ಕರ್ನಾಟಕ

karnataka

ETV Bharat / sitara

ಸ್ಯಾಂಡಲ್​​ವುಡ್​ ಡ್ರಗ್ಸ್ ಕೇಸ್ ಪ್ರಕರಣ...ರಾಗಿಣಿಗೆ ದೊರೆಯಲಿದ್ಯಾ ಜಾಮೀನು...?

ಡ್ರಗ್ಸ್ ಕೇಸ್ ಪ್ರಕರಣದ ಆರೋಪ ಎದುರಿಸುತ್ತಿರುವ ನಟಿ ರಾಗಿಣಿ ಉಸಿರಾಟ ಸಮಸ್ಯೆಯಿಂದಾಗಿ ನಿನ್ನೆಯಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಗಿಣಿ ಪೋಷಕರು ಕೂಡಾ ಮಗಳಿಗೆ ಜಾಮೀನು ಕೊಡಿಸಲು ಹರಸಾಹಸ ಮಾಡುತ್ತಿದ್ದಾರೆ.

Ragini
ರಾಗಿಣಿ

By

Published : Dec 25, 2020, 2:12 PM IST

ಬೆಂಗಳೂರು: ಸ್ಯಾಂಡಲ್​​​ವುಡ್​​​​​​​​​ ಡ್ರಗ್ ಕೇಸ್ ಪ್ರಕರಣದಲ್ಲಿ ಸಿಲುಕಿರುವ ರಾಗಿಣಿ ಮೊನ್ನೆಯಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಸಮಸ್ಯೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲವು ದಿನಗಳ ಹಿಂದೆ ಸಂಜನಾ ಗಲ್ರಾನಿ ಕೂಡಾ ಅನಾರೋಗ್ಯದ ಸಮಸ್ಯೆ ಕಾಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಜಾಮೀನು ಪಡೆದು ಹೊರಬಂದಿದ್ದರು.

ಇದನ್ನೂ ಓದಿ: ನಟಿ ರಾಗಿಣಿಗೆ ಆರೋಗ್ಯ ಸಮಸ್ಯೆ...ಜೈಲಿನಿಂದ ಖಾಸಗಿ ಆಸ್ಪತ್ರೆಗೆ ದಾಖಲು

ಇದೀಗ ರಾಗಿಣಿ ಕೂಡಾ ಜಾಮೀನು ಪಡೆದು ಹೊರ ಬರಲು ಪ್ರಯತ್ನಿಸುತ್ತಿದ್ದಾರೆ. NDPS ಹಾಗೂ ಹೈಕೋರ್ಟ್ ಎರಡೂ ಜಾಮೀನು ವಜಾ ಮಾಡಿದ ಹಿನ್ನೆಲೆ ರಾಗಿಣಿ ಜಾಮೀನಿಗಾಗಿ ಈಗಾಗಲೇ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ಸಂಜನಾಗೆ ಹೈ ಕೋರ್ಟ್​ನಲ್ಲೇ ಜಾಮೀನು ದೊರೆತಿದೆ. 2 ದಿನಗಳ ಹಿಂದೆ ರಾಗಿಣಿ ಪೋಷಕರು ಸಿಸಿಬಿ ಅಧಿಕಾರಿಗಳನ್ನು ಭೇಟಿ ಮಾಡಿ ಜಾಮೀನಿನ ವಿಚಾರವಾಗಿ ಮಾಹಿತಿ ಪಡೆಯಲು ಯತ್ನಿಸಿದ್ದಾರೆ. ಆದರೆ ಸಿಸಿಬಿ ಅಧಿಕಾರಿಗಳು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ. ರಾಗಿಣಿಗೆ ಇದಕ್ಕೂ ಮುನ್ನ ಉಸಿರಾಟದ ಸಮಸ್ಯೆ ಇತ್ತು. ಆಗಲೂ ನಾವು ಆಕೆಗೆ ಚಿಕಿತ್ಸೆ ಕೊಡಿಸಿದ್ದೆವು ಎಂದು ಸಿಸಿಬಿ ಅಧಿಕಾರಿಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಸಂಜನಾ ಅವರಂತೆ ರಾಗಿಣಿ ಕೂಡಾ ಜಾಮೀನು ಪಡೆದು ಜೈಲಿನಿಂದ ಹೊರಬರಲಿದ್ದಾರಾ ಎಂಬುದನ್ನು ಕಾದು ನೋಡಬೇಕು.

ABOUT THE AUTHOR

...view details