ಬೆಂಗಳೂರು: ಮದಗಜ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರೋ ಬಹು ನಿರೀಕ್ಷಿತ ಚಿತ್ರ. ಪೋಸ್ಟರ್‌ನಿಂದಲೇ ಸ್ಯಾಂಡಲ್ವುಡ್ನಲ್ಲಿ ಟಾಕ್ ಆಗುತ್ತಿದ್ದ ಮದಗಜ ಚಿತ್ರತಂಡ, ಯುಗಾದಿ ಹಬ್ಬಕ್ಕೆ ಟೀಸರೊಂದನ್ನ ಅನಾವರಣ ಮಾಡಿದೆ.
ಶ್ರೀಮುರಳಿ ಲುಕ್ ಹಾಗೂ ಪೋಸ್ಟರ್ ನೋಡಿದಾಗ, ಇದೊಂದು ಭರ್ಜರಿ ಆ್ಯಕ್ಷನ್ ಸಿನಿಮಾ ಅಂತ ಅಂದುಕೊಂಡಿದ್ದರು. ಆದರೆ, ಚಿತ್ರದಲ್ಲಿ ಕಲರ್‌ಫುಲ್ ಲವ್ ಸ್ಟೋರಿ ಸಹ ಇದೆ. ಇದಕ್ಕೆ ಉತ್ತರ ಎಂಬಂತೆ ಯುಗಾದಿ ಹಬ್ಬಕ್ಕೆ ರಿಲೀಸ್ ಮಾಡಿರುವ ರೊಮ್ಯಾಂಟಿಕ್ ಟೀಸರ್ ಇದಾಗಿದೆ.
ಮದಗಜ ಚಿತ್ರದಲ್ಲಿ ನಾಯಕಿಯ ಲುಕ್ ಹೇಗಿರುತ್ತೆ, ಆಕೆಯ ಪಾತ್ರವೇನು ಎಂಬುದರ ಬಗ್ಗೆ ಕುತೂಹಲ ಇತ್ತು. ಈಗ ಆಶಿಕಾ ರಂಗನಾಥ್‌ರ ಲುಕ್ ಮತ್ತು ಪಾತ್ರದ ವಿವರ ಈ ಟೀಸರ್‌ನಲ್ಲಿ ಅನಾವರಣಗೊಂಡಿದೆ. ನಿರ್ದೇಶಕ ಮಹೇಶ್ ಕುಮಾರ್ ಹೇಳುವ ಹಾಗೆ ಮದಗಜ ಆ್ಯಕ್ಷನ್ ಸಿನಿಮಾ ಎಂದುಕೊಂಡಿದ್ದರು. ಆದರೆ, ಈ ಸಿನಿಮಾದಲ್ಲಿ ಒಂದು ಸುಂದರ ಪ್ರೇಮಕಥೆಯೂ ಇದೆ.
ಆ ಪ್ರೇಮಕಥೆಯ ಒಂದು ಝಲಕ್ ಈ ಟೀಸರ್ ಅಂತಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಮದಗಜ ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ. ನವೀನ್ ಕುಮಾರ್ ಕ್ಯಾಮೆರಾ ವರ್ಕ್ ಹಾಗೂ ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದೆ. ಅದ್ದೂರಿ ವೆಚ್ಚದಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ನಿರ್ಮಾಣ ಮಾಡಿದ್ದಾರೆ. ಸದ್ಯ ಮದಗಜ ಸಿನಿಮಾದ ಈ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.