ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಚಿತ್ರ ಇದೇ ಮಾರ್ಚ್ 11ಕ್ಕೆ ಕನ್ನಡ ಮತ್ತು ತೆಲುಗಿನಲ್ಲಿಏಕ ಕಾಲದಲ್ಲಿಯೇ ರಿಲೀಸ್ ಆಗಲು ರೆಡಿ ಇದೆ. ಆದ್ರೆ, ಇದೀಗ ತೆಲುಗಿನವರು ಈ ಬಗ್ಗೆ ಗೊಣಗುತ್ತಿದ್ದು, ದರ್ಶನ್ ಫಿಲ್ಮ್ ಚೇಂಬರ್ ಮೆಟ್ಟಿಲೇರಿದ್ದಾರೆ.
ರಾಬರ್ಟ್ ರಿಲೀಸ್‌ಗೆ ತೆಲುಗಿನವರ ಗೊಣಗಾಟ.. ನಾವ್ ಸುಮ್ನೇ ಇದ್ರಾಗಲ್ಲ.. ಗುಡುಗಿದ 'ಗಜ' - ಫೆಲ್ಮ್ ಚೇಂಬರ್ನಲ್ಲಿ ದರ್ಶನ್
ನಿರ್ಮಾಪಕರಿಗೆ ಸಮಸ್ಯೆ ಬಂದಾಗ ನಾನು ಯಾವತ್ತೂ ಮುಂದೆ ಬರುತ್ತೇನೆ. ಅವರಿಗೆ ಒಳ್ಳೆದಾಗಲಿ ಎಂಬುದು ನನ್ನ ಉದ್ದೇಶ ಎಂದಿದ್ದಾರೆ. ನಮ್ಮಲ್ಲಿ ಭಾಷಾಭಿಮಾನ ಕಡಿಮೆ ಇದೆ. ಬೇರೆಯವರು ಇಲ್ಲಿಗೆ ಬಂದಾಗ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ನಾವು ಸುಮ್ಮನೆ ಇದ್ದರೇ ಏನೂ ಆಗಲ್ಲ..
ಫಿಲ್ಮ್ ಚೇಂಬರ್ಗೆ ಹೋಗುವಾಗ ಮಾತನಾಡಿದ ದರ್ಶನ್, ''ನಾವು ಬರ್ತಿದ್ದೀವಿ ಅಂದಾಗ ಅವರಿಗೆ ಹೆದರಿಕೆ ಇದ್ಯಾ? ನೀವೆಲ್ಲ ಬಂದು ಮಾರ್ಕೆಟ್ ಇಡ್ಕೊಂಡ್ರೆ ನಮ್ಮ ಹೀರೋಗಳು ಎಲ್ಲಿಗೆ ಹೋಗ್ಬೇಕು? ನಾನೇನೋ ಸಿನಿಮಾ ಇಂಡಸ್ಟ್ರಿಯಲ್ಲಿ 50 ಸಿನಿಮಾಗಳನ್ನು ಮಾಡಿದ್ದೇನೆ. ಆದ್ರೆ, ಯುವ ಕಲಾವಿದರು ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ನಿರ್ಮಾಪಕರಿಗೆ ಸಮಸ್ಯೆ ಬಂದಾಗ ನಾನು ಯಾವತ್ತೂ ಮುಂದೆ ಬರುತ್ತೇನೆ. ಅವರಿಗೆ ಒಳ್ಳೆದಾಗಲಿ ಎಂಬುದು ನನ್ನ ಉದ್ದೇಶ ಎಂದಿದ್ದಾರೆ. ನಮ್ಮಲ್ಲಿ ಭಾಷಾಭಿಮಾನ ಕಡಿಮೆ ಇದೆ. ಬೇರೆಯವರು ಇಲ್ಲಿಗೆ ಬಂದಾಗ ನಾವು ಅವರ ಭಾಷೆಯಲ್ಲೇ ಮಾತನಾಡುತ್ತೇವೆ. ನಾವು ಸುಮ್ಮನೆ ಇದ್ದರೇ ಏನೂ ಆಗಲ್ಲ. ಇವಾಗ ಫಿಲ್ಮ್ ಚೇಂಬರ್ಗೆ ನಮ್ಮ ಸಮಸ್ಯೆ ಹೇಳಿದ್ದೇವೆ. ಅವರು ಬಗೆಹರಿಸುವ ಆಶ್ವಾಸನೆ ನೀಡಿದ್ದಾರೆ ಎಂದರು.