'ಏಕ್ ಲವ್ ಯಾ' (ekloveya)ಸ್ಯಾಂಡಲ್ವುಡ್ನಲ್ಲಿ ಒಂದಲ್ಲ ಒಂದು ವಿಷ್ಯಕ್ಕೆ ಸದ್ದು ಮಾಡ್ತಿರೋ ಸಿನಿಮಾ. ನಿರ್ದೇಶಕ ಜೋಗಿ ಪ್ರೇಮ್(Jogi Prem) ನಿರ್ದೇಶನದ ಏಕ್ ಲವ್ ಯಾ ಸಿನಿಮಾದ 'ಎಣ್ಣೆಗೂ ಹೆಣ್ಣಿಗೂ ಏನು ಸಂಬಂಧ' ಎಂಬ ಹಾಡನ್ನ ನಿನ್ನೆ ಖಾಸಗಿ ಹೋಟೆಲ್ನಲ್ಲಿ ಬಿಡುಗಡೆ ಮಾಡಲಾಯಿತು. ಮೊದಲಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ (Power star Puneeth Rajkumar)ಭಾವಚಿತ್ರಕ್ಕೆ ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ ಪ್ರೇಮ್(Rakshitha Prem), ಸಹೋದರ ರಾಣಾ ಹಾಗೂ ನಟಿಯರಾದ ರೀಷ್ಮಾ ನಾಣಯ್ಯ ಪುಷ್ಪ ನಮನ ಅರ್ಪಿಸಿದರು.
ಆದರೆ, ಅದೇ ವೇದಿಕೆಯಲ್ಲಿ ಪುನೀತ್ ಭಾವಚಿತ್ರದ ಎದುರು ಚಿತ್ರತಂಡದವರು ಶಾಂಪೇನ್ ಬಾಟಲ್ (champagne bottle )ತೆರೆದು ಸಂಭ್ರಮಾಚರಣೆ ಮಾಡಿ ಹಾಡು ಬಿಡುಗಡೆ ಮಾಡಿದ್ರು. ಇದು ಪುನೀತ್ ರಾಜ್ಕುಮಾರ್ ಅಭಿಮಾನಿಗಳು ಹಾಗೂ ರಾಜ್ಕುಮಾರ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.
ಪುನೀತ್ ನಿಧನರಾಗಿ 16 ದಿನಗಳು ಕಳೆಯುತ್ತಿವೆ. ಅಪ್ಪು ಕುಟುಂಬ ಹಾಗೂ ಅಭಿಮಾನಿಗಳು ನೋವಿನಲ್ಲಿದ್ದಾರೆ. ಇಂತಹ ಸಮಯದಲ್ಲಿ ಏಕ್ ಲವ್ ಯಾ ಚಿತ್ರತಂಡ, ಪುನೀತ್ ಭಾವಚಿತ್ರದ ಮುಂದೆ ಶಾಂಪೇನ್ ಓಪನ್ ಮಾಡಿ ಅವಮಾನ ಮಾಡಿರೋದು ಅವ್ರ ಅಭಿಮಾನಿಗಳ ನೋವಿಗೆ ಕಾರಣವಾಗಿತ್ತು.
ಈ ಬಗ್ಗೆ ಪ್ರತಿಕ್ರಿಯಿಸಿರೋ ನಿರ್ದೇಶಕ ಜೋಗಿ ಪ್ರೇಮ್(Director Jogi prem), ಆ ಸಂದರ್ಭದಲ್ಲಿ ಶಾಂಪೇನ್ ಬಾಟಲ್ ಓಪನ್ ಮಾಡಿ, ಸಂಭ್ರಮಾಚರಣೆ ಮಾಡಿದರೆ ಜನರಿಗೆ ಹಾಗೂ ಅಪ್ಪು ಅಭಿಮಾನಿಗಳಿಗೆ ನೋವುಂಟಾಗಬಹುದು ಎಂಬ ಅರಿವು ಇರಲಿಲ್ಲ ಎಂದಿದ್ದಾರೆ.