ಕರ್ನಾಟಕ

karnataka

By

Published : May 19, 2020, 9:31 PM IST

ETV Bharat / sitara

ಚಿತ್ರೀಕರಣ ಚಟುವಟಿಕೆ ಆರಂಭಿಸಲು ಸಿಎಂ ಬಳಿ ಮನವಿ ಸಲ್ಲಿಸುತ್ತೇವೆ...ಡಿ.ಆರ್. ಜೈರಾಜ್​​​​​​​​​​​​​​​​​​

ಕನ್ನಡ ಚಿತ್ರರಂಗ ತೀವ್ರ ಸಂಕಷ್ಟದಲ್ಲಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಸರ್ಕಾರಕ್ಕೆ ಒತ್ತಡ ಹಾಕುವುದಿಲ್ಲ. ಲಾಕ್​​​ಡೌನ್​​​ ಮುಗಿದ ನಂತರ ಚಿತ್ರರಂಗ ಮೊದಲಿನಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ವಾಣಿಜ್ಯ ಮಂಡಳಿ ನಿಯೋಗ ತೆರಳಿ ಸಿಎಂ ಬಳಿ ಮನವಿ ಮಾಡುತ್ತೇವೆ ಎಂದು ಫಿಲ್ಮ್​ ಚೇಂಬರ್ ಅಧ್ಯಕ್ಷ ಡಿ.ಆರ್. ಜೈರಾಜ್ ಹೇಳಿದ್ದಾರೆ.

DR Jayraj
ಡಿ.ಆರ್. ಜೈರಾಜ್​​​​​​​​​​​​​​​​​​

ಲಾಕ್​​​ಡೌನ್​​​​ನಲ್ಲಿ ಕೆಲವೊಂದು ಸಡಿಲಿಕೆ ನೀಡಿ ಕೇಂದ್ರ ಸರ್ಕಾರ ಮೇ 31 ವರೆಗೂ 4 ನೇ ಹಂತದ ಲಾಕ್​​ಡೌನ್​​​​​ಗೆ ಆದೇಶ ನೀಡಿದೆ. ಅದರೆ ಥಿಯೇಟರ್, ಹೋಟೆಲ್, ಮಾಲ್​​​​ಗಳನ್ನು ತೆಗೆಯಲು ಅನುಮತಿ ನೀಡಿಲ್ಲ.

ಲಾಕ್​ಡೌನ್​ ವಿಸ್ತರಣೆಯಿಂದ ಚಿತ್ರೋದ್ಯಮ ಕೂಡಾ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು. ಮೇ 31 ನಾಲ್ಕನೇ ಹಂತದ ಲಾಕ್ ಡೌನ್ ಮುಗಿದ ನಂತರ ಚಿತ್ರರಂಗದ ಎಲ್ಲಾ ಕೆಲಸಕ್ಕೆ ಅನುಮತಿ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸುತ್ತೇವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಡಿ.ಆರ್​. ಜೈರಾಜ್ ಹೇಳಿದ್ದಾರೆ.

ಸದ್ಯಕ್ಕೆ ಕನ್ನಡ ಚಿತ್ರರಂಗ ತೀವ್ರ ಸಂಕಷ್ಟದಲ್ಲಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ನಾವು ಸರ್ಕಾರಕ್ಕೆ ಒತ್ತಡ ಹಾಕುವುದಿಲ್ಲ. ಲಾಕ್​​​ಡೌನ್​​​ ಮುಗಿದ ನಂತರ ಚಿತ್ರರಂಗ ಮೊದಲಿನಂತೆ ಕಾರ್ಯ ನಿರ್ವಹಿಸಲು ಅವಕಾಶ ನೀಡುವಂತೆ ವಾಣಿಜ್ಯ ಮಂಡಳಿ ನಿಯೋಗ ತೆರಳಿ ಸಿಎಂ ಬಳಿ ಮನವಿ ಮಾಡುತ್ತೇವೆ. ಈಗಾಗಲೇ ಹಲವು ನಿರ್ಮಾಪಕರು ತಮ್ಮ ಕಷ್ಟಗಳನ್ನು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಲಾಕ್​​​​​​​​​ಡೌನ್ ಹಿಂದಿನ ದಿನ ಚಿರಂಜೀವಿ ಸರ್ಜಾ ಅಭಿನಯದ 'ಶಿವಾರ್ಜುನ' ಚಿತ್ರ ರಿಲೀಸ್ ಆಗಿತ್ತು, ಆದರೆ ಸಿನಿಮಾ ಬಿಡುಗಡೆ ಆದ ಒಂದೇ ದಿನಕ್ಕೆ ಚಿತ್ರಮಂದಿರಗಳು ಬಂದ್ ಆದ ಕಾರಣ ನಿರ್ಮಾಪಕರಿಗೆ ತೀವ್ರ ನಷ್ಟವಾಗಿದೆ. ಆ ನಿರ್ಮಾಪಕರು ಕೂಡಾ ಮನವಿ ಸಲ್ಲಿಸಿದ್ದಾರೆ.

ಶೂಟಿಂಗ್ ಸಮಯದಲ್ಲಿ ಲಕ್ಷಾಂತರ ಜಿಎಸ್​​​​​​​​​​​ಟಿ ಪಾವತಿ ಮಾಡಿದ್ದೇವೆ, ಈಗ ನಮಗೆ ನಷ್ಟವಾಗಿದೆ. ಸರ್ಕಾರದಿಂದ ನೆರವು ಕೊಡಿಸಿ ಎಂದು ನಿರ್ಮಾಪಕರು ಮನವಿ ಮಾಡಿದ್ದಾರೆ. ಅದನ್ನು ಸರ್ಕಾರದ ಗಮನಕ್ಕೆ ತರುತ್ತೇವೆ. ಒಟ್ಟಿನಲ್ಲಿ ಶೀಘ್ರದಲ್ಲೇ ಎಲ್ಲಾ ವಲಯಗಳ ಜೊತೆ ಸಭೆ ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಉದ್ಯಮದ ಕೆಲಸವನ್ನು ಯಾವಾಗ ಆರಂಭಿಸಬೇಕು ಎಂಬ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಜೈರಾಜ್ ಹೇಳಿದ್ದಾರೆ.

ABOUT THE AUTHOR

...view details