ಕರ್ನಾಟಕ

karnataka

ETV Bharat / sitara

ಕಿರುತೆರೆ ಸಮಾಚಾರ: ಶೈನ್​​ ಶೆಟ್ಟಿ ಬಗ್ಗೆ ದೀಪಿಕಾ ದಾಸ್ ಹೇಳಿದ್ದೇನು?​​​ - ಶೈನ್​ ಶೆಟ್ಟಿ ಮತ್ತು ದೀಪಿಕಾ ದಾಸ್​​ ಸುದ್ದಿ

ಬಿಗ್‌ಬಾಸ್‌ ಸೀಸನ್ 7ರ ಸ್ಪರ್ಧಿಗಳಾದ ದೀಪಿಕಾ ದಾಸ್ ಹಾಗು ಶೈನ್ ಶೆಟ್ಟಿ ಅವರ ನಡುವಿನ ಒಡನಾಟ ದೊಡ್ಮನೆಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಅದೆಷ್ಟರ ಮಟ್ಟಿಗೆ ಎಂದರೆ, ಇವರಿಬ್ಬರು ಪ್ರೀತಿಯಲ್ಲಿದ್ದಾರಾ? ಎಂದು ವೀಕ್ಷಕರು ಕೇಳುತ್ತಿದ್ದರು.

deepika das speak about shine shetty
deepika das speak about shine shetty

By

Published : Dec 23, 2020, 3:33 PM IST

ಬಿಗ್ ಬಾಸ್ ಎಂದರೆ ಅದು ವಿವಾದಗಳ ಶೋ ಅಂತಲೇ ಕರೆಯಲ್ಪಟ್ಟಿದೆ. ಜಗಳ, ಪ್ರೀತಿ, ವಿವಾದ ತಳಕು ಹಾಕಿಕೊಳ್ಳುವುದು ಈ ಮನೆಯಲ್ಲಿ ಕಾಮನ್. ಕಳೆದ ಸೀಸನ್​​​ನಲ್ಲಿಯೂ ಅಷ್ಟೇ!. ಬಿಗ್ ಬಾಸ್ ಹಲವು ವಿಷಯಗಳಿಗೆ ಸುದ್ದಿಯಾಗಿತ್ತು.

ಅದರಲ್ಲೂ ಸೀಸನ್ 7ರ ಸ್ಪರ್ಧಿಗಳಾದ ದೀಪಿಕಾ ದಾಸ್ ಹಾಗು ಶೈನ್ ಶೆಟ್ಟಿ ಅವರ ಒಡನಾಟ ದೊಡ್ಮನೆಯಲ್ಲಿ ಸಾಕಷ್ಟು ಸುದ್ದಿಯಾಗಿತ್ತು. ಇವರಿಬ್ಬರ ಒಡನಾಟ ಕಿರುತೆರೆ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿತ್ತು. ಅದೆಷ್ಟು ಎಂದರೆ ಇವರಿಬ್ಬರೂ ಪ್ರೀತಿಯಲ್ಲಿದ್ದಾರಾ? ಎಂದು ವೀಕ್ಷಕರು ಕೇಳುತ್ತಿದ್ದರು.

ಶೈನ್​​ ಶೆಟ್ಟಿ

ಓದಿ: ಗೋವಾ ಕಡಲ ತೀರದಲ್ಲಿ ಎಂಜಾಯ್ ಮಾಡುತ್ತಿರುವ ಮುದ್ದುಲಕ್ಷ್ಮಿ

ಈ ಬಗ್ಗೆ ಮಾತನಾಡಿರುವ ದೀಪಿಕಾ, ನಮ್ಮಿಬ್ಬರ ನಡುವೆ ಉತ್ತಮ ಗೆಳೆತನವಿದೆ ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡದಲ್ಲಿ ಚಂದು ಗೌಡ ನಿರೂಪಣೆಯಲ್ಲಿ ಮೂಡಿ ಬರುತ್ತಿರುವ ಚಾಟ್ ಕಾರ್ನರ್ ಶೋ ನಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ.

ದೀಪಿಕಾ ದಾಸ್​​​

'ನಾವಿಬ್ಬರು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡುವುದಿಲ್ಲ. ಯಾಕೆಂದರೆ ಅಲ್ಲಿ ಎಲ್ಲಾ ವಿಚಾರಗಳು ಬಲುಬೇಗ ವೈರಲ್ ಆಗುವ ಕಾರಣದಿಂದ ಹಂಚಿಕೊಳ್ಳುವುದಿಲ್ಲ ಎಂದಿದ್ದಾರೆ. ಇದರ ಹೊರತಾಗಿ ವೈಯಕ್ತಿಕ ಜೀವನದಲ್ಲಿ ಯಾವುದಾದರೂ ಪ್ರಪೋಸಲ್ ಬಂದಿದೆಯಾ? ಎಂಬ ಚಂದು ಅವರ ಪ್ರಶ್ನೆಗೆ ಉತ್ತರಿಸಿರುವ ದೀಪಿಕಾ, 'ಇಲ್ಲ' ಎಂದು ಹೇಳಿದ್ದಾರೆ.

ದೀಪಿಕಾ ದಾಸ್​​​

For All Latest Updates

ABOUT THE AUTHOR

...view details