್ ಅವರನ್ನು ಬಂಧಿಸಿದೆ.