ಕರ್ನಾಟಕ

karnataka

By

Published : Oct 15, 2019, 12:01 PM IST

Updated : Oct 15, 2019, 1:09 PM IST

ETV Bharat / sitara

ಗೋವಾ ಇಂಟರ್​ನ್ಯಾಷನಲ್​ ಫಿಲ್ಮ್​ ಫೆಸ್ಟಿವಲ್​​ಗೆ ಹೊರಟ ರಂಗನಾಯಕಿ

ನವೆಂಬರ್ 1ಕ್ಕೆ ರಂಗನಾಯಕಿ ಸಿನಿಮಾ‌ ರಿಲೀಸ್ ಆಗುತ್ತಿದೆ. ನಂತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಸ್ಕ್ರೀನ್ ಆಗ್ತಾ ಇರೋ ಈ ವರ್ಷದ ಮೊದಲ‌ ಕನ್ನಡ ಸಿನಿಮಾ ಆಗಿದೆ.

ರಂಗನಾಯಕಿ

ನಿರ್ದೇಶಕ ದಯಾಳ್‌ ಪದ್ಮನಾಭನ್‌ ನಿರ್ದೇಶನದಲ್ಲಿ ಮೂಡಿಬಂದಿರುವ ಚಿತ್ರ ರಂಗನಾಯಕಿ. ರಿಲೀಸ್​ಗೂ ಮುಂಚೆ, ಇಂಡಿಯನ್‌ ಪನೋರಮಾ ವಿಭಾಗದ ಸ್ಕ್ರೀನ್​ನಲ್ಲಿ ತೆರೆಕಾಣಲು ಆಯ್ಕೆ ಆಗಿರೋದು ಚಿತ್ರತಂಡಕ್ಕೆ ಖುಷಿ ತರಿಸಿದೆ.

ರಂಗನಾಯಕಿ

ಈ ಸಂತಸವನ್ನು ನಿರ್ದೇಶಕ ದಯಾಳ್ ಪದ್ಮಾನಾಭನ್, ನಟರಾದ ಶ್ರೀನಿ, ತ್ರಿವಿಕ್ರಮ್ ಹಾಗೂ ನಿರ್ಮಾಪಕ ಎಸ್.ವಿ. ನಾರಾಯಣ್ ಕೇಕ್ ಕತ್ತರಿಸುವ ಮೂಲಕ ಹಂಚಿಕೊಂಡ್ರು.

ನವೆಂಬರ್ 1ಕ್ಕೆ ರಂಗನಾಯಕಿ ಸಿನಿಮಾ‌ ಬಿಡುಗಡೆ ಆಗುತ್ತಿದೆ. ನಂತ್ರ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ-2019ರಲ್ಲಿ ಪ್ರದರ್ಶನ ಕಾಣುತ್ತಿರುವ ಈ ವರ್ಷದ ಮೊದಲ‌ ಕನ್ನಡ ಸಿನಿಮಾ ಅನ್ನೋದು ಹೆಮ್ಮೆಯ ವಿಷಯ ಎಂದು ನಿರ್ದೇಶಕ ದಯಾಳ್ ಪದ್ಮಾನಾಭನ್ ಹೇಳಿದ್ರು.

ಮಹಿಳಾ ಪ್ರಧಾನ ಕಥಾಹಂದರ ಹೊಂದಿರುವ ರಂಗನಾಯಕಿ ಚಿತ್ರದಲ್ಲಿ ಅದಿತಿ ಪ್ರಭುದೇವ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಶ್ರೀನಿ, ತ್ರಿವಿಕ್ರಮ್‌, ಶಿವಾರಾಂ, ಸುಚೇಂದ್ರ ಪ್ರಸಾದ್‌, ಸುಂದರ್‌, ವೀಣಾ ಸುಂದರ್‌, ಶೃತಿ ನಾಯಕ್‌ ಮುಂತಾದವರು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇನ್ನು, ಈ ಚಿತ್ರ ರಿಲೀಸ್​ಗೂ ಮುಂಚೆ ಚಿತ್ರರಂಗದ ಮಹಿಳಾ ನಟಿಯರಿಗಾಗಿ ಒಂದು ಸ್ಪೆಷಲ್ ಶೋ ಕೂಡ ನಡೆಸಲು ನಿರ್ದೇಶಕ ದಯಾಳ್ ಪದ್ಮಾನಾಭನ್ ಪ್ಲಾನ್ ಮಾಡಿದ್ದಾರಂತೆ.

ಎಸ್.ವಿ. ನಾರಾಯಣ್ 90 ಲಕ್ಷ ರೂಪಾಯಿ ಬಜೆಟ್​ನಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಮಣಿಕಾಂತ್‌ ಕದ್ರಿ ಸಂಗೀತ ಸಂಯೋಜನೆಯಿದ್ದು, ರಾಕೇಶ್‌ ಛಾಯಾಗ್ರಹಣ, ಸುನೀಲ್‌ ಕಶ್ಯಪ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ನವೀನ್‌ ಕೃಷ್ಣ ರಂಗನಾಯಕಿಗೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಮುಂದಿನ ತಿಂಗಳು ಗೋವಾ ಫೆಸ್ಟಿವಲ್​ನಲ್ಲಿ ರಂಗನಾಯಕಿ ವ್ಯಾಲ್ಯೂಮ್ ವರ್ಜಿನಿಟಿ ಸಿನಿಮಾ ಪ್ರದರ್ಶನ ಆಗಲಿದೆ.

Last Updated : Oct 15, 2019, 1:09 PM IST

ABOUT THE AUTHOR

...view details