ರೈತನನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಈ ಕಾರಣಕ್ಕಾಗಿ ಎಲ್ಲರಿಗೂ ಅನ್ನ ನೀಡುವ ಈ ರೈತನಿಗೆ ಈ ದಿನವನ್ನು ಅರ್ಪಿಸಿ ವಿಶ್ವ ರೈತ ದಿನವನ್ನಾಗಿ ಡಿಸೆಂಬರ್ 23ನ್ನು ಆಚರಿಸಲಾಗುತ್ತದೆ.
ರೈತರಿಗೆ ಸದಾ ನನ್ನ ಸಲಾಂ ಎಂದ ದಾಸ
ಚಾಲೆಂಜಿಂಗ್ ಸ್ಟಾರ್ ದರ್ಶನ್, ಉಳುವ ಯೋಗಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ ರೈತರ ಬಗ್ಗೆ ಬರೆದಿರುವ ದರ್ಶನ್, ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ ಎಂದು ಬರೆದಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್
ಇಂದು ಎಲ್ಲರೂ ರೈತ ದಿನದ ಶುಭಾಶಯಗಳನ್ನು ಕೋರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉಳುವ ಯೋಗಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಹೌದು, ಟ್ವೀಟ್ನಲ್ಲಿ ರೈತರ ಬಗ್ಗೆ ಬರೆದಿರುವ ದರ್ಶನ್, ಬಲಿಷ್ಠ ರೈತರಿಂದ ಸದೃಢ ದೇಶ ನಿರ್ಮಾಣವಾಗುತ್ತದೆ. ರೈತರು ಚೆನ್ನಾಗಿದ್ದರೆ ಮಾತ್ರ ನಮ್ಮ ಹೊಟ್ಟೆಗೆ ಕೂಳು ಸಿಗುತ್ತದೆ. ದೇಶದ ಬೆನ್ನೆಲುಬಾಗಿ ನಿಂತಿರುವ ರೈತರಿಗೆ ಸದಾ ನನ್ನ ಸಲಾಂ. ನಿಮ್ಮ ದಾಸ ದರ್ಶನ್ ಎಂದು ಬರೆದಿದ್ದಾರೆ.