ಕರ್ನಾಟಕ

karnataka

ETV Bharat / sitara

ಚಾಲೆಂಜಿಂಗ್​ ಸ್ಟಾರ್​ ದರ್ಶನ್ ಹೊಸ ನಿರ್ಧಾರ ಏನು ಗೊತ್ತಾ? - ದರ್ಶನ್​ ಲೇಟೆಸ್ಟ್​ ನ್ಯೂಸ್​

ನಾನು ಚಿತ್ರೀಕರಣಕ್ಕೆ ಹೊರಡುವ ಮುಂಚೆ ಚಿತ್ರಮಂದಿರಗಳು ಓಪನ್ ಆಗಬೇಕು. ಇದು ನನ್ನ ವೈಯಕ್ತಿಕ ನಿರ್ಧಾರ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಶುರು ಮಾಡಿದ್ದಾರೆ ಅಂದ ಮೇಲೆ ನಾವು ಚಿತ್ರೀಕರಣ ಮಾಡುವುದರಲ್ಲಿ ಅರ್ಥವಿದೆ ಎಂದು ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಾರೆ.

darshan
darshan

By

Published : Jun 26, 2020, 10:41 AM IST

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಈ ಲಾಕ್​ಡೌನ್ ಸಮಯದಿಂದ ಪ್ರೇಕ್ಷಕರು ಮನರಂಜನಾ ಕ್ಷೇತ್ರವನ್ನು ಮತ್ತೆ ಪ್ರೋತ್ಸಾಹಿಸಲಿದ್ದಾರೆ ಎಂಬ ಆಶಾಭಾವನೆ ಹೊಂದಿದ್ದಾರೆ. ಆದರೆ ಅವರು ಒಂದು ಪ್ರಮುಖ ನಿರ್ಧಾರಕ್ಕೆ ಬಂದಿದ್ದಾರೆ.

ನಾನು ಚಿತ್ರೀಕರಣಕ್ಕೆ ಹೊರಡುವ ಮುಂಚೆ ಚಿತ್ರಮಂದಿರಗಳು ಓಪನ್ ಆಗಬೇಕು. ಇದು ನನ್ನ ವೈಯಕ್ತಿಕ ನಿರ್ಧಾರ. ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲು ಶುರು ಮಾಡಿದ್ದಾರೆ ಅಂದ ಮೇಲೆ ನಾವು ಚಿತ್ರೀಕರಣ ಮಾಡುವುದರಲ್ಲಿ ಅರ್ಥವಿದೆ ಎನ್ನುವ ಡಿ ಬಾಸ್ ದರ್ಶನ್ ಯೋಚಿಸಿರುವ ರೀತಿಯಲ್ಲೇ ಗುರುವಾರ ತೆಲುಗು ಸಿನಿಮಾ ಉದ್ಯಮ ಸಹ ಯೋಚಿಸಿದೆ.

ಚ್ಯಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸ ನಿರ್ಧಾರ

100ಕ್ಕೂ ಹೆಚ್ಚು ದಿನಗಳಿಂದ ಚಿತ್ರಮಂದಿರಗಳು ಬಂದ್ ಆಗಿವೆ. ಈಗ ಮತ್ತೆ ಚಿತ್ರಮಂದಿರಗಳು ತೆರೆಯಬೇಕು ಅಂದ್ರೆ ಕೆಲವು ಹೊಸ ಹಾಗೂ ಹಳೆಯ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಿ ಪ್ರೇಕ್ಷಕರ ಮೂಡ್ ಅರಿಯಬೇಕು ಎಂದು ತೆಲುಗು ಚಿತ್ರರಂಗ ಹೇಳುತ್ತಿದೆ.

ಕನ್ನಡದಲ್ಲಿ ಡಿ ಬಾಸ್ ದರ್ಶನ್ ಇದನ್ನೇ ಹೇಳಿದ್ದು, ಅವರ ಅಭಿಪ್ರಾಯಕ್ಕೆ ಸಹೋದ್ಯೋಗಿಗಳು ಏನಂತಾರೆ ಎಂದು ಕಾದು ನೋಡಬೇಕಿದೆ. ಸದ್ಯಕ್ಕೆ ರಾಬರ್ಟ್ ಸಿನಿಮಾ ಬಹುತೇಕ ಸಿದ್ಧವಾಗಿದ್ದರೂ ಚಿತ್ರದ ನಿರ್ಮಾಪಕ ಉಮಾಪತಿ ಅವರು ಈ ವರ್ಷದ ಕೊನೆಯಲ್ಲೇ ಸಿನಿಮಾ ಬಿಡುಗಡೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಇತ್ತ ದರ್ಶನ್ ಅವರು ‘ರಾಜ ವೀರ ಮದಕರಿ ನಾಯಕ’ ಸಿನಿಮಾ ಚಿತ್ರೀಕರಣ ಶುರು ಆಗಬೇಕು ಅಂದರೆ ಮೊದಲು ಸಿನಿಮಾಗಳು ಬಿಡುಗಡೆ ಆಗಲಿ. ಆಮೇಲೆ ಚಿತ್ರೀಕರಣಕ್ಕೆ ಹೊರಡೋಣ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

ಒಟ್ಟಿನಲ್ಲಿ ಸಿನಿಮಾಗಳು ಬಿಡುಗಡೆ ಆಗಿದೆ ಅಂತ ಆದ ಮೇಲೆ ಮರುದಿನವೇ ನಾನು ಚಿತ್ರೀಕರಣಕ್ಕೆ ಹಾಜರಾಗುತ್ತೇನೆ ಎಂದು ದರ್ಶನ್ ಹೇಳಿರುವುದಕ್ಕೆ ಯಾವ ರೀತಿ ಪ್ರತಿಕ್ರಿಯೆ ಬರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details